BREAKING NEWS
Search

ರಸ್ತೆಯಲ್ಲೇ ವಿದ್ಯುತ್ ಕಂಬ ಬಿಟ್ಟು ರಸ್ತೆ ನಿರ್ಮಿಸಿದ ಲೋಕೋಪಯೋಗಿ ಇಲಾಖೆ.

1065

ಕಾರವಾರ:- ಶಿರಸಿ ಎಂ.ಇ.ಎಸ್ ಕಾಲೇಜು ರಸ್ತೆಯಲ್ಲಿ ಮೂರು ವಿದ್ಯುತ್ ಕಂಬಗಳನ್ನು ಸ್ಥಳಾಂತರಿಸದೆ ರಸ್ತೆ ಕಾಮಗಾರಿ ಆರಂಭಿಸಿ ಕಂಬಗಳನ್ನು ತೆರವು ಗೊಳಿಸದೇ ಲೋಕೋಪಯೋಗಿ ಇಲಾಖೆ ಎಡವಟ್ಟು ಮಾಡಿದೆ.

ಶಿರಸಿಯ ಎಂ.ಇ.ಎಸ್.ವಾಣಿಜ್ಯ ಕಾಲೇಜು ಸಮೀಪ ರಸ್ತೆ ಮಧ್ಯದಲ್ಲಿ ಕಂಬ ಬಿಟ್ಟು ಅದರ ಸುತ್ತಲೂ ಹೊಸ ರಸ್ತೆ ನಿರ್ಮಾಣಕ್ಕೆ ಜಲ್ಲಿ ಹಾಸಲಾಗುತ್ತಿದೆ. ರೋಲರ್ ಬಳಸಿ ಸಮತಟ್ಟು ಮಾಡಲಾಗುತ್ತಿದೆ. ಇದೀಗ ಕಾಮಗಾರಿಯ ಚಿತ್ರಗಳು ಸಾಮಾಜಿಕ ಜಾಲತಾಣದಲ್ಲಿ ಹಡಿದಾಡುತ್ತಿದ್ದು, ಸಾರ್ವಜನಿಕರು ಲೋಕೋಪಯೋಗಿ ಇಲಾಖೆಯ ಕ್ರಮವನ್ನು ಟೀಕಿಸಿದ್ದಾರೆ.

ಸಂಚಾರ ಸಮಸ್ಯೆ ನಿಯಂತ್ರಿಸಿ, ಅಪಘಾತ ತಡೆಗಟ್ಟುವಲ್ಲಿ ರಸ್ತೆ ವಿಸ್ತರಣೆ ಮಾಡುತ್ತಿದ್ದಾರೆ. ಆದರೆ ವಿದ್ಯುತ್ ಕಂಬಗಳನ್ನು ರಸ್ತೆ ಮಧ್ಯೆ ಬಿಟ್ಟು ಅಪಘಾತ ಹೆಚ್ಚಳವಾಗಲು ಅಧಿಕಾರಿಗಳು ಅನುಕೂಲ ಮಾಡಿಕೊಡಲಾಗಿದೆ.

ಇನ್ನು ಸಾಮಾಜಿಕ ಜಾಲತಾಣದಲ್ಲಿ ಈ ಸುದ್ದಿ ಹರಿದಾಡುತಿದ್ದಂತೆ ಎಚ್ಚೆತ್ತ ಲೋಕೋಪಯೋಗಿ ಇಲಾಖೆ ರಸ್ತೆ ನಿರ್ಮಾಣಕ್ಕೆ ತಳಪದರ ಮಾತ್ರ ಹಾಕಲಾಗುತ್ತಿದೆ. ಕಂಬಗಳು ಸ್ಥಳಾಂತರಗೊಂಡ ಬಳಿಕ ಮೂರು ಪದರಗಳ ರಸ್ತೆ ನಿರ್ಮಾಣಗೊಳ್ಳಲಿದೆ.

ಕಂಬಗಳ ಸ್ಥಳಾಂತರಕ್ಕೆ ಹೆಸ್ಕಾಂಗೆ ಈ ಮೊದಲೇ ಸೂಚಿಸಲಾಗಿದೆ. ಬಹುತೇಕ ಕಂಬಗಳನ್ನು ಸ್ಥಳಾಂತರಿಸಲಾಗಿದ್ದು, ಮೂರು ಕಂಬಗಳ ಸ್ಥಳಾಂತರಕ್ಕೆ ಈ ಮೊದಲು ಅನುಮತಿ ಸಿಕ್ಕಿರಲಿಲ್ಲ. ಮುಂದಿನ ಗುರುವಾರ ಅವುಗಳನ್ನು ಸ್ಥಳಾಂತರಿಸಲಾಗುವುದು .ಈ ಕುರಿತು ಹೆಸ್ಕಾಂ ಇಲಾಖೆಗೆ ತಿಳಿಸಲಾಗಿದೆ ಎಂದು ಲೊಕೋಪಯೋಗಿ ಇಲಾಖೆ ಎಂಜಿನಿಯರ್ ಹನುಮಂತ ನಾಯ್ಕ ತಿಳಿಸಿದ್ದಾರೆ.




ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

error: Content is protected !!