ಉತ್ತರ ಕನ್ನಡ ದಲ್ಲಿ ಕರೋನಾ ಪಾಸಿಟಿವ್ ಹೆಚ್ಚಳ-ಎರಡು ತಾಲೂಕಿನ ನಗರದ ಶಾಲೆಗಳಿಗೆ ರಜೆ ಘೋಷಣೆ.

3556

ಕಾರವಾರ :-ಇಂದು ಉತ್ತರ ಕನ್ನಡ ಜಿಲ್ಲೆಯಲ್ಲಿ 396 ಜನರಿಗೆ ಪಾಸಿಟಿವ್ ವರದಿಯಾಗಿದ್ದು ಸಕ್ರಿಯ ಪ್ರಕರಣ 1425 ಕ್ಕೆ ಏರಿಕೆ ಕಂಡಿದೆ.

ತಾಲೂಕು ವಾರು ವಿವರ ನೋಡಿ:-

14/01/2022 ರ ವರದಿಯಂತೆ.

ವಿದ್ಯಾರ್ಥಿಗಳಲ್ಲಿ ಕರೋನಾ ಹೆಚ್ಚಳ ಹಿನ್ನಲೆ ಯಲ್ಲಿ ಕಾರವಾರ ,ಹೊನ್ನಾವರ ನಗರದ
1ರಿಂದ ,8 ನೇ ತರಗತಿ ಶಾಲೆಗಳಿಗೆ ಸೋಮವಾರ ದಿಂದ ಐದು ದಿನ ರಜೆ ಘೋಷಣೆ ಮಾಡಿ
ಜಿಲ್ಲಾಧಿಕಾರಿ ಮುಲ್ಲೈ ಮುಹಿಲನ್ ರವರು ಆದೇಶ ಮಾಡಿದ್ದಾರೆ.

ಜಿಲ್ಲಾಧಿಕಾರಿ ಆದೇಶದಲ್ಲಿ ಏನಿದೆ?

ಮಾರ್ಗಸೂಚಿಗಳು:

ಕಾರವಾರ ಮತ್ತು ಹೊನ್ನಾವರ ನಗರ ಪ್ರದೇಶದ 1 ರಿಂದ 8 ನೇ ತರಗತಿಯ ನಗರ ಪ್ರದೇಶದಲ್ಲಿನ ಸರ್ಕಾರಿ ಹಾಗೂ ಖಾಸಗಿ ಶಾಲೆಗಳನ್ನು ದಿ:17-01-2022 ರಿಂದ 21-01-2022 ರವರೆಗೆ ತರಗತಿಗಳನ್ನು ಸ್ಥಗಿತ ಮಾಡುವುದು. ಈ ಬಗ್ಗೆ ಸಂಬಂಧಿಸಿದ ಉಪನಿರ್ದೇಶಕರು ಸಾರ್ವಜನಿಕ ಶಿಕ್ಷಣ ಇಲಾಖೆ ಕಾರವಾರ ರವರು ಜಾರಿಗೆ ತರತಕ್ಕದ್ದು

ಕಾರವಾರ ಮತ್ತು ಹೊನ್ನಾವರ ನಗರ ಪ್ರದೇಶದ ಪಿಯು ಕಾಲೇಜುಗಳಲ್ಲಿ ದ್ವಿತೀಯ ಪಿ ಯು ಕಾಲೇಜಿನ ವ್ಯಾಸಂಗಕ್ಕೆ ಆದ್ಯತೆ ನೀಡಿ ಪ್ರಥಮ ಪಿಯು ತರಗತಿಗಳನ್ನು 50% ಸಂಖ್ಯೆಯ ವಿದ್ಯಾರ್ಥಿಗಳಿಗೆ ಕೋವಿಡ್-19 ರ ಶಿಷ್ಟಾಚಾರದನ್ವಯ ಪರ್ಯಾಯ ತರಗತಿಗಳನ್ನು ಆಯೋಜಿಸಿ ತರಗತಿಗಳನ್ನು ನಡೆಸುವುವ ಬಗ್ಗೆ. ಉಪನಿರ್ದೇಶಕರು ಪದವಿ ಪೂರ್ವ ಶಿಕ್ಷಣ ಇಲಾಖೆ ಕಾರವಾರ ರವರು ಕ್ರಮ ವಹಿಸುವುದು

ಕಾರವಾರ ಮತ್ತು ಹೊನ್ನಾವರ ನಗರ ಪ್ರದೇಶದ ಸರಕಾರಿ/ಖಾಸಗಿ ಪದವಿ ಕಾಲೇಜುಗಳಲ್ಲಿ ವಿದ್ಯಾರ್ಥಿಗಳ ಸಂಖ್ಯೆಗನುಗುಣವಾಗಿ ಒಟ್ಟಾರೆ 50% ವಿದ್ಯಾರ್ಥಿಗಳಿಗೆ ಮೀರದಂತ ತರಗತಿಗಳನ್ನು ನಡೆಸುವ ಬಗ್ಗೆ ಪದವಿ ಕಾಲೇಜುಗಳ ಪ್ರಾಂಶುಪಾಲರು ಕ್ರಮ ವಹಿಸುವುದು.

ಶಾಲಾ-ಕಾಲೇಜುಗಳಲ್ಲಿ ಕೋವಿಡ್-19 ರ ನೋಡಲ್ ಅಧಿಕಾರಿ ನೇಮಿಸಿ ಕೋವಿಡ್-19 ರ ಶಿಷ್ಟಾಚಾರವನ್ನು ಪಾಲನೆ ಮಾಡುವ ಬಗ್ಗೆ ಉಪನಿರ್ದೇಶಕರು ಸಾರ್ವಜನಿಕ ಶಿಕ್ಷಣ ಇಲಾಖೆ ಕಾರವಾರ, ಉಪನಿರ್ದೇಶಕರು ಪದವಿ ಪೂರ್ವ ಶಿಕ್ಷಣ ಇಲಾಖೆ ಕಾರವಾರ, ಪದವಿ ಕಾಲೇಜುಗಳ ನೋಡಲ್ ಅಧಿಕಾರಿಗಳು ಕ್ರಮ ಜರುಗಿಸುವುದು

ಶಾಲಾ-ಕಾಲೇಜು ವಿದ್ಯಾರ್ಥಿಗಳು ಮಾಸ್ಕ ದರಿಸದೇ ಸಾರ್ವಜನಿಕ ಪ್ರದೇಶದಲ್ಲಿ ಹಾಗೂ ಶಾಲಾ ಕಾಲೇಜು ಆವರಣದಲ್ಲಿ ಓಡಾಡುತ್ತಿರುವುದು ಕಂಡುಬಂದಿರುತ್ತದೆ ಕಾರಣ ಆಯಾ ವಿದ್ಯಾ ಸಂಸ್ಥೆಯ ಆಡಳಿತ ಮಂಡಳಿಯನ್ನೇ ಹೊನೆಗಾರರನ್ನಾಗಿಸಿ ಕೋವಿಡ್ 19 ರ ಶಿಷ್ಟಾಚಾರವನ್ನು ಪಾಲನೆ ಮಾಡದೇ ಇರುವ ಬಗ್ಗೆ ದಂಡ ವಿಧಿಸಲಾಗುವುದು.




ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

error: Content is protected !!