BREAKING NEWS
Search

ಉತ್ತರ ಕನ್ನಡ ಜಿಲ್ಲೆಯಲ್ಲಿ ಇಂದು ತ್ರಿಶತಕ ದಾಟಿದ ಕರೋನಾ! ಮೂರು ಜನ ಕರೋನಾಕ್ಕೆ ಬಲಿ!

2208

ಉತ್ತರ ಕನ್ನಡ ಜಿಲ್ಲೆಯಲ್ಲಿ ಇಂದು 399 ಜನರಿಗೆ ಕರೋನಾ ಪಾಸಿಟಿವ್ ವರದಿಯಾಗಿದ್ದು ಶಿರಸಿ,ಮುಂಡಗೋಡು,ಹೊನ್ನಾವರದಲ್ಲಿ ತಲಾ ಒಂದು ಸಾವು ಸಂಭವಿಸಿದೆ.

ಜಿಲ್ಲೆಯಲ್ಲಿ ಇದೇ ಮೊದಲಬಾರಿಗೆ ಈ ಪ್ರಮಾಣದಲ್ಲಿ ಕರೋನಾ ಸೋಂಕಿತರ ಸಂಖ್ಯೆ ಏರಿಕೆ ಕಂಡಿದೆ. ಈ ಬಾರಿ ಗ್ರಾಮೀಣ ಪ್ರದೇಶದಲ್ಲೂ ಕರೋನಾ ಆರ್ಭಟಿಸಿದೆ.

ತಾಲೂಕುವಾರು ವಿವರ ಈ ಕೆಳಗಿನಂತಿದೆ.

ಗೋವಾದಲ್ಲಿ ಲಾಕ್ ಡೌನ್ :ಗಡಿಭಾಗ ಮಾಜಾಳಿಯಲ್ಲಿ ಬಿಗಿಗೊಂಡ ತಪಾಸಣೆ.

ಕೊರೋನಾ ಪ್ರಕರಣಗಳು ದಿನದಿಂದ ದಿನಕ್ಕೆ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಕರ್ನಾಟಕದಂತೆ ಗೋವಾದಲ್ಲಿಯೂ ಮೇ.3 ರವರೆಗೆ ಲಾಕ್ ಡೌನ್ ವಿಧಿಸಿದ್ದು ಕರ್ನಾಟಕ ಗೋವಾ ಗಡಿಭಾಗವಾದ ಮಾಜಾಳಿ ಚೆಕ್ ಪೋಸ್ಟ್ ಬಳಿ ಕಟ್ಟುನಿಟ್ಟಿನ ತಪಾಸಣೆ ನಡೆಸಲಾಗುತ್ತಿದೆ.

ಕೊರೋನಾ ಪ್ರಕರಣಗಳು ದೇಶದಾದ್ಯಂತ ತಲ್ಲಣ ಮೂಡಿಸಿದ ಬೆನ್ನಲ್ಲಿ ಕರ್ನಾಟಕದಂತೆ ಗೋವಾದಲ್ಲಿಯೂ ಸೋಂಕು ನಿಯಂತ್ರಣಕ್ಕೆ ಮುಂದಾಗಿದ್ದು ಇಂದು ಸಂಜೆಯಿಂದ ಲಾಕ್ ಡೌನ್ ಜಾರಿಮಾಡಲಾಗುತ್ತಿದೆ.

ಇದರಿಂದ ಕರ್ನಾಟಕ ಗೋವಾ ಗಡಿಭಾಗವಾದ ಮಾಜಾಳಿ ಚೆಕ್ ಪೋಸ್ಟ್ ಬಳಿ ಎರಡು ಕಡೆ ಪೊಲೀಸರು ತಪಾಸಣೆ ಬಿಗಿ ಗೊಳಿಸಿದ್ದಾರೆ.

ಅನಾವಶ್ಯಕವಾಗಿ ಓಡಾಡುವವರ ಮೇಲೆ ನಿಗಾ ಇಟ್ಟಿದ್ದು, ನೆಗೆಟಿವ್ ಸರ್ಟಿಫಿಕೇಟ್ ಕಡ್ಡಾಯಗೊಳಿಸಲಾಗಿದೆ.

ಅಲ್ಲದೆ ತುರ್ತು ಹಾಗೂ ಅಗತ್ಯ ಸೇವೆಗಳಲ್ಲಿ ತೊಡಗಿರುವವರಿಗೆ ಮಾತ್ರ ಓಡಾಡಟಕ್ಕೆ ಅವಕಾಶ ಕಲ್ಪಿಸಲಾಗಿದೆ. ಗೋವಾದಲ್ಲಿ ಲಾಕ್ಡೌನ್ ಘೋಷಣೆಯಾದ ಕಾರಣ ಕೆಲಸಕ್ಕೆ ತೆರಳಿದ ಕಾರ್ಮಿಕರು ಕರ್ನಾಟಕದತ್ತ ಆಗಮಿಸುತ್ತಿದ್ದು ನೆಗೆಟಿವ್ ಸರ್ಟಿಫಿಕೇಟ್ ತೋರಿಸಿದವರನ್ನು ಮಾತ್ರ ಬಿಡಲಾಗುತ್ತಿದ್ದು ನಾಳೆ ಇಂದ ಗಡಿ ಭಾಗದಲ್ಲಿ ಅಗತ್ಯ ಸಂಚಾರ ಹೊರತುಪಡಿಸಿ ಎಲ್ಲವೂ ಬಂದ್ ಆಗಲಿದೆ.
ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

error: Content is protected !!