BREAKING NEWS
Search

ಶಿರಸಿ-₹10 ಕೋಳಿ ಮರಿಗೆ ₹52 ಟಿಕೇಟ್ ನೀಡಿದ ಕೆ.ಎಸ್.ಆರ್.ಟಿ.ಸಿ ನಿರ್ವಾಹಕ!

1450

ಕಾರವಾರ :- ದೇಹಕ್ಕಿಂತ ಮೂಗುತಿ ಭಾರ ಎನ್ನುವ ಗಾದೆ ಮಾತು ಅಲೆಮಾರಿ ಕುಟುಂಬೊಂದಕ್ಕೆ ನಿಜವಾಗಿದೆ. ಹೌದು . ದಕ್ಷಿಣ ಕನ್ನಡ ಜಿಲ್ಲೆಯ ಅಲೆಮಾರಿ ಕುಟುಂಬವೊಂದು ಹೊಸನಗರದಿಂದ ಶಿರಸಿಗೆ ಬಂದಿಳಿದಿತ್ತು. ಈ ವೇಳೆ ಶಿರಸಿ ನಗರದಲ್ಲಿ ಹತ್ತು ರುಪಾಯಿ ನೀಡಿ ಕೋಳಿ ಮರಿ ಕರೀದಿಸಿದ ಆ ಕುಟುಂಬ , ಶಿರಸಿಯಿಂದ ಖಾಸಗಿ ಬಸ್ ನಲ್ಲಿ ಹೊಸನಗರಕ್ಕೆ ಬಂದಿದ್ದ ಅವರು ಶಿರೂರಿಗೆ ಕೆ.ಎಸ್.ಆರ್.ಟಿ.ಸಿ ಬಸ್ ಮೂಲಕ ಹೊರಟಿದ್ದರು.

ಆದರೇ ಕೈಯಲ್ಲಿ ಲಗೇಜ್ ನೊಂದಿಗೆ ಕೋಳಿ ಮರಿ ಇದ್ದುದನ್ನು ಗಮನಿಸಿದ ಕಂಡಕ್ಟರ್ ಕೋಳಿ ಮರಿಗೂ ₹52 ಯ ಅರ್ಥ ಟಿಕೇಟ್ ನೀಡಿದ್ದಾರೆ.
ಹತ್ತು ರುಪಾಯಿಯ ಕೋಳಿ ಮರಿಗೆ ₹52 ಯನ್ನು ಟಿಕೇಟ್ ನೀಡಿದ್ದಕ್ಕೆ ಹೌಹಾರಿದ ಆ ಕುಟುಂಬ ಕೋಳಿ ಮರಿ ಕರೀದಿಸಿದ ತಪ್ಪಿಗೆ ಪಶ್ಚತಾಪ ಪಡುವಂತಾಯಿತು.




ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

error: Content is protected !!