ಉತ್ತರ ಕನ್ನಡ ಜಿಲ್ಲೆಯಲ್ಲಿ 41 ವಿದ್ಯಾರ್ಥಿಗಳು ಪರೀಕ್ಷೆಗೆ ಗೈರು-ಮಳೆಯ ಅಬ್ಬರದಲ್ಲೂ ಗೋವಾ ರಾಜ್ಯದಿಂದ ಕಾರವಾರಕ್ಕೆ ಆಗಮಿಸಿ ಪರೀಕ್ಷೆ ಬರೆದ ವಿದ್ಯಾರ್ಥಿಗಳು.

745

ಕಾರವಾರ:- ಉತ್ತರ ಕನ್ನಡ ಜಿಲ್ಲೆಯ 122 ಕೇಂದ್ರಗಳಲ್ಲಿ ಸೋಮವಾರ SSLC ಮೊದಲ ಪರೀಕ್ಷೆಯು ಸಾಂಗವಾಗಿ ನೆರವೇರಿತು. ಕಾರವಾರ ಶೈಕ್ಷಣಿಕ ಜಿಲ್ಲೆಯಲ್ಲಿ 10,259 ವಿದ್ಯಾರ್ಥಿಗಳಲ್ಲಿ 10,227 ಮಂದಿ ಪರೀಕ್ಷೆಗೆ ಹಾಜರಾಗಿದ್ದರು. 32 ಮಂದಿ ಗೈರಾಗಿದ್ದರು.ಅಂಕೋಲಾದ ಮೂವರು ಮತ್ತು ಕುಮಟಾದ ಒಬ್ಬ ವಿದ್ಯಾರ್ಥಿ ಕೋವಿಡ್ ಆರೈಕೆ ಕೇಂದ್ರದಲ್ಲೇ ಪರೀಕ್ಷೆ ಬರೆದರು.

ಶಿರಸಿ ಶೈಕ್ಷಣಿಕ ಜಿಲ್ಲೆಯಲ್ಲಿ 10,033 ವಿದ್ಯಾರ್ಥಿಗಳಲ್ಲಿ 9 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜುರಾಗಲಿಲ್ಲ. ಇನ್ನು ಓರ್ವ ವಿದ್ಯಾರ್ಥಿ ತಾಂತ್ರಿಕ ತೊಂದರೆಯಿಂದ ಪ್ರತ್ತೇಕವಾಗಿ ಪರೀಕ್ಷೆ ಬರೆದಿದ್ದಾನೆ.

ಗೋವಾ ದಿಂದ ಕಾರವಾರಕ್ಕೆ ಬಂದು ಪರೀಕ್ಷೆ ಬರೆದ ವಿದ್ಯಾರ್ಥಿಗಳು

ಕಾರವಾರ ತಾಲ್ಲೂಕಿನ ಉಳಗಾ ಮಹಾಸತಿ ವಿದ್ಯಾಲಯದಲ್ಲಿ ಗೋವಾದ 67 ವಿದ್ಯಾರ್ಥಿಗಳಿಗೆ ಪರೀಕ್ಷೆ ಬರೆಯಲು ಅವಕಾಶ ನೀಡಲಾಗಿತ್ತು. ಮಾಜಾಳಿಯ ರಾಜ್ಯ ಗಡಿಯಲ್ಲಿ ಅವರಿಗೆ ಕೋವಿಡ್ ಪರೀಕ್ಷೆ ಮಾಡಿ ಕರೆಸಿಕೊಳ್ಳಲಾಯಿತು. ಅವರಲ್ಲಿ ಒಬ್ಬ ವಿದ್ಯಾರ್ಥಿಗೆ ಕೋವಿಡ್ ಕಂಡುಬಂದಿದ್ದು, ಕಾರವಾರದ ವೈದ್ಯಕೀಯ ಕಾಲೇಜಿಗೆ ದಾಖಲಿಸಲಾಗಿದೆ. ಅಲ್ಲಿಂದಲೇ ಪರೀಕ್ಷೆ ಬರೆಯಲೂ ವ್ಯವಸ್ಥೆ ಮಾಡಲಾಗಿದೆ.

ಉತ್ತಮ ವ್ಯವಸ್ಥೆ ಕಲ್ಪಿಸಿದ ಶಿಕ್ಷಣ ಇಲಾಖೆ.

ಉತ್ತರ ಕನ್ನಡ ಜಿಲ್ಲೆ ಗುಡ್ಡಗಾಡು ಪ್ರದೇಶವನ್ನು ಹೊಂದಿದ ಜಿಲ್ಲೆ.ಇದಲ್ಲದೇ ಈ ಭಾರಿಯ ಅಬ್ಬರದ ಮಳೆ ಹಳ್ಳಿಗಾಡು ಪ್ರದೇಶದಿಂದ ಮಕ್ಕಳನ್ನು ಸಂಪರ್ಕಿಸಿ ಕರೆತರುವುದು ತ್ರಾಸದಾಯಕವಾಗಿತ್ತು.

ಆದರೇ ಕಾರವಾರ ಮತ್ತು ಶಿರಸಿ ಶೈಕ್ಷಣಿಕ ಜಿಲ್ಲೆಯ ಶಿಕ್ಷಣ ಇಲಾಖೆ ಸರ್ಕಾರಿ ಬಸ್ಸುಗಳು ತೆರಳದ ಪ್ರದೇಶಕ್ಕೆ ಖಾಸಗಿ ವಾಹನ ವ್ಯವಸ್ಥೆ ಸಹ ಮಾಡಿತ್ತು. ಇದಲ್ಲದೇ ಪರೀಕ್ಷಾ ಕೇಂದ್ರಕ್ಕೆ ಎರಡು ತಾಸು ಮುಂಚಿತವಾಗಿ ಮಕ್ಕಳು ಇರುವಂತೆ ನೋಡಿಕೊಳ್ಳುವ ಜೊತೆ ಕರೋನಾ ನಿಯಮದ ಪ್ರಕಾರ ಮಕ್ಕಳಿಗೆ ಉಚಿತ ಮಾಸ್ಕ,ಸ್ಯಾನಿಟೈಸರ್ ವ್ಯವಸ್ಥೆ ಸಹ ಮಾಡಿದೆ.

ಜಿಲ್ಲೆಯ ಹೊನ್ನಾವರ ತಾಲ್ಲೂಕಿನ ಮಹಿಮೆಯಿಂದ 10 ವಿದ್ಯಾರ್ಥಿಗಳನ್ನು ಮುಖ್ಯ ರಸ್ತೆಗೆ ಕರೆತಂದು, ಗೇರುಸೊಪ್ಪ ಬಸ್‌ನಲ್ಲಿ ಪರೀಕ್ಷಾ ಕೇಂದ್ರಕ್ಕೆ ಕಳುಹಿಸಲಾಯಿತು. ಅಂತೆಯೇ ಗುಂಡಬಾಳಕ್ಕೆ ಬಸ್ ಹೋಗದ ಕಾರಣ, ಪರ್ಯಾಯ ವಾಹನದ ವ್ಯವಸ್ಥೆ ಮಾಡುವ ಮೂಲಕ ಯಾವ ವಿದ್ಯಾರ್ಥಿಗೂ ತೊಂದರೆಯಾಗದಂತೆ ವ್ಯವಸ್ಥೆ ಕಲ್ಪಿಸುವ ಮೂಲಕ ಹೆಚ್ಚಿನ ವಿದ್ಯಾರ್ಥಿಗಳು ಪರೀಕ್ಷೆ ಬರೆಯಲು ಅನುವು ಮಾಡಿಕೊಟ್ಟಿತು.




ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

error: Content is protected !!