BREAKING NEWS
Search

ಶಿರಸಿ ಅಡಿಕೆ ಕದ್ದು ಸಿಕ್ಕಿಬಿದ್ದ ನಿವೃತ್ತ ಎ.ಎಸ್.ಐ

3242

ಶಿರಸಿ:- ಕಳೆದ ಒಂದು ವಾರಗಳ ಹಿಂದೆ ಶಿರಸಿ ತಾಲೂಕಿನ ಚಿಪಗಿ ಬಳಿ ತೋಟದಲ್ಲಿದ್ದ ಹಸಿ ಅಡಿಕೆಯನ್ನು ಕದ್ದು ಮಾರಲು ಪ್ರಯತ್ನಿಸುತ್ತಿದ್ದ ನಿವೃತ್ತ ಎ.ಎಸ್.ಐ. ಓರ್ವನನ್ನು ಶಿರಸಿ ಗ್ರಾಮೀಣ ಠಾಣೆ ಪೊಲೀಸರು ಬಂಧಿಸಿರುವ ಘಟನೆ ಇಂದು ನಡೆದಿದೆ.

ರಾಮಚಂದ್ರ ದೇವು ನಾಯ್ಕ ಎಂಬಾತನೇ ಬಂಧಿತ ಆರೋಪಿಯಾಗಿದ್ದಾನೆ. ಈತ ಕಳೆದ ಒಂದು ವಾರಗಳ ಹಿಂದೆ ಚಿಪಗಿಯ ತನ್ನ ಆಸ್ತಿಯ ಪಕ್ಕದಲ್ಲಿದ ಮಹಾಬಲೇಶ್ವರ ಭಟ್ ಎಂಬುವವರ ತೋಟದಲ್ಲಿರುವ ಅಡಿಕೆಯನ್ನು ರಾತ್ರಿ ವೇಳೆಯಲ್ಲಿ ಕದ್ದು ನಾಪತ್ತೆಯಾಗಿದ್ದ. ಈ ಕುರಿತು ಮಹಾಬಲೇಶ್ವರ ಭಟ್ಟ ಅವರು ಶಿರಸಿ ಗ್ರಾಮೀಣ ಠಾಣೆಯಲ್ಲಿ ದೂರೊಂದನ್ನು ದಾಖಲಿಸಿದ್ದರು.

ಡಿ.ವೈ ಎಸ್.ಪಿ. ರವಿ ನಾಯ್ಕ ಹಾಗೂ ಸಿ.ಪಿ.ಐ.ರಾಮಚಂದ್ರ ನಾಯಕ ಇವರ ಮಾರ್ಗದರ್ಶನದಲ್ಲಿ ಪಿ.ಎಸ್.ಐ.ಶ್ಯಾಮ ಪಾವಸ್ಕರ ತನಿಖೆ ಕೈಗೊಂಡಿದ್ದು ,ಆರೋಪಿ ಆರ್.ಡಿ.ನಾಯ್ಕ ಅವರು ಹಸಿ ಅಡಿಕೆಯನ್ನು ಕಳ್ಳತನ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಧಿಸಿ, ಅವರನ್ನು ಶಿರಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ.

ಸುಮಾರು 30 ಸಾವಿರ ರು.ಗಳ ಹಸಿ ಅಡಿಕೆ ಕಳ್ಳತನದ ಆರೋಪ ಇವರ ಮೇಲಿದ್ದು, ಆರೋಪಿಗೆ ನ್ಯಾಯಾಲಯವು 15 ದಿನಗಳ ನ್ಯಾಯಾಂಗ ಬಂಧ ವಿಧಿಸಿದೆ.




ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

error: Content is protected !!