ಹಿಂದೂ ಧಾರ್ಮಿಕ ದೇವಾಲಯಗಳ ಮಹಾಮಂಡಳದ ಪ್ರತಿನಿಧಿಗಳಿಂದ ಸ್ವರ್ಣವಲ್ಲಿಯಲ್ಲಿ ಸಭೆ- ದೇವಸ್ಥಾನಗಳಿಗೆ ವ್ಯವಸ್ಥಾಪಕ ಸಮಿತಿ ನಿರ್ಧಾರ ಕೈಬಿಡಿ

555

ಕಾರವಾರ :- ರಾಜ್ಯದಲ್ಲಿ ದೇವಸ್ಥಾನಗಳಿಗೆ ನಿರ್ವಹಣಾಧಿಕಾರಿ, ವ್ಯವಸ್ಥಾಪನಾ ಸಮಿತಿ ರಚನೆ
ಕೈಬಿಡಬೇಕು ಎಂಬ ಬೇಡಿಕೆಯನ್ನು ಇಟ್ಟುಕೊಂಡು
ಶಿರಸಿಯ ಸ್ವರ್ಣವಲ್ಲೀ ಮಹಾ ಸಂಸ್ಥಾನದ ಮಠಾಧೀಶರಾದ ಶ್ರೀ ಗಂಗಾಧರೇಂದ್ರ ಸರಸ್ವತೀ ಸ್ವಾಮಿಗಳ ನೇತ್ರತ್ವದಲ್ಲಿ ಉತ್ತರ ಕನ್ನಡ ಜಿಲ್ಲಾ ಹಿಂದೂ ಧಾರ್ಮಿಕ ದೇವಾಲಯಗಳ ಮಹಾಮಂಡಳದ ಪ್ರತಿನಿಧಿಗಳಿಂದ ಸ್ವರ್ಣವಲ್ಲಿಯಲ್ಲಿ ಸಭೆ ನಡೆಸಲಾಯಿತು.

ಈ ಸಭೆಯಲ್ಲಿ ದೇವಸ್ಥಾನದ ನಿರ್ವಹಣೆಯನ್ನು ಸರಕಾರೀಕರಣ ಮಾಡುವುದಕ್ಕೆ ವಿರೋಧ ವ್ಯಕ್ತಪಡಿಸಲಾಗಿದ್ದು ,ಭಕ್ತರ ಕೈಯಲ್ಲಿ ದೇವಸ್ಥಾನದ ಆಡಳಿತ ಇರುವಂತಾಗಬೇಕು,ಸರ್ವಸಮ್ಮತವಾದ ಕಾನೂನನ್ನು ರೂಪಿಸಲು ಸರಕಾರ ಮುಂದಾಗಬೇಕು ಈ ಬಗ್ಗೆ ಸಂಬಂಧಿಸಿದ ಇಲಾಖಾ ಅಧಿಕಾರಿಗಳಿಗೆ ಮನವಿ ಸಲ್ಲಿಕೆಗೆ ತೀರ್ಮಾನ ಮಾಡಲಾಯಿತು.

ಇನ್ನು ಈ ವಿಷಯವನ್ನು ಸ್ಥಳೀಯ ಜನಪ್ರತಿನಿಧಿಗಳು, ಸ್ಪೀಕರ್, ಸಚಿವರ, ಸಂಸದರ ಗಮನಕ್ಕೆ ತರಲು ತೀರ್ಮಾನ ಮಾಡಲಾಗಿದ್ದು ಸರ್ವಸಮ್ಮತವಾದ ಕಾನೂನನ್ನು ರೂಪಿಸಲು ಸರಕಾರ ಮುಂದಾಗಬೇಕು.
ಸರಕಾರದಿಂದ ಹಿಂದೂ ದೇವಾಲಯಗಳ ಹಾಗೂ ಧಾರ್ಮಿಕ ಸಂಸ್ಥೆಗಳ ಮೇಲಾಗುತ್ತಿರುವ ನಿರಂತರ ದೌರ್ಜನ್ಯದ ಬಗ್ಗೆ ಸರಕಾರದ ಮಟ್ಟದಲ್ಲಿ ಚರ್ಚೆ ಆಗಬೇಕು. ಹಿಂದೂ ದೇವಾಲಯ ಹಾಗೂ ಧಾರ್ಮಿಕ ಸಂಸ್ಥೆಗಳ ಸ್ವಾಯತ್ತತೆ, ಸ್ವಾತಂತ್ರ್ಯಕ್ಕೆ ಧಕ್ಕೆ ಬರದ ರೀತಿಯಲ್ಲಿ ಅಗತ್ಯ ಕ್ರಮ ವಹಿಸಲು ಆಗ್ರಹ ಪಡಿಸಲು ಸಭೆ ನಿರ್ಣಯ ಕೈಗೊಂಡಿದೆ.
ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

error: Content is protected !!