BREAKING NEWS
Search

ಶಿರಸಿ ಮಾರಿಕಾಂಬಾ ದೇವಿ ಸೇವೆಗೆ ದುಬಾರಿ ಶುಲ್ಕ-ವ್ಯಾಪಾರ ಕೇಂದ್ರಮಾಡಿದ ಆಡಳಿತ ಮಂಡಳಿ-ಭಕ್ತರ ಆಕ್ರೋಶ

733

ಕಾರವಾರ : ರಾಜ್ಯದ ಶಕ್ತಿಪೀಠದಲ್ಲಿ ಒಂದೆನಿಸಿ ಲಕ್ಷಾಂತರ ಭಕ್ತರನ್ನು ಸೆಳೆಯುವ ಶಿರಸಿಯ ಮಾರಿಕಾಂಬಾ ದೇವಾಲಯದಲ್ಲಿ ಧಾರ್ಮಿಕ ಸೇವೆ ಗಳಿಗೆ ಆಡಳಿತ ಮಂಡಳಿ ಇದೀಗ ದುಬಾರಿ ಶುಲ್ಕ ವಿಧಿಸಲು ಹೊರಟಿದೆ. ಈ ಕುರಿತು ಆಡಳಿತ ಮಂಡಳಿ ಸಭೆ ನಡೆಸಿ ,ಕರಡು ಪ್ರತಿ ಹೊರಡಿಸಿ ದೇವಸ್ಥಾನದ ಸೂಚನಾ ಫಲಕಕ್ಕೆ ಹಾಕಿದ್ದು ಸೆ.5 ರ ಒಳಗೆ ಸಾರ್ವಜನಿಕರು ಆಕ್ಷೇಪಣೆ ಸಲ್ಲಿಸಲು ಕೋರಿದೆ.

ಕಳೆದ ಹಲವು ವರ್ಷದಿಂದ ಸ್ಥಿರತೆ ಕಂಡುಕೊಂಡಿದ್ದ ಸೇವಾದರವನ್ನು ಪರಿಷ್ಕರಿಸಲು ಹಾಲಿ ಧರ್ಮದರ್ಶಿ ಮಂಡಳಿ ನಿರ್ಧರಿಸಿದೆ.ಬಹುತೇಕ ಎಲ್ಲ ಸೇವೆಗಳ ದರವನ್ನು ಪ್ರಸ್ತುತಕ್ಕಿಂತ ದುಪ್ಪಟ್ಟು ಹೆಚ್ಚಿಸಲಾಗಿದೆ.

ದೇವಸ್ಥಾನದಲ್ಲಿ ರುದ್ರಾಭಿಷೇಕ ಸೇವೆಗೆ ₹10ರ ಬದಲು ₹100, ಮೃತ್ಯುಂಜಯ ಶಾಂತಿಗೆ ₹1001 ಬದಲು ₹3500, ಸತ್ಯನಾರಾಯಣ ಕಥೆಗೆ ₹325ರ ಬದಲು ₹1500ಕ್ಕೆ, ನಿರಂತರ ಪಲ್ಲಕ್ಕಿ ಸೇವೆ ದರ ₹6,001 ರಿಂದ ₹25,000ಕ್ಕೆ ಏರಿಕೆ ಮಾಡಲಾಗಿದೆ.

ಕಾರ್ತೀಕ ದೀಪೋತ್ಸವದ ಒಂದು ದಿನದ ಸೇವೆ ಮೊತ್ತವನ್ನು ₹650 ರಿಂದ ₹5,000, ಶಾಶ್ವತ ಸೇವೆಗೆ ₹6001ರ ಬದಲು ₹10,001, ನಿರಂತರ ಸೇವೆ ಪಾರಾಯಣ ₹2001ರ ಬದಲಾಗಿ ₹5,000, ಶಾಶ್ವತ ಸೇವೆಗೆ ₹6001ರ ಬದಲು 10,000ಕ್ಕೆ ಏರಿಕೆ ಮಾಡಿ ಕರಡು ಪಟ್ಟಿಯಲ್ಲಿ ಪ್ರಕಟಣೆ ಮಾಡಿದೆ.

ಆದರೇ ಇದೀಗ ಧರ್ಮದರ್ಶಿ ಮಂಡಳಿಯ ಈ ಕ್ರಮ ಇದೀಗ ಭಕ್ತರಲ್ಲಿ ವಿರೋಧಕ್ಕೆ ಕಾರಣವಾಗಿದೆ. ಕರೋನಾ ಸಂದರ್ಭದಲ್ಲಿ ಈ ರೀತಿ ಏಕಾ ಏಕಿ ಏರಿಕೆ ಸರಿಯಲ್ಲ,ದೇವಸ್ಥಾನವು ವ್ಯಾಪಾರ ಕೇಂದ್ರವಲ್ಲಾ ,ಶ್ರದ್ದಾ ಕೇಂದ್ರ. ಹೀಗೆ ಭಕ್ತರ ನಂಬಿಕೆ ಮೇಲೆ ಹಣ ಹೊಂದಿಸುವ ಕೆಲಸ ಸರಿಯಲ್ಲ ಎಂಬ ಅಭಿಪ್ರಾಯ ಇದೀಗ ಭಕ್ತ ವಲಯದಲ್ಲಿ ಕೇಳಿಬಂದಿದೆ.
ಇನ್ನು ದರ ಹೆಚ್ಚಳವನ್ನು ಸಮರ್ಥಿಸಿಕೊಂಡಿರುವ
ಮಾರಿಕಾಂಬಾ ದೇವಸ್ಥಾನ ಧರ್ಮದರ್ಶಿ ಮಂಡಳದ ಅಧ್ಯಕ್ಷ ರವೀಂದ್ರ ಜಿ.ನಾಯ್ಕ ರವರು ಈಗಿನ ಕಾಲಮಾನಕ್ಕೆ ಅನುಗುಣವಾಗಿ ಸೇವಾದರ ಪರಿಷ್ಕರಿಸಲು ನಿಯಮದ ಪ್ರಕಾರ ಮುಂದಾಗಿದ್ದೇವೆ. ಭಕ್ತರು ಆಕ್ಷೇಪಣೆ ಸಲ್ಲಿಸಲು ಕಾಲಾವಕಾಶ ನೀಡಲಾಗಿದ್ದು, ಅವರ ಅಭಿಪ್ರಾಯ ಪಡೆದು ಅಂತಿಮ ನಿರ್ಣಯವಾಗುತ್ತದೆ ಎಂದಿದ್ದಾರೆ.

ಇದನ್ನೂ ಓದಿ:-

https://kannadavani.news/uttarakannada-yallapura-covid-patient-birthday-celebration-at-yallahpur/

Home » ಶಿರಸಿ ಮಾರಿಕಾಂಬಾ ದೇವಿ ಸೇವೆಗೆ ದುಬಾರಿ ಶುಲ್ಕ-ವ್ಯಾಪಾರ ಕೇಂದ್ರಮಾಡಿದ ಆಡಳಿತ ಮಂಡಳಿ-ಭಕ್ತರ ಆಕ್ರೋಶ



ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

error: Content is protected !!