ಉತ್ತರ ಕನ್ನಡ ಜಿಲ್ಲೆಯಲ್ಲಿ ವೈಶಿಷ್ಟವಾಗಿ ನಾಗರಪಂಚಮಿ ಆಚರಣೆ-ವಿಡಿಯೊ ನೋಡಿ.

826

ಕಾರವಾರ :- ಉತ್ತರಕನ್ನಡ ಜಿಲ್ಲೆಯಲ್ಲಿ ನಾಗರಪಂಚಮಿ ಹಬ್ಬವನ್ನ ಸಂಭ್ರಮದಿಂದ ಆಚರಿಸಲಾಯಿತು. ಕಾರವಾರದ ನಂದನಗದ್ದಾದ ಶ್ರೀ ನಾಗನಾಥ ದೇವಾಲಯದಲ್ಲಿ ಕೋವಿಡ್ ನಿಯಮ ಅನುಸರಿಸಿ ಭಕ್ತರು ದೇವರ ದರ್ಶನ ಪಡೆದರು.

ದೇವಾಲಯ ಪ್ರವೇಶಿಸಿಸುವ ಮುನ್ನ ಭಕ್ತರಿಗೆ ಸ್ಯಾನಿಟೇಸರ್ ನೀಡಿದ ಬಳಿಕವೇ ದೇವರ ದರ್ಶನಕ್ಕೆ ಅವಕಾಶ ಮಾಡಿಕೊಡಲಾಗಿದೆ. ಅಲ್ಲದೇ ದೇವಾಲಯದಲ್ಲಿ ಯಾವುದೇ ಸೇವಾ ಕಾರ್ಯಕ್ಕೆ ಅವಕಾಶ ಇಲ್ಲದಿರೋದ್ರಿಂದ ದೇವಾಲಯದ ಆವರಣದಲ್ಲಿರುವ ನಾಗರ ವಿಗ್ರಹಗಳಿಗೆ ಹಾಲು ಎರೆಯುವುದರ ಮೂಲಕ ಭಕ್ತಿ ಭಾವ ಪ್ರದರ್ಶಿಸುತ್ತಿದ್ದಾರೆ. ಕೋವಿಡ್ ಕಾರಣಕ್ಕೆ ಸಾಮಾಜಿಕ ಅಂತರ ಕಾದುಕೊಂಡು ಭಕ್ತರು ದೇವರ ದರ್ಶನ ಪಡೆದರು.

ಇನ್ನು ಶಿರಸಿಯ ಚಿಪಗಿಯ ಉರುಗ ತಜ್ಞ ಪ್ರಶಾಂತ್ ಹುಲೇಕಲ್ ರವರು ನಿಜ ನಾಗರ ಹಾವಿಗೆ ಪೂಜೆ ಮಾಡುವ ಮೂಲಕ ನಾಗರ ಪಂಚಮಿಯನ್ನು ಆಚರಿಸಿದರು.

ನಿಜ ನಾಗರ ಹಾವಿಗೆ ಪೂಜೆ ವಿಡಿಯೊ ನೋಡಿ:-
ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

error: Content is protected !!