ಉತ್ತರ ಕನ್ನಡ ಜಿಲ್ಲೆಯಲ್ಲಿ ಇಂದು 64 ಜನರಿಗೆ ಕರೋನಾ ಪಾಸಿಟಿವ್ ವರದಿಯಾಗಿದ್ದು ಜಿಲ್ಲೆಯಲ್ಲಿ ಕರೋನಾಕ್ಕೆ ಮೂರು ಜನ ಬಲಿಯಾಗಿದ್ದಾರೆ.
ಕುಮಟಾದ 65 ವರ್ಷದ ವ್ಯಕ್ತಿ 59 ವರ್ಷದ ವ್ಯಕ್ತಿ ಕರೋನಾ ಕ್ಕೆ ಬಲಿಯಾಗಿದ್ದಾರೆ. ಹಾಗೆಯೇ ಶಿರಸಿಯಲ್ಲಿ ಓರ್ವ ಕರೋನಾಕ್ಕೆ ಬಲಿಯಾಗುವ ಮೂಲಕ ಜಿಲ್ಲೆಯಲ್ಲಿ ಈವರೆಗೆ 198 ಜನ ಕರೋನಾಕ್ಕೆ ಬಲಿಯಾಗಿದ್ದಾರೆ.
ತಾಲೂಕುವಾರು ವಿವರ ಈ ಕೆಳಗಿನಂತಿದೆ.

ರಾಜ್ಯ ಯಕ್ಷಗಾನ ಅಕಾಡೆಮಿ ಅಧ್ಯಕ್ಷ ಕೋವಿಡ್ ಗೆ ಬಲಿ.

ಉತ್ತರ ಕನ್ನಡ ಜಿಲ್ಲೆಯ ಸಿದ್ದಾಪುರದ ಜೋಗಿನಮನೆ ಗ್ರಾಮದ ರಾಜ್ಯ ಯಕ್ಷಗಾನ ಅಕಾಡೆಮಿ ಅಧ್ಯಕ್ಷ ಎಂ.ಎ ಹೆಗಡೆ ಇಂದು ಕರೋನಾ ದಿಂದ ನಿಧನ ಹೊಂದಿದ್ದಾರೆ.
74 ವರ್ಷ ವಯಸ್ಸಿನ ಎಂ.ಎ ಹೆಗಡೆ, ಏಪ್ರಿಲ್ 13 ರಂದು ಕೋವಿಡ್ ಸೋಂಕಿಗೆ ತುತ್ತಾಗಿದ್ದರು.
ಇಂದು ಬೆಳಿಗ್ಗೆ ತೀವೃ ಉಸಿರಾಟದ ಸಮಸ್ಯೆ ಎದುರಾಗಿತ್ತು. ಚಿಕಿತ್ಸೆ ಫಲಿಸದೇ ಎಂ.ಎ ಹೆಗಡೆ ಸಾವನ್ನಪ್ಪಿದ್ದಾರೆ.
ಅಕಾಡೆಮಿ ಅಧ್ಯಕ್ಷರಾಗಿ ಕಲೆ, ಕಲಾವಿದರ ಏಳಿಗೆಗಾಗಿ ಶ್ರಮಿಸಿದ್ದ ಇವರು ಹಲವಾರು ಪುಸ್ತಕಗಳನ್ನ ಬರೆದಿದ್ದಾರೆ. ಚಿಟ್ಟಾಣಿ ಪ್ರಶಸ್ತಿ ಸೇರಿದಂತೆ ಅನೇಕ ಪ್ರಶಸ್ತಿಗಳಿಗೆ ಭಾಜನರಾಗಿದ್ದರು.