ಕಾರವಾರ :- ಉತ್ತರ ಕನ್ನಡ ಜಿಲ್ಲೆಯಲ್ಲಿ ವಿವಿಧ ತಾಲೂಕಿನಲ್ಲಿ 79 ಪ್ರಕರಣದಲ್ಲಿ ವಶಪಡಿಸಿಕೊಂಡ ಮಾದಕ ದ್ರವ್ಯ ಗಳನ್ನು ಇಂದು ಅಂಕೊಲ ತಾಲೂಕಿನ ಬೊಗ್ರಿಬೈಲಿನ ಕೆನರಾ ಐ.ಎಮ್.ಎ ಕಾನ್ ಟ್ರಿಟ್ ಮೆಂಟ್ ಘನ ತ್ಯಾಜ್ಯ ವಿಲೇವಾರಿ ಘಟಕದಲ್ಲಿ ಜಿಲ್ಲಾ ಪೊಲೀಸ್ ಅಧೀಕ್ಷಕ ಶಿವಪ್ರಕಾಶ್ ನೇತ್ರತ್ವದಲ್ಲಿ 69 ಗಾಂಜಾ ಪ್ರಕರಣದ 88ಕೆ.ಜಿ ತೂಕದ ₹19,04,600 ಮೌಲ್ಯ , 504 ಗ್ರಾಮ್ ತೂಕದ ಚರಾಸ್ ₹2,5500 ಮೌಲ್ಯ,431 ಗಾಂಜಾ ಸಸಿ ₹3,21000 ಮೌಲ್ಯ ದ ಒಟ್ಟು 24,80600₹ ಬೆಲೆಯ ಮಾದಕ ದ್ರವ್ಯ ನಾಶಪಡಿಸಲಾಯಿತು.
