ಶಿರಸಿ:ಮೂತ್ರಕ್ಕೆ ಹೋದ ಕೋವಿಡ್ ಸೊಂಕಿತ ವೃದ್ಧ ಸಂಶಯಾಸ್ಪದ ಸಾವು! ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿದ ಸುದ್ದಿ ಸುತ್ತಾ!

3656

ಕಾರವಾರ:- ಕರೋನಾ ಸೋಂಕಿನಿಂದ ಆಸ್ಪತ್ರೆಗೆ ದಾಖಲಾಗಿದ್ದ ವೃದ್ಧ ಕೋವಿಡ್ ವಾರ್ಡ ನಲ್ಲಿ ಶೌಚಕ್ಕೆ ಹೋದಾಗ ಬಿದ್ದು ತಲೆಗೆ ಪೆಟ್ಟುಬಿದ್ದು ಮೃತಪಟ್ಟ ಘಟನೆ ಶಿರಸಿ ಪಂಡಿತ್ ಆಸ್ಪತ್ರೆಯ ಕೋವಿಡ್ ವಾರ್ಡ ನಲ್ಲಿ ನಡೆದಿದೆ‌

ಮುಂಜು ದೇವ ಮಡಿವಾಳ (೭೩) ಮೃತ ದುರ್ದೈವಿಯಾಗಿದ್ದಾರೆ. ನಿನ್ನೆ ಕೋವಿಡ್ ಪರೀಕ್ಷೆಗೆ ಹೋಗಿದ್ದ ವೇಳೆ ವೈದ್ಯರು ಕರೋನಾ ಇದೆ ಎಂದು ಪರೀಕ್ಷೆ ಮಾಡಿ ಹೇಳಿದ್ದರು .ತಕ್ಷಣ ಶಿರಸಿಯ ಸರ್ಕಾರಿ ಆಸ್ಪತ್ರೆಯ ಕೋವಿಡ್ ವಾರ್ಡ ಗೆ ವೃದ್ಧ ಮಂಜುನಾಥ್ ನೆಡೆದುಕೊಂಡು ಹೋಗಿ ದಾಖಲಾಗಿದ್ದಾರೆ.

ಆದ್ರೆ ಎರಡು ಘಂಟೆಯಲ್ಲಿ ಅವರ ಸಾವಿನ ಸುದ್ದಿ ಕುಟುಂಬಕ್ಕೆ ತಲುಪಿದೆ. ವೃದ್ಧನ ಶವವನ್ನು ಪಿಪಿ.ಕಿಟ್ ನಲ್ಲಿ ಸುತ್ತಿ ಹೊರಭಾಗದಲ್ಲಿ ನೀಡಿದ್ದು ತೆಗೆದುಕೊಂಡು ಹೋಗಲು ನಗರಸಭೆ ಆಡಳಿತ ವ್ಯವಸ್ಥೆ ಸಹ ಮಾಡಲಿಲ್ಲ . ಹೀಗಾಗಿ ಕುಟುಂಬದವರು ಎರಡುಸಾವಿರ ಹಣ ನೀಡಿ ಶವವನ್ನು ಅಂತ್ಯ ಸಂಸ್ಕಾರ ಮಾಡಲು ಚಿತೆಯಮೇಲೆ ಇಟ್ಟಾಗ ಕಿಟ್ ನಿಂದ ವಿಫರೀತ ರಕ್ತ ಸುರಿಯುತಿದ್ದುದನ್ನು ಕಂಡು ತೆರೆದಾಗ ವೃದ್ಧನ ತಲೆಗೆ ಬಲವಾದ ಪೆಟ್ಟು ಬಿದ್ದು ರಕ್ತ ಸುರಿಯುತಿತ್ತು. ಈ ಕುರಿತು ಮೃತ ವೃದ್ಧನ ಪುತ್ರ ನರಸಿಂಹ ಮಂಜು ಮಡಿವಾಳ್ ಕನ್ನಡವಾಣಿಗೆ ಪ್ರತಿಕ್ರಿಯಿಸಿದ್ದು ,ಕೋವಿಡ್ ವಾರ್ಡ ನ ಸಿಬ್ಬಂದಿ ನಿರ್ಲಕ್ಷದಿಂದ ನನ್ನ ತಂದೆ ಸಾವು ಕಂಡಿರುವುದಾಗಿ ಆರೋಪ ಮಾಡಿದ್ದಾರೆ.

ಆಸ್ಪತ್ರೆ ಅಧಿಕಾರಿಗಳು ಹೇಳೋದು ಏನು.?

ಇನ್ನು ಈ ಕುರಿತು ಪಂಡಿತ್ ಆಸ್ಪತ್ರೆಯ ಮುಖ್ಯಾಧಿಕಾರಿ ಡಾ.ಗಜಾನನ ಭಟ್ ಪ್ರತಿಕ್ರಿಯಿಸಿದ್ದು , ರೋಗಿಗೆ ಕರೋನಾ ಪಾಸಿಟಿವ್ ಬಂದ ನಂತರ ಡಾ.ಚೇತನ್ ರವರು ಅವರ ಆರೈಕೆ ಮಾಡಿದ್ದಾರೆ. ತೀವ್ರ ಉಸಿರಾಟ ಸಮಸ್ಯೆ ಇದ್ದಿದ್ದರಿಂದ ಅವರಿಗೆ ಆರ್.ಎಮ್ .ಡಿ ಸಿವಿರ್ (ಆಂಟಿ ವೈರಲ್ )ಇಂಜೆಕ್ಷನ್ ,ಹಿಪೇರಿಯನ್ (ರಕ್ತ ಹೆಪ್ಪುಗಟ್ಟಲು ನಿಲ್ಲಲು ನೀಡುವುದು) , ಆ್ಯಂಟಿ ಬಯಾಟಿಕ್ ನೀಡಲಾಗಿತ್ತು. ಈ ಸಂದರ್ಭದಲ್ಲಿ ಆಕ್ಸಿಜನ್ ಹಾಕಬೇಕಿತ್ತು. ಆಗ ಅವರು ಮೂತ್ರಕ್ಕೆ ಹೋಗಬೇಕು ಎಂದು ಹೇಳಿದ್ದಾರೆ. ಆಗ ಸಿಬ್ಬಂದಿಗಳು ಮೂತ್ರದ ಪಾಟ್ ಕೊಡುತ್ತೇವೆ ಇಲ್ಲಿಯೇ ಮಾಡಿ ಎಂದು ಹೇಳಿದ್ದಾರೆ. ಆದರೇ ಅದಕ್ಕೆ ಅವರು ಇದರಲ್ಲಿ ಮಾಡುವುದಿಲ್ಲ ಎಂದು ಹೇಳಿದ್ದಾರೆ. ಆಗ ಸಿಬ್ಬಂದಿಗಳು ಇಂಜೆಕ್ಷನ್ ನೀಡಲಾಗಿದೆ ,ನಿಮ್ಮ ಸ್ಥಿತಿ ಸರಿ ಇಲ್ಲ ಹೋಗಬೇಡಿ ಎಂದರೂ ಮಾತು ಕೇಳದೇ ಶೌಚಾಲಯಕ್ಕೆ ಹೋಗಿದ್ದಾರೆ. ಈ ವೇಳೆ ಶೌಚಾಲಯದಲ್ಲಿ ನಿತ್ರಾಣವಾಗಿ ಬಿದ್ದು ತಲೆಗೆ ಪೆಟ್ಟಾಗಿದೆ. ಅಷ್ಟರಲ್ಲಿ ಅವರನ್ನು ಎತ್ತಿ ಸಿಬ್ಬಂದಿಗಳು ಅವರನ್ನು ಬೆಡ್ ನಲ್ಲಿ ಮಲಗಿಸಿದ್ದಾರೆ. ಆದರೇ ಅವರ ಜೀವ ಹೋಗಿತ್ತು. ನಂತರ ಕುಟುಂಬಕ್ಕೆ ತಿಳಿಸಲಾಗಿದೆ ಎಂದು ಅವರು ಹೇಳಿದ್ದು ಡಾ.ಚೇತನ್ ಕಳೆದ ಒಂಬತ್ತು ತಿಂಗಳಿಂದ ಒಂದೇ ಒಂದು ರಜೆ ತೆಗೆದುಕೊಳ್ಳದೇ ಕರ್ತವ್ಯ ನಿರ್ವಹಿಸಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ವೃದ್ಧನಿಗೆ ವೈದ್ಯರು ಹೊಡೆದು ಕೊಂದಿದ್ದಾರೆ ಎಂದು ವಿಡಿಯೋ ಹರಿದಾಡುತ್ತಿದೆ. ಹಾಗೇ ವೈದ್ಯರು ಮಾಡಲು ಸಾಧ್ಯವಿಲ್ಲ. ಈ ರೀತಿ ಸುಳ್ಳು ಮಾಹಿತಿ ಹೋಗುವುದರಿಂದ ವೈದ್ಯರ ಆತ್ಮಸ್ಥರ್ಯ ಕುಸಿಯುತ್ತದೆ. ಪ್ರತಿಯೊಂದು ಸಿ.ಸಿ ಕ್ಯಾಮರಾದಲ್ಲಿ ದಾಖಲಾಗಿದೆ. ಸಂಬಂಧ ಪಟ್ಟ ಅಧಿಕಾರಿಗಳು ಕೇಳಿದಲ್ಲಿ ಸಿ.ಸಿಟಿವಿ ವಿಡಿಯೋ ವನ್ನು ನೀಡಲು ಸಿದ್ದರಿದ್ದೇವೆ. ಡಾ. ಚೇತನ್ ರವರು ವೃದ್ಧ ಕೋವಿಡ್ ಆಸ್ಪತ್ರೆಗೆ ನೆಡೆದುಕೊಂಡು ಬಂದಿದ್ದರಿಂದ ಆತನಿಗೆ ತೀವ್ರ ಉಸಿರಾಟದ ಸಮಸ್ಯೆ ಇದ್ದರೂ ಕಾರವಾರದ ಆಸ್ಪತ್ರೆಗೆ ಕಳಿಸದೇ ಮೊದಲು ಇಲ್ಲಿ ಚಿಕಿತ್ಸೆ ನೀಡಿದ್ದಾರೆ. ಈ ಬಗ್ಗೆ ನಾನು ಅವರಲ್ಲಿ ಕೇಳಿದಾಗ ಅವರನ್ನು ಕಾರವಾರದ ಆಸ್ಪತ್ರೆಗೆ ಒಯ್ಯುವುದರೊಳಗೆ ಸಾಯುವ ಸಾಧ್ಯತೆ ಇತ್ತು. ಹೀಗಾಗಿ ಇಲ್ಲಿಯೇ ಚಿಕಿತ್ಸೆ ನೀಡಿದ್ದೇನೆ ಎಂದು ಹೇಳಿದ್ದಾರೆ. ಈ ಬಗ್ಗೆ ತನಿಖೆ ಎದುರಿಸಲು ಸಿದ್ದರಿದ್ದೇವೆ. ರೋಗಿಯನ್ನು ಹೊಡೆದು ಕೊಲ್ಲುವ ಅವಷ್ಯಕತೆ ಏನಿದೆ ಎಂಬುದಾಗಿ ತಿಳಿಸಿದ ಅವರು ಶವ ವನ್ನು ನೀಡಿದಾಗ ಯಾವುದೇ ರೀತಿ ರಕ್ತ ಸೋರುತ್ತಿರಲಿಲ್ಲ‌ ಇಂಜೆಕ್ಷನ್ ನೀಡಿದ್ದರಿಂದ ಅದರ ಪ್ರಭಾವದ ರಿಯಾಕ್ಷನ್ ನಿಂದ ರಕ್ತ ಸೋರಿದೆ ಎಂದು ಸ್ಪಷ್ಟಿಕರಣ ನೀಡಿದ್ದಾರೆ.

ಸದ್ಯ ಆತ ಶೌಚಕ್ಕೆ ಹೋದಾಗ ಬಿದ್ದು ಪೆಟ್ಟಾಗಿರುವುದು ಸತ್ಯ ಸಂಗತಿ. ಇನ್ನು ಈ ವಿಡಿಯೋ ಕೂಡ ರೆಕಾರ್ಡ ಆಗಿದೆ. ಆದರೇ ಮೃತರ ಕುಟುಂಬದವರು ಈವರೆಗೂ ಈ ಕುರಿತು ಠಾಣೆಯಲ್ಲಾಗಲಿ ,ಸಂಬಂಧಪಟ್ಟ ಅಧಿಕಾರಿಗಳಿಗಾಗಲಿ ದೂರು ನೀಡಿಲ್ಲ. ಮೇಲುನೋಟಕ್ಕೆ ಸಿಬ್ಬಂದಿಗಳ ಲೊಪ ಕಂಡರೂ ತನಿಖೆ ನಂತರ ನಿಜ ತಿಳಿಯಲಿದೆ. ಆದರೇ ಸತ್ತ ವ್ಯಕ್ತಿಯ ಜೀವನ ಮರಳಿ ಬಾರದು.
ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

error: Content is protected !!