BREAKING NEWS
Search

ಕನ್ನಡ ಸಾಹಿತ್ಯ ಪರಿಷತ್ ಚುನಾವಣೆ-ಉತ್ತರ ಕನ್ನಡಕ್ಕೆ ಬಿ.ಎನ್ ವಾಸರೆ ,ಶಿವಮೊಗ್ಗ-ಡಿ.ಮಂಜುನಾಥ್ ಅಧ್ಯಕ್ಷರಾಗಿ ಆಯ್ಕೆ.

1337

ಕಾರವಾರ:- ಉತ್ತರ ಕನ್ನಡ ಜಿಲ್ಲೆಯ ಕಸಾಪ ಜಿಲ್ಲಾಧ್ಯಕ್ಷ ಸ್ಥಾನಕ್ಕೆ ಬಿ.ಎನ್.ವಾಸರೆಯವರು
2168 ಮತ ಪಡೆದು ಅತ್ಯಂತ ಬಹುಮತದಿಂದ ಆಯ್ಕೆಯಾಗಿದ್ದಾರೆ.

ಬಿ.ಎನ್.ವಾಸರೆ ಎದುರಾಳಿ ವೇಣುಗೋಪಾಲರಿಗೆ 348 ಮತಗಳು ಬರುವ ಮೂಲಕ ಎರಡನೇ ಸ್ಥಾನ ಗಳಿಸಿದ್ದಾರೆ.

ಈ ಭಾರಿ ಚಲಾವಣೆಯಾದ ಮತಗಳಲ್ಲಿ ವಾಸರೆಗೆ ಸಿಂಹಪಾಲು ಮತಗಳು ಲಭಿಸಿವೆ. ಒಟ್ಟು 2810 ಮತಗಳು ಚಲಾವಣೆಯಾಗಿದ್ದು ಉಳಿದ ಅಭ್ಯರ್ಥಿಗಳು ಎಷ್ಟು ಪಡೆದಿದ್ದಾರೆ ಎಂಬ ವಿವರ ಈ ಕೆಳಗಿನಂತಿದೆ.

ಶಿವಮೊಗ್ಗ ಜಿಲ್ಲಾ ಕಸಪಾ ಅಧ್ಯಕ್ಷ ಸ್ಥಾನಕ್ಕೆ ಸಾಹಿತಿ.ಡಿ.ಮಂಜುನಾಥ್ ಆಯ್ಕೆ.

ಇಂದು ನಡೆದ ಶಿವಮೊಗ್ಗ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಜಿಲ್ಲಾಧ್ಯಕ್ಷರ ಚುನಾವಣೆಯಲ್ಲಿ ಸಾಹಿತಿ ಡಿ. ಮಂಜುನಾಥ್ ರವರು ಇವರ ಪ್ರತಿಸ್ಪರ್ಧಿ ಡಿ.ಬಿ ಶಂಕ್ರಪ್ಪ ರವರ ವಿರುದ್ಧ ಸುಮಾರು 460 ಮತಗಳ ಅಂತರದಿಂದ ವಿಜಯಶಾಲಿಯಾಗಿದ್ದಾರೆ.

ಫಲಿತಾಂಶ ಬಂದ ನಂತರ ಶಿವಮೊಗ್ಗ ನಗರದ ತಾಲೂಕ ಕಚೇರಿ ಅವರಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಈ ಬಾರಿ ಸ್ಥಳೀಯ ಚುನಾವಣಾ ಅಧಿಕಾರಿಗಳು ಬಹಳ ಶಿಸ್ತುಬದ್ದವಾಗಿ ಚುನಾವಣೆಯನ್ನು ನಡೆಸಿದ್ದಾರೆ. ಅನೇಕ ದುಷ್ಟಶಕ್ತಿಗಳ ವಿರುದ್ಧ ಹೋರಾಟದ ಮೂಲಕ ಇಂದು ವಿಜಯಶಾಲಿಯಾದ ನಾನು ಸರ್ವ ಜನಾಂಗದ ಶಾಂತಿಯ ತೋಟ ಎಂಬ ಕವಿವಾಣಿಯಂತೆ ರಾಜ್ಯಾದ್ಯಂತ ಎಲ್ಲರೊಂದಿಗೆ ಕೂಡಿ ಕನ್ನಡವನ್ನು ಬೆಳಸುವ ಕೆಲಸ ಮಾಡುತ್ತೇನೆ. ಚುನಾವಣೆಯಲ್ಲಿ ನನ್ನ ಪರವಾಗಿ ಮತ ಹಾಕಿದಂತಹ ಎಲ್ಲಾ ಕನ್ನಡ ಪರ ಮನಸ್ಸುಗಳಿಗೆ ಧನ್ಯವಾದಗಳು ಎಂದರು.




ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

error: Content is protected !!