ಉಕ್ರೇನ್ ನಲ್ಲಿ ಸಂಪರ್ಕಕ್ಕೆ ಸಿಗದ ಮುಂಡಗೋಡಿನ ನಾಝಿಯಾ! ಉಳಿದವರು ಎಲ್ಲಿದ್ದಾರೆ ಗೊತ್ತಾ?

1064

ಕಾರವಾರ :- ರಷ್ಯ ಉಕ್ರೇನ್ ಯುದ್ದ ಪ್ರಾರಂಭವಾಗಿ ಏಳುದಿನಗಳಾಗಿದ್ದು ಇದೀಗ ಹಾವೇರಿಯ ನವೀನ್ ಸಾವಿನ ನಂತರ ಉತ್ತರ ಕನ್ನಡ ಜಿಲ್ಲೆಯ ಇಬ್ಬರು ವೈದ್ಯಕೀಯ ವಿದ್ಯಾರ್ಥಿನಿಯರ ಜೀವಕ್ಕು ಕಂಟಕ ತೊಂದೊಡ್ಡಿದ್ದು ಓರ್ವ ವಿದ್ಯಾರ್ಥಿನಿಯರು ಸಂಪರ್ಕಕ್ಕೆ ಸಿಗದೇ ಕುಟುಂಬ ವರ್ಗದಲ್ಲಿ ಆತಂಕ ಸೃಷ್ಟಿಯಾಗಿದೆ.

ಉತ್ತರ ಕನ್ನಡ ಜಿಲ್ಲೆಯ ನಾಲ್ಕುಜನ ವೈದ್ಯಕೀಯ ವಿದ್ಯಾರ್ಥಿಗಳು ಉಕ್ರೇನ್ ನಲ್ಲಿ ಸಿಲುಕಿದ್ದು ಓರ್ವ ವಿದ್ಯಾರ್ಥಿ ಮರಳಿ ಭಾರತಕ್ಕೆ ಆಗಮಿಸಿದ್ದಾರೆ. ಇನ್ನೂರ್ವ ಬನವಾಸಿಯ ಇಮ್ರಾನ್ ,ಸ್ನೇಹಾ ರೊಮೇನಿಯಾ ಗಡಿಯಲ್ಲಿ ಸೇಫಾಗಿದ್ದಾರೆ.ಆದರೇ ಖಾರ್ಕಿವ್ ನಲ್ಲಿ ಸಿಲುಕಿರುವ ಮುಂಡಗೋಡು ಮೂಲದ ನಾಝಿಯಾ ರಿಗೆ ಓನ್ ರಿಸ್ಕ್ ನಲ್ಲಿ ರೊಮೇನಿಯಾಕ್ಕೆ ಬರುವಂತೆ ಕೇಂದ್ರ ಗೃಹ ಇಲಾಖೆ ಸೂಚನೆ ನೀಡಿತ್ತು.

ನಾಝಿಯಾ ಸ್ನೇಹಿತರೊಂದಿಗೆ.

ಹೀಗಾಗಿ ಅನಿವಾರ್ಯವಾಗಿ ಯುದ್ಧ ನಡೆಯುತ್ತಿರುವ ಖಾರ್ಕಿವ್ ನನ್ನು ತೊರೆದಿದ್ದಾರೆ.ಆದರೇ ಇದೀಗ ಇವರ ಸಂಪರ್ಕ ಕಡಿತವಾಗಿದ್ದು ಇವರ ಬಗ್ಗೆ ಕೇಂದ್ರ ಹಾಗೂ ಜಿಲ್ಲಾಡಳಿತಕ್ಕೆ ಯಾವುದೇ ಮಾಹಿತಿ ದೊರೆಯುತಿಲ್ಲ. ಸದ್ಯ ಅವರ ಕುಟುಂಬದ ಸಂಪರ್ಕದಲ್ಲಿ ಜಿಲ್ಲಾಡಳಿತ ಅಧಿಕಾರಿಗಳಿದ್ದು ಯಾವುದೇ ತೊಂದರೆಗಳಾಗದೇ ರೊಮೇನಿಯಾ ಗಡಿ ತಲುಪುತ್ತಾರೆ ಎಂಬ ನಿರೀಕ್ಷೆ ಇಟ್ಟುಕೊಂಡಿದ್ದೇವೆ ಎಂದು ಉತ್ತರ ಕನ್ನಡ ಜಿಲ್ಲಾಧಿಕಾರಿ ಮುಲ್ಲೈ ಮುಹಿಲನ್ ಮಾಹಿತಿ ನೀಡಿದ್ದಾರೆ.

ಉತ್ತರ ಕನ್ನಡ ಜಿಲ್ಲೆಯ ಇಬ್ಬರು ವೈದ್ಯಕೀಯ ವಿದ್ಯಾರ್ಥಿಗಳು ಸೇಫಾಗಿದ್ದಾರೆ. ಆದರೇ ಖಾರ್ಕಿವ್ ನಿಂದ ಹೊರಟ ನಾಝಿಯಾ ಈವರೆಗೂ ಸಂಪರ್ಕಕ್ಕೆ ಸಿಗದಿರುವುದು ಕುಟುಂಬ ವರ್ಗಕ್ಕೆ ಆತಂಕ ಎದುರಾಗುವಂತೆ ಮಾಡಿದ್ದು ಕೇಂದ್ರ ಮತ್ತು ರಾಜ್ಯ ಸರ್ಕಾರಕ್ಕೆ ತಮ್ಮ ಮಗಳನ್ನು ಸುರಕ್ಷಿತವಾಗಿ ಕರೆತರುವಂತೆ ಮನವಿ ಕುಟುಂಬ ವರ್ಗ ಮನವಿ ಮಾಡಿದೆ.ಇನ್ನು ಕಾರವಾರದಲ್ಲಿ ಸಹ ಜನಶಕ್ತಿ ವೇದಿಕೆ ಸೇರಿದಂತೆ ಹಲವು ಸಂಘಟನೆಗಳು ತಮ್ಮ ಜಿಲ್ಲೆಯವರನ್ನು ಸುರಕ್ಷಿತವಾಗಿ ಕರೆತರುವಂತೆ ರಾಜ್ಯಪಾಲರಿಗೆ ಜಿಲ್ಲಾಧಿಕಾರಿ ಮೂಲಕ ಮನವಿ ಸಲ್ಲಿಸಿದ್ದಾರೆ.




ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

error: Content is protected !!