ಬೆಳಂಬೆಳಗ್ಗೆ ಪೀಲ್ಡಿಗಿಳಿದ ಪೊಲೀಸರು:ನಿಯಮ ಮೀರಿ ಓಡಾಟನೆಡೆಸಿದವರ ವಾಹನ ಸೀಜ್!ವರ್ತಕರಿಗೂ ಬಿತ್ತು ದಂಡ.

1431

ಕಾರವಾರ :- ರಾಜ್ಯ ಸರ್ಕಾರ ಇಂದಿನಿಂದ ಕಠಿಣ ಲಾಕ್ ಡೌನ್ ಆದೇಶ ಮಾಡಿದೆ ಈ ಹಿನ್ನಲೆಯಲ್ಲಿ ಉತ್ತರ ಕನ್ನಡ ಜಿಲ್ಲೆಯಲ್ಲೂ ಕಠಿಣ ನಿಯಮ ಜಾರಿಗೆ ತಂದಿದ್ದು ವಿನಾ ಕಾರಣ ರಸ್ತೆಗಿಳಿದ ವಾಹನವನ್ನು ವಶಕ್ಕೆ ಪಡೆದು ದಂಡ ವಿಧಿಸುವ ಜೊತೆ ವಾಹನವನ್ನು ವಶಕ್ಕೆ ಪಡೆದಿದೆ. ನಿನ್ನೆ ದಿನ ಜಿಲ್ಲೆಯಲ್ಲಿ 243 ವಾಹನವನ್ನು ಜಪ್ತಿ ಮಾಡಿ ಒಟ್ಟು 117200₹ ದಂಡ ಹಾಕಲಾಗಿತ್ತು .ಆದರೇ ಇಂದು ಕಠಿಣ ಕ್ರಮ ಕೈಗೊಂಡಿರುವ ಪೊಲೀಸರು ಕಾರವಾರ ನಗರದಲ್ಲಿ ಇಂದು ಮುಂಜಾನೆಯಿಂದ ಈವರೆಗೆ 40 ವಾಹನವನ್ನು ವಶಕ್ಕೆ ಪಡೆದು ದಂಡ ವಿಧಿಸಿದೆ.

ಇನ್ನು ಕಾರವಾರ ನಗರದಲ್ಲಿ ಜಿನಸಿ ಇತರ ವಸ್ತುಗಳನ್ನು ಕೊಳ್ಳಲು ಸಹ ಜನ ಎಂದಿನಂತೆ ಮುಗಿ ಬಿದ್ದಿದ್ದು ನಿಯಮ ಮೀರಿದ ಗ್ರಾಹಕರಿಗೆ ಹಾಗೂ ವರ್ತಕರಿಗೆ ದಂಡ ವಿಧಿಸಿದೆ.

ಜಿಲ್ಲೆಯಲ್ಲಿ ಕಾರವಾರದ ಮಾಜಾಳಿ -ಗೋವಾ ಗಡಿ, ಭಟ್ಕಳ ನಗರ,ಸಿದ್ದಾಪುರ,ಹೊನ್ನಾವರದ ಗೇರುಸೊಪ್ಪ, ಬನವಾಸಿ ಭಾಗದಲ್ಲಿ ಗಡಿ ಚೆಕ್ ಪೊಸ್ಟ್ ಅನ್ನು ತೆರೆಯುವ ಜೊತೆ ಜೋಯಿಡಾ ಹೊರತುಪಡಿಸಿ ಉಳಿದ ತಾಲೂಕುಗಳಲ್ಲಿ ನಾಕಾಬಂಧಿ ಹಾಕಲಾಗಿದೆ. ಹೊರ ಜಿಲ್ಲೆ ಹಾಗೂ ಹೊರ ರಾಜ್ಯದಿಂದ ಬಂದ ಜನರಿಗೆ ಹಾಗೂ ವಾಹನಗಳಿಗೆ ನಿರ್ಬಂಧಿತ ಅವಕಾಶ ಮಾಡಿಕೊಟ್ಟಿದೆ.

ಇನ್ನು ಕಠಿಣ ನಿಯಮ ಜಾರಿ ಇದ್ದರೂ ಜನರು ಮಾತ್ರ ರಸ್ತೆಗಿಳಿಯುವ ಚಾಳಿ ಬಿಡುತ್ತಿಲ್ಲ .ಹೀಗಾಗಿ ಪೊಲೀಸ್ ಇಲಾಖೆ ಕಠಿಣ ಕ್ರಮ ಕೈಗೊಂಡಿದೆ.
ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

error: Content is protected !!