BREAKING NEWS
Search

ಪೆಟ್ರೋಲಿಯಮ್ ಉತ್ಪನ್ನ ಬೆಲೆ ಏರಿಕೆ:ಕರ್ಕಿಯಲ್ಲಿ ಕಿಸಾನ್ ಕಾಂಗ್ರೆಸ್ ನಿಂದ ಪೆಟ್ರೋಲ್ ಬಂಕ್ ಎದುರು ಪ್ರತಿಭಟನೆ.

368

ಉತ್ತರ ಕನ್ನಡ ಜಿಲ್ಲಾ ಕಿಸಾನ್ ಕಾಂಗ್ರೆಸ್ ಮತ್ತು ಹೊನ್ನಾವರ ಬ್ಲಾಕ್ ಕಿಸಾನ್ ಕಾಂಗ್ರೆಸ್ ವತಿಯಿಂದ ಕರ್ಕಿಯ ಪೆಟ್ರೋಲ್ ಬಂಕ್ ಎದುರು ಡೀಸೆಲ್ ಮತ್ತು ಪೆಟ್ರೋಲ್ ಬೆಲೆ ಏರಿಕೆ ಮಾಡಿರುವ ಕೇಂದ್ರದ ಬಿಜೆಪಿ ಸರ್ಕಾರದ ವಿರುದ್ಧ ಪ್ರತಿಭಟಿಸಲಾಯಿತು.

ಈ ವೇಳೆ ಮಾತನಾಡಿದ ಕೆಪಿಸಿಸಿ ಸದಸ್ಯ ವಿನೋದ್ ನಾಯ್ಕ ಕೇಂದ್ರ ಮತ್ತು ರಾಜ್ಯದ ಬಿಜೆಪಿ ಸರಕಾರಗಳು ಪೆಟ್ರೋಲ್ ಹಾಗೂ ಡೀಸೆಲ್ ಬೆಲೆ ಏರಿಸುವ ಮೂಲಕ ಜನರ ರಕ್ತ ಹೀರುತ್ತಿವೆ ಈ ಹಿಂದೆ ಮೂವತ್ತೈದು ರೂಪಾಯಿಗಳಿಗೆ ಪೆಟ್ರೋಲ ನೀಡುವುದಾಗಿ ಹೇಳಿ ಅಧಿಕಾರಕ್ಕೆ ಬಂದ ಬಿಜೆಪಿ ಸರ್ಕಾರ ಇವತ್ತು ಪೆಟ್ರೋಲ್ ಗೆ ನೂರರ ಗಡಿ ದಾಟಿಸಿದ್ದು ದಿನಸಿ ಮೊದಲಾದವುಗಳ ಬೆಲೆ ಹೆಚ್ಚಳದಿಂದಾಗಿ ಜನ ಸಾಮಾನ್ಯರ ಬದುಕು ಕಷ್ಟಕರವಾಗಿದೆ ಎಂದರು.

ನಂತರ ಮಾತನಾಡಿದ ಹೊನ್ನಾವರ ಬ್ಲಾಕ್ ಕಿಸಾನ್ ಕಾಂಗ್ರೆಸ್ ಅಧ್ಯಕ್ಷ ಹರಿಶ್ಚಂದ್ರ ನಾಯ್ಕ ಕರ್ಕಿ ಮಾತನಾಡಿ ಕೇಂದ್ರ ರಾಜ್ಯ ಸರ್ಕಾರಗಳ ಅಸಮರ್ಪಕ ಆಡಳಿತದಿಂದಾಗಿ ಮತ್ತು ತೈಲ ಬೆಲೆ ತೀವ್ರ ಏರಿಕೆಯಿಂದಾಗಿ ಬಡ ಮತ್ತು ಮಧ್ಯಮ ವರ್ಗದವರ ಬದುಕು ದುಸ್ತರವಾಗಿದೆ. ಕೂಲಿಗಳು ಕಾರ್ಮಿಕರು ಬೆಲೆ ಏರಿಕೆಯಿಂದಾಗಿ ಕೆಲಸವಿಲ್ಲದೆ ಕಂಗಾಲಾಗಿದ್ದಾರೆ. ಎಲ್ಲ ವಸ್ತುಗಳ ಬೆಲೆ ಏರಿಕೆಯಿಂದಾಗಿ ಯಾರಿಗೂ ನೆಮ್ಮದಿ ಇಲ್ಲವಾಗಿದೆ. ಆದ್ದರಿಂದ ರಾಜ್ಯ ಮತ್ತು ಕೇಂದ್ರದ ಬಿಜೆಪಿ ಸರ್ಕಾರಗಳು ಕೂಡಲೇ ತೊಲಗಬೇಕು ಎಂದರು.
ಈ ಸಂದರ್ಭದಲ್ಲಿ ನವೀನ ನಾಯ್ಕ ಗಜಾನನ ನಾಯ್ಕ, ರವೀಂದ್ರ ನಾಯ್ಕ, ಜನಾರ್ದನ ನಾಯ್ಕ, ಮಹೇಶ ನಾಯ್ಕ, ಗಿರೀಶ ಗೌಡ, ಕಿರಣ ಭಂಡಾರಿ, ಸುಬ್ರಹ್ಮಣ್ಯ ಹೆಗಡೆ, ಸುರೇಶ ಮೇಸ್ತ, ವೆಂಕಟೇಶ ಮೇಸ್ತ. ಮಹಾಭಲೇಶ್ವರ ಮೇಸ್ತ, ಹುಲಿಯಣ್ಣ ಗೌಡ , ಕಮಲಾಕರ ಮುಕ್ರಿ, ರಾಮಚಂದ್ರ ನಾಯ್ಕ, ಮಹೇಶ ಗೌಡ ರಾಜು ನಾಯ್ಕ ಜಗದೀಶ್ ನಾಯ್ಕ ಮತ್ತು ಇತರ ಹಲವು ಕಿಸಾನ್ ಪದಾಧಿಕಾರಿಗಳು ಕಾರ್ಯಕರ್ತರು ಉಪಸ್ತಿತರಿದ್ದರು. ಕೊನೆಯಲ್ಲಿ ನವೀನ ನಾಯ್ಕ ಸಾಲಿಕೇರಿ ವಂದಿಸಿದರು.

ಕಾರವಾರದಲ್ಲಿ ಸತೀಶ್ ಸೈಲ್ ನೇತ್ರತ್ವದಲ್ಲಿ ಪ್ರತಿಭಟನೆ.

ಪೆಟ್ರೋಲ್ ಬೆಲೆ ಏರಿಕೆ ವಿರುದ್ದ ಕಾರವಾರದ ಹಳದಿಪುರಕರ್ ಪೆಟ್ರೋಲ್ ಪಂಪ್ ಬಳಿ ಇಂದು ಬೆಳಗ್ಗೆ ಕಾ‌ಂಗ್ರೇಸ್ ಪ್ರಮುಖರಾದ ಬಿ.ಕೆ‌.ಹರಿಪ್ರಸಾದ್ , ಡಿಸಿಸಿ ಅಧ್ಯಕ್ಷ ಭೀಮಣ್ಣ ನಾಯ್ಕ ಸೇರಿದಂತೆ ಹಲವು ಪ್ರಮುಖರು ಪ್ರತಿಭಟನೆ ನಡೆಸಿದರು.
ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

error: Content is protected !!