ಕಾರವಾರ :- ಶಿರಸಿ ನಗರದ ಪೆಟ್ರೋಲ್ ಬಂಕ್‌ಗಳಲ್ಲಿ ಇಂದು ಲೀಟರ್ ಡೀಸೆಲ್ ದರ ₹100.12ಕ್ಕೆ ಏರಿಕೆಯಾಗಿದ್ದು, ಇದು ಈವರೆಗಿನ ರಾಜ್ಯದಲ್ಲೇ ಅತೀ ಏರಿಕೆಯ ದಾಖಲೆಯಾಗಿದೆ.
ಇಂದು ಪ್ರತಿ ಲೀಟರ್ ದರ ₹97.35 ಪೈಸೆ ಇತ್ತು. ಒಂದೇ ದಿನಕ್ಕೆ ಅದು 37 ಪೈಸೆಯಷ್ಟು ಹೆಚ್ಚಳವಾಗಿದೆ. ಪೆಟ್ರೋಲ್ ದರ ಕೂಡ ₹109.71ಕ್ಕೆ ಏರಿಕೆಯಾಗಿದೆ. ಹಿಂದಿನ ದಿನಕ್ಕೆ ಹೋಲಿಸಿದರೆ 30 ಪೈಸೆಯಷ್ಟು ಹೆಚ್ಚಳವಾಗಿದೆ. ಪ್ರತಿದಿನ ನಗರದಲ್ಲಿ ಪೆಟ್ರೋಲ್, ಡೀಸೆಲ್ ದರ ಸರಾಸರಿ ಮೂವತ್ತು ಪೈಸೆ ಹೆಚ್ಚಳವಾಗುತ್ತಿದೆ.
ಆದರೇ ಜಿಲ್ಲಾ ಕೇಂದ್ರ ಕಾರವಾರ ದಲ್ಲಿ ಮಾತ್ರ ಪೆಟ್ರೋಲ್ -₹109.30ಡೀಸೆಲ್ – ₹99.79 ದರ ಏರಿಕೆ ಕಂಡಿದೆ.
ದುಬಾರಿ ಸಾಗಾಟ ವೆಚ್ಚ ಡಿಸೆಲ್ ದರ ಹೆಚ್ಚಳ.

ಉತ್ತರ ಕನ್ನಡ ಜಿಲ್ಲೆಯ ಶಿರಸಿಗೆ ಮಂಗಳೂರಿನಿಂದ ಪೆಟ್ರೋಲ್, ಡೀಸೆಲ್ ಪೂರೈಕೆ ಆಗುತ್ತಿದೆ. ಸಾಗಾಣಿಕೆ ವೆಚ್ಚ ಹೆಚ್ಚಳವಾಗುವ ಕಾರಣ ದರ ಉಳಿದ ಕಡೆಗಿಂತ ಹೆಚ್ಚಾಗಿದೆ.
ಕಾರವಾರಕ್ಕೆ ಬೆಳಗಾವಿ ಕಡೆಯಿಂದ ಪೆಟ್ರೋಲ್, ಡೀಸೆಲ್ ಪೂರೈಕೆಯಾಗುತ್ತದೆ. ಹೀಗಾಗಿ ಇಲ್ಲಿ ದರ ಕಡಿಮೆ ಇದೆ. ರಾಜ್ಯದಲ್ಲಿ ಅತೀ ಹೆಚ್ಚು ದರವು ಶಿರಸಿ ಹಾಗೂ ಬಳ್ಳಾರಿ ಭಾಗದಲ್ಲಿ ಮಾತ್ರ ದಾಖಲಾಗಿದೆ.ಆದರೇ ಇದೀಗ ಏಕಾ ಏಕಿ ನೂರರ ಗಡಿ ದಾಟಿರುವುದು ವಾಹನ ಸವಾರರನ್ನು ಬೆಚ್ಚಿ ಬೀಳಿಸುವಂತೆ ಮಾಡಿದೆ.