ಕಾಡಿನಲ್ಲಿದ್ದ ಜಿಂಕೆಯನ್ನು ಬಂಧಿಸಿ ಆರು ತಿಂಗಳಿಂದ ಮನೆಯಲ್ಲಿಟ್ಟ ಭೂಪ-ಅರಣ್ಯ ಇಲಾಖೆಯಿಂದ ಜಿಂಕೆ ರಕ್ಷಣೆ.

1154

ಕಾರವಾರ:- ಅಕ್ರಮವಾಗಿ ಆರು ತಿಂಗಳಿಂದ ಜಿಂಕೆ ಹಿಡಿದಿಟ್ಟುಕೊಂಡಿದ್ದ ವ್ಯಕ್ತಿ ಮನೆಗೆ ಸಂಚಾರಿ ಅರಣ್ಯ ಘಟಕ ದಳದವರು ದಾಳಿ ನಡೆಸಿ ವ್ಯಕ್ತಿಯನ್ನು ಬಂಧಿಸಿದ ಘಟನೆ ಉತ್ತರ ಕನ್ನಡ ಜಿಲ್ಲೆಯ ಶಿರಸಿ ತಾಲೂಕಿನ ಕಲಕೊಪ್ಪದಲ್ಲಿ ನಡೆದಿದೆ.

ಹಬೀಬ್ ರೆಹಮಾನ ಮಹ್ಮದ್ ಸಾಬ್(46) ಬಂಧಿತ ಆರೋಪಿಯಾಗಿದ್ದು ,ಈತ ಕಾಡಿನಲ್ಲಿದ್ದ ಜಿಂಕೆಯನ್ನು ಹಿಡಿದು ಬಂಧಿಸಿ ಆರು ತಿಂಗಳಿಂದ ಮನೆಯಲ್ಲಿ ಇಟ್ಟುಕೊಂಡಿದ್ದ. ಕಚಿತ ಮಾಹಿತಿ ಪಡೆದ ದಾಂಡೇಲಿ ಸಂಚಾರಿ ಅರಣ್ಯ ಪೊಲೀಸ್ ದಳ ದಾಳಿ ನಡೆಸಿ ಆರೋಪಿಯನ್ನು ಆರಣ್ಯ ಕಾಯ್ದೆಯಡಿ ಬಂಧಿಸಿ ನ್ಯಾಯಾಲಯದ ವಶಕ್ಕೆ ನೀಡಿದ್ದು ,ಆರೋಪಿಯನ್ನು 15 ದಿನಗಳ ಕಾಲ ನ್ಯಾಯಾಂಗ ಬಂಧನ ವಿಧಿಸಿದೆ.


ಜಿಂಕೆಯನ್ನು ವಶಪಡಿಸಿಕೊಂಡು ಶಿರಸಿ ಅರಣ್ಯ ಇಲಾಖೆ ಸುಪರ್ದಿಗೆ ನೀಡಿದ್ದು ಕಾರ್ಯಾಚರಣೆಯಲ್ಲಿ
ದಾಂಡೇಲಿ ಸಿ.ಐ.ಡಿ ಅರಣ್ಯ ಘಟಕದ ಪಿ.ಎಸ್.ಐ. ಮಂಜುನಾಥ ಬೋರಕರ ಹಾಗು ಸಿಬ್ಬಂದಿಗಳು ಭಾಗವಹಿಸಿದ್ದರು.




ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

error: Content is protected !!