BREAKING NEWS
Search

ಕನ್ನಡ ಸಾಹಿತ್ಯ ಪರಿಷತ್ ಚುನಾವಣೆ-ಇಂದು ನಿರ್ಧಾರವಾಗಲಿದೆ ಐವರ ಭವಿಷ್ಯ.

563

ಕಾರವಾರ: ಕನ್ನಡ ಸಾಹಿತ್ಯ ಪರಿಷತ್ ಚುನಾವಣೆಯ ಮತದಾನ ಆರಂಭಗೊಂಡಿದ್ದು, ಐವರು ಸ್ಪರ್ಧಿಸಿ ತೀವ್ರ ಕುತೂಹಲ ಕೆರಳಿಸಿರುವ ಉತ್ತರಕನ್ನಡದಲ್ಲಿ ಕಸಾಪ ಜಿಲ್ಲಾಧ್ಯಕ್ಷ ಪಟ್ಟ ಯಾರಪಾಲಾಗಲಿದೆ ಎಂಬುದು ಸಂಜೆ ವೇಳೆಗೆ ಗೊತ್ತಾಗಲಿದೆ.

ಕಣದಲ್ಲಿ ಬಿ.ಎನ್ ,ವಾಸ್ರೆ, ವೇಣುಗೋಪಾಲ್ ಮದ್ಗುಣಿ ,ರಾಘವೇಂದ್ರ ಗಡಪ್ಪನವರ್ ,ಶಾರದ ಭಟ್ ಸೇರಿದಂತೆ ಒಟ್ಟು ಐದು ಜನರಿದ್ದಾರೆ.

ಕನ್ನಡ ಸಾಹಿತ್ಯ ಪರಿಷತ್ತು ಚುನಾವಣೆಗೆ ಬೆಳಿಗ್ಗೆ ಏಂಟು ಗಂಟೆಯಿಂದಲೇ ಮತದಾನ ಆರಂಭಗೊಂಡಿದ್ದು ಜಿಲ್ಲೆಯಾದ್ಯಂತ ಆಯಾ ತಾಲ್ಲೂಕಾ ತಹಶೀಲ್ದಾರ್ ಕಚೇರಿಗಳಲ್ಲಿ ಒಟ್ಟು 12 ಮತಗಟ್ಟೆಗಳನ್ನ ತೆರೆಯಲಾಗಿದೆ.

ಬೆಳಿಗ್ಗೆಯಿಂದಲೇ ಯಾವುದೇ ಗೊಂದಲವಿಲ್ಲದೆ ಮತಗಟ್ಟೆಗಳಲ್ಲಿ ಮತದಾನ ನಡೆಯುತ್ತಿದ್ದು ಸಂಜೆ 4 ಗಂಟೆವರೆಗೂ ಮತದಾನ ನಡೆಯಲಿದೆ.

ಜಿಲ್ಲೆಯಲ್ಲಿ ಒಟ್ಟು 4,747 ಮತದಾರರು ಇದ್ದು ಐವರು ಅಭ್ಯರ್ಥಿಗಳ ಭವಿಷ್ಯವನ್ನು ಸಂಜೆ ವೇಳೆಗೆ ಮತಪೆಟ್ಟಿಗೆಯಲ್ಲಿ ಭದ್ರಪಡಿಸಿ ಇಂದೇ ಮತ ಏಣಿಕೆ ಕೂಡ ನಡೆದು ನಿರ್ಧಾರವಾಗಲಿದೆ.

ಇನ್ನು ಜಿಲ್ಲೆಯಲ್ಲಿ ಈ ಭಾರಿ ಸುಮಾರು 1500 ಕ್ಕೂ ಹೆಚ್ಚು ಸದಸ್ಯರು ನೂತನವಾಗಿ ಮತದಾನದ ಹಕ್ಕು ಪಡೆದಿದ್ದು ತಮ್ಮ ಮತವನ್ನು ಚಲಾವಣೆ ಮಾಡಲಿದ್ದು ಈ ಬಾರಿ ಅಧ್ಯಕ್ಷ ಪಟ್ಟ ಯಾರ ಪಾಲಿಗೆ ಒಲಿಯಲಿದೆ ಎಂಬುದು ಇದೀಗ ತೀವ್ರ ಕುತೂಹಲಕ್ಕೆ ಕಾರಣವಾಗಿದೆ.

ಇನ್ನು ಮತಗಟ್ಟೆಗಳಲ್ಲಿ ಶಾಂತಿಯುತ ಚುನಾವಣೆಗೆ ಪೊಲೀಸ್ ವ್ಯವಸ್ಥೆ ಕಲ್ಪಿಸಿದ್ದು, ಕೋವಿಡ್ ತಪಾಸಣೆ ಕೂಡ ನಡೆಸಲಾಗುತ್ತಿದೆ. ಬೆಳಿಗ್ಗೆಯಿಂದಲೇ ಸದಸ್ಯರು ಬಂದು ಹಕ್ಕು ಚಲಾಯಿಸುತ್ತಿದ್ದು ನಿಧಾನವಾಗಿ ಮತದಾನ ನಡೆಯುತ್ತಿರುವುದು ಕಂಡುಬಂದಿದೆ.
ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

error: Content is protected !!