ಕಾರವಾರ :- ಉತ್ತರ ಕನ್ನಡ ಜಿಲ್ಲೆಯ ಕುಮಟಾ ತಾಲ್ಲೂಕಿನ ಉಪ್ಪಿನಪಟ್ಟಣದ ಕಮಲದ ಕೆರೆಯ ಕೆಸರಲ್ಲಿ ಕಡವೆಯೊಂದು ಸಿಲುಕಿಕೊಂಡು ದಿವಿಡೀ ಒದ್ದಾಡಿದ ಘಟನೆ ನಡೆದಿದ್ದು ಅರಣ್ಯ ಹಾಗೂ ಅಗ್ನಿಶಾಮಕ ದಳ ಸಿಬ್ಬಂದಿ ಕಾರ್ಯಾಚರಣೆ ನಡೆಸಿ ರಕ್ಷಿಸಿದ್ದಾರೆ. ನಾಲ್ಕು ವರ್ಷದ ಕಡವೆ ಇದಾಗಿದ್ದು
ಕಾಡಿನಿಂದ ತೋಟಕ್ಕೆ ಬಂದು ದಾಹ ನೀಗಿಸಿಕೊಳ್ಳಲು ಕೆರೆಗೆ ಇಳಿದಿತ್ತು. ಕೆರೆಯಲ್ಲಿ ಹೆಚ್ಚು ಹೂಳು ತುಂಬಿದ್ದರಿಂದ ಮೇಲೆ ಬರಲಾಗದೇ ಒದ್ದಾಡಿದೆ.

ಈ ಕುರಿತು ಮಾಹಿತಿ ಪಡೆದ ಕತಗಾಲ ವಲಯ ಅರಣ್ಯಾಧಿಕಾರಿ ದೀಪಕ ನಾಯ್ಕ ನೇತೃತ್ವದಲ್ಲಿ ಕಾರ್ಯಾಚರಣೆ ನಡೆಸಿ ರಕ್ಷಿಸಿ ಮರಳಿ ಕಾಡಿಗೆ ಬಿಟ್ಟಿದ್ದಾರೆ.