ಉತ್ತರ ಕನ್ನಡ
ಉತ್ತರ ಕನ್ನಡ ಜಿಲ್ಲೆಯಲ್ಲಿ ಇಂದಿನ ಕರೋನಾ ಲಸಿಕೆ ಪ್ರಕ್ರಿಯೆಯು ಉತ್ತಮವಾಗಿದ್ದು ಮೊದಲ ದಿನ 79.93 % ಸಿಬ್ಬಂದಿಗಳು ಮೊದಲ ಹಂತದಲ್ಲಿ ಲಸಿಕೆ ಹಾಕಿಸಿಕೊಂಡಿದ್ದಾರೆ. ಒಟ್ಟು 807 ಜನರಿಗೆ ಲಸಿಕೆ ನೀಡಲು ಟಾರ್ಗೆಟ್ ಇಡಲಾಗಿದ್ದು ಈವರೆಗೆ 645 ಜನ ಲಸಿಕೆ ಹಾಕಿಸಿಕೊಂಡಿದ್ದು 31 ಜನ ವಿವಿಧ ಕಾರಣಗಳಿಂದ ಗೈರಾಗಿದ್ದಾರೆ.
ತಾಲೂಕುವಾರು ವಿವರ ಇಲ್ಲಿದೆ.

ಶಿವಮೊಗ್ಗ.

ಶಿವಮೊಗ್ಗ ನಗರದಲ್ಲಿನ ಮೆಗ್ಗನಾ ಆಸ್ಪತ್ರೆಯಲ್ಲಿ ಕೋವಿಡ್ ಲಸಿಕಾ ಕಾರ್ಯಕ್ರಮವನ್ನು ಸಚಿವ ಈಶ್ವರಪ್ಪ ಉದ್ಘಾಟಿಸಿದರು.ಈ ಸಂದರ್ಭದಲ್ಲಿ ಸಂಸದ ಬಿ.ವೈ ರಾಘವೇಂದ್ರರವರು ಉಪಸ್ತಿತರಿದ್ದರು.ಶಿವಮೊಗ್ಗ ಜಿಲ್ಲೆಯಲ್ಲಿ ಮೊದಲ ದಿನ 9 ಕೇಂದ್ರಗಳಿಂದ 452 ಮಂದಿ ಲಸಿಕೆ ಪಡೆದಿದ್ದಾರೆ. ಸೋಮವಾರ ಲಸಿಕಾ ಕಾರ್ಯ ಮುಂದುವರೆಯಲಿದೆ.
ಬೀದರ್
ಬೀದರ್ ಜಿಲ್ಲೆಯ ಆರು ಕೇಂದ್ರಗಳಲ್ಲಿ ಒಟ್ಟು 336 ಜನ ಆರೋಗ್ಯ ಕಾರ್ಯಕರ್ತರಿಗೆ ಲಸಿಕೆ ನೀಡಲಾಗಿದೆ.