




ಕಾರವಾರ :- ಕುಡಿದ ಅಮಲಿನಲ್ಲಿ ಶುಲ್ಲಕ ವಿಷಯಕ್ಕೆ ತಾಯಿ ಹಾಗೂ ಅಕ್ಕನನ್ನು ಗುಂಡು ಹಾಕಿ ಕೊಲೆ ಮಾಡಿದ ಘಟನೆ ಉತ್ತರ ಕನ್ನಡ ಜಿಲ್ಲೆಯ ಸಿದ್ದಾಪುರ ತಾಲೂಕಿನ ಕುಡಗುಂದ ದಲ್ಲಿ ನಡೆದಿದೆ.
ಮಂಜುನಾಥ್ ಜಯಂತ್ ನಾರಾಯಣ ಹಸಲರ್, ಕೊಲೆಗೈದ ಆರೋಪಿಯಾಗಿದ್ದು
ತಾಯಿ ಪಾರ್ವತಿ ಹಾಗೂ ಅಕ್ಕ ರಮ್ಯಾ ಕೊಲೆಯಾದ ದುರ್ದೈವಿಗಳಾಗಿದ್ದಾರೆ. ಊಟದ ವಿಷಯದಲ್ಲಿ ಗಲಾಟೆ ತೆಗೆದಿದ್ದ ಮಂಜುನಾಥ್ ಮನೆಯಲ್ಲಿದ್ದ ನಾಡ ಬಂದೂಕನ್ನು ತೆಗೆದುಕೊಂಡು ತಾಯಿ ಹಾಗೂ ಅಕ್ಕನಿಗೆ ಹೊಡೆದಿದ್ದಾನೆ. ಈ ವೇಳೆ ಇಬ್ಬರೂ ಸ್ಥಳದಲ್ಲೇ ಸಾವು ಕಂಡಿದ್ದು ಘಟನೆ ನಡೆಯುವ ವೇಳೆ ತಂದೆ ನಾರಾಯಣ್ ಮನೆಯಲ್ಲಿ ಇರಲಿಲ್ಲ ಎಂದು ತಿಳಿದುಬಂದಿದೆ. ಘಟನೆ ಸಂಬಂಧ ಸಿದ್ದಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.