ಕಾರವಾರ :- ಉತ್ತರ ಕನ್ನಡ ಜಿಲ್ಲೆಯ ಶಿರಸಿ ನಗರದ ಪಂಡಿತ ಸಾರ್ವಜನಿಕ ಆಸ್ಪತ್ರೆಯ ಕೋವಿಡ್ ವಾರ್ಡ್ ನಲ್ಲಿ ದಾಖಲಾದ ರೋಗಿಗಳಿಗೆ ಆಕ್ಸೀಜನ್ ಪೂರೈಸುವ ಘಟಕದಲ್ಲಿ ಸೋರಿಕೆ ಯಾಗಿ ಕೋವಿಡ್ ರೋಗಿಗಳನ್ನು ಸ್ಥಳಾಂತರಿಸಿದ ಘಟನೆ ಇಂದು ನಡೆದಿದೆ.
ಕೋವಿಡ್ ವಾರ್ಡ ನ ಪಕ್ಕದಲ್ಲಿ ಆಕ್ಸೀಜನ್ ಸಂಗ್ರಹಾಗಾರವಿದ್ದು ,ಇಲ್ಲಿಂದ ಪೈಪ್ ಲೈನ್ ಮೂಲಕ ವಾರ್ಡ್ ಗೆ ಆಕ್ಸಿಜನ್ ಪೂರೈಕೆ ಆಗುತ್ತಿದೆ. ನಸುಕಿನ ಜಾವದಿಂದ ನಿರೀಕ್ಷಿತ ಪ್ರಮಾಣದಲ್ಲಿ ರೋಗಿಗಳಿಗೆ ಆಕ್ಸಿಜನ್ ಪೂರೈಕೆ ಆಗದಿದ್ದಾಗ ಘಟನೆ ಗಮನಕ್ಕೆ ಬಂದಿದೆ.

‘ಕೋವಿಡ್ ವಾರ್ಡ್ ನಲ್ಲಿ ಒಟ್ಟು 20 ರೋಗಿಗಳಿದ್ದು ಅವರಲ್ಲಿ 6 ಮಂದಿಯಷ್ಟೇ ಗಂಭೀರ ಸ್ಥಿತಿಯಲ್ಲಿದ್ದಾರೆ.
ಅವರಿಗೆ ಹೆಚ್ಚಿನ ಪ್ರಮಾಣದ ಆಕ್ಸಿಜನ್ ಅಗತ್ಯವಿರುವ ಕಾರಣ ರೋಗಿಗಳನ್ನು ಸಿದ್ದಾಪುರ, ಮುಂಡಗೋಡು,ಯಲ್ಲಾಪುರ ಆಸ್ಪತ್ರೆಗೆ ಸ್ಥಳಾಂತರಿಸಲಾಗಿದೆ. ಸ್ಥಳಕ್ಕೆ ಕಾರವಾರ ದಿಂದ ನೌಕಾದಳದ ತಂತ್ರಜ್ಞರನ್ನು ಕರೆಯಿಸಲಾಗಿದ್ದು ದುರಸ್ಥಿ ಕಾರ್ಯ ನಡೆಯುತ್ತಿದೆ.
ಸ್ಥಳಕ್ಕೆ ಉಪವಿಭಾಗಾಧಿಕಾರಿ ಆಕೃತಿ ಬನ್ಸಾಲ್, ಡಿವೈಎಸ್ಪಿ ರವಿ ನಾಯ್ಕ, ತಹಶೀಲ್ದಾರ್ ಎಂ.ಆರ್.ಕುಲಕರ್ಣಿ, ಎಸ್ಐ ರಾಜಕುಮಾರ್ ಮೊಕ್ಕಾಂ ಹೊಡಿದ್ದಾರೆ.

ಅರ್ಥಕ್ಕಿಂತ ಹೆಚ್ಚು ಆಕ್ಸಿಜನ್ ಕಾಲಿ!
ಇಂದು ಮುಂಜಾನೆಯಿಂದಲೇ ಆಕ್ಸಿಜನ್ ಲೀಕಾಗುತ್ತಿದೆ. ಆರು ಜನ ಗಂಭೀರ ಸ್ಥಿತಿಯಲ್ಲಿರುವ ರೋಗಿಗಳಿಗೆ ಆಕ್ಸಿಜನ್ ಪೂರೈಕೆ ಮಾಡಲಾಗುತಿತ್ತು. ಆದರೇ ನಿರೀಕ್ಷಿತ ಆಕ್ಸಿಜನ್ ರೋಗಿಗಳಿಗೆ ಸಿಗದಿರುವುದನ್ನು ಗಮನಿಸಿದ ಸಿಬ್ಬಂದಿಗಳು ಆಡಳಿತಾಧಿಕಾರಿ ಗಮನಕ್ಕೆ ತಂದಿದ್ದಾರೆ. ಈವೇಳೆ ಸಂಗ್ರಹವಿದ್ದ ಆಕ್ಸಿಜನ್ ಸಿಲೆಂಡರ್ ನಲ್ಲಿ 50% ಆಕ್ಸಿಜನ್ ಸೋರಿಕೆಯಾಗಿ ಕಾಲಿಯಾಗಿದೆ. ತಕ್ಷಣ ಕಾರವಾರದ ನೌಕಾದಳದ ತಂತ್ರಜ್ಞರಿಗೆ ಮಾಹಿತಿ ನೀಡಿ ಸಿಲೆಂಡರ್ ನನ್ನು ಸಂಪೂರ್ಣ ಬಂದ್ ಮಾಡಲಾಗಿದ್ದು ಅಲ್ಪ ಪ್ರಮಾಣದ ಆಕ್ಸಿಜನ್ ಉಳಿದಿದೆ.ಇನ್ನು ಆಕ್ಸಿಜನ್ ಅವಷ್ಯವಿರುವ ರೋಗಿಗಳನ್ನು ತಕ್ಷಣ ಬೇರೆ ಆಸ್ಪತ್ರೆಗೆ ಸ್ಥಳಾಂತರಿಸಿದ್ದರಿಂದ ತೀವ್ರ ಉಸಿರಾಟದಿಂದ ತೊಂದರೆ ಅನುಭವಿಸುತ್ತಿರುವ ಆರು ಜನ ರೋಗಿಗಳು ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಸದ್ಯದ ಮಾಹಿತಿ ಪ್ರಕಾರ ಈಗ ಎಲ್ಲವನ್ನೂ ಸರಿಪಡಿಸಲಾಗಿದ್ದು ವ್ಯವಸ್ಥೆ ಮಾಡಲಾಗಿದೆ ಎಂದು ತಿಳಿದುಬಂದಿದೆ.