ಉತ್ತರ ಕನ್ನಡ ಕರಾವಳಿಯಲ್ಲಿ ಕಂಡಿತು ಏಲಿಯನ್ !ಆಕಾಶದಲ್ಲಿ ಕಂಡ ಸರಣಿ ಬೆಳಕಿನ ಮಾಲೆ ಏನು ಗೊತ್ತಾ?

8761

ಕಾರವಾರ :- ಕಾರವಾರದ ಕಡಲ ಭಾಗದ ಪಶ್ಚಿಮ ದಿಕ್ಕಿನಲ್ಲಿ ರಾತ್ರಿ ವೇಳೆ ಪಳಪಳಿಸುವ ಅಪರೂಪದ ಸನ್ನಿವೇಶವೊಂದು ಗೋಚರಿಸಿದೆ. ನೇರವಾಗಿ ಒಂದಕ್ಕೊಂದು ಸರಪಳಿಯಂತೆ ಬೆಳಕಿನ ಸರವೊಂದು ಸಾಗುತ್ತಿದ್ದುದನ್ನು ಕಂಡು ಜನ ಆಶ್ವರ್ಯಪಟ್ಟಿದ್ದಾರೆ.ಈ ವಿಡಿಯೋ ವನ್ನು ಸ್ಥಳೀಯರು ಮೊಬೈಲ್ ನಲ್ಲಿ ಸೆರೆ ಹಿಡಿದಿದ್ದು ಏಲಿಯನ್ ಎಂದು ಭಯ ಪಟ್ಟಿದ್ದಾರೆ.

ನಿಜ ಏನು?

ಆದ್ರೆ ಇದು ಎಲಾನ್ ಮಸ್ಕ್ ಮಾಲೀಕತ್ವದ ಬಾಹ್ಯಾಕಾಶ ಸಂಸ್ಥೆ ಅಮೆರಿಕದ ಸ್ಪೇಸ್ ಎಕ್ಸ್ ಉಡಾವಣೆ ಮಾಡಿದ ಸರಣಿ ಉಪಗ್ರಹಗಳ ಮಾಲೆಯಿದು. ಸ್ಟಾರ್ ಲಿಂಕ್ ಎಂಬ ಯೋಜನೆಯಡಿ 1,800ಕ್ಕೂ ಅಧಿಕ ಉಪಗ್ರಹಗಳನ್ನು ಈಗಾಗಲೇ ಉಡಾವಣೆ ಮಾಡಲಾಗಿದೆ.

ಅವುಗಳಲ್ಲಿ 1,732 ಉಪಗ್ರಹಗಳು ತಮ್ಮ ನಿಗದಿತ ಕಕ್ಷೆಯ‌ಲ್ಲಿ ಭೂಮಿಯನ್ನು ಸುತ್ತುತ್ತಿವೆ.
2018ರ ಫೆ.22ರಂದು ಆರಂಭವಾದ ಈ ಯೋಜನೆಯಲ್ಲಿ ಬೇರೆ ಬೇರೆ ಹಂತಗಳಲ್ಲಿ ಉಪಗ್ರಹಗಳನ್ನು ಉಡಾವಣೆ ಮಾಡಲಾಗುತ್ತಿದೆ.

ಅವುಗಳಲ್ಲಿ ಒಂದು ಗುಂಪಿನ ಉಪಗ್ರಹಗಳು ಸಾಗುತ್ತಿದ್ದುದು ಜಿಲ್ಲೆಯ ಕರಾವಳಿ ಭಾಗದ ಆಗಸದಲ್ಲಿ ಗೋಚರಿಸಿದೆ.

ಉಡುಪಿ ಮಂಗಳೂರಿನಲ್ಲೂ ನಾಳೆ ಗೋಚರ.

ಸರಣಿ ಉಪಗ್ರಹಗಳು ನಾಳೆ ಉಡುಪಿ ಹಾಗೂ ಮಂಗಳೂರಿನಲ್ಲಿ ಸಂಜೆ 7.11-7.15 ರ ನಡುವೆ ಕಾಣಿಸಲಿದೆ ಎಂದು ಖಗೋಳ ಶಾಸ್ತ್ರಜ್ಞರು ಮಾಹಿತಿ ನೀಡಿದ್ದಾರೆ.

ಉಪಗ್ರಹ ಕಾಣಿಸಿಕೊಳ್ಳುವ ಪರಿದಿ ಹೀಗಿದೆ:-
ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

error: Content is protected !!