



ಕಾರವಾರ:- ಉತ್ತರ ಕನ್ನಡ ಜಿಲ್ಲೆಯ ಶಿರಸಿ ಉಪವಿಭಾಗ ಪೊಲೀಸರು ಸಂಚಾರ ನಿಯಮ ಉಲ್ಲಂಘಿಸುವವರಿಗೆ ದಂಡದ ಬಿಸಿ ಮುಟ್ಟಿಸಿದ್ದು ದಾಖಲೆಯ ದಂಡ ವಸೂಲಿ ಮಾಡಿದ್ದಾರೆ.
ಶಿರಸಿ ಉಪವಿಭಾಗದ ಎಲ್ಲಾ 07 ಪೊಲೀಸ್ ಠಾಣೆಗಳಲ್ಲಿ ” ರಸ್ತೆ ಸುರಕ್ಷತೆ ಹಾಗೂ ಸುಗಮ ಸಂಚಾರದ ದೃಷ್ಟಿಯಿಂದ ವಿಶೇಷ ಕಾರ್ಯಾಚರಣೆಯನ್ನು ಕೈಗೊಂಡಿದ್ದು ಇಂದು ಬೆಳಿಗ್ಗೆ 10 ಗಂಟೆಯಿಂದ ಮಧ್ಯಾಹ್ನ 12 ಗಂಟೆವರೆಗೆ ಡಿವೈ ಎಸ್ ಪಿ ರವಿ ಡಿ ನಾಯ್ಕ್ ರವರ ನೇತೃತ್ವದಲ್ಲಿ ಅಧಿಕಾರಿ ಸಿಬ್ಬಂದಿಗಳು ಕಾರ್ಯಾಚರಣೆ ಕೈಗೊಂಡಿದ್ದು,ಸಂಚಾರ ನಿಯಮಗಳ ಉಲ್ಲಂಘನೆಯ ವಿರುದ್ಧ ಪ್ರಕರಣಗಳನ್ನು ದಾಖಲಿಸಿದ್ದಾರೆ.
ಅದರಂತೆ ಡಿ.ವೈ .ಎಸ್.ಪಿ ರವರು ಒಟ್ಟು 24, ಸಿಪಿಐ ಶಿರಸಿ -26, ಪಿ.ಎಸ್.ಐ ನಗರ -22, ಪಿ.ಎಸ್.ಐ ನ್ಯೂ ಮಾರ್ಕೆಟ್ -30, ಪಿ.ಎಸ್.ಐ ಬನವಾಸಿ – 08, ಸಿದ್ದಾಪುರ ಠಾಣೆ – 21, ಯಲ್ಲಾಪುರ ಠಾಣೆ – 06, ಮುಂಡಗೋಡ ಠಾಣೆ – 74 ಪ್ರಕರಣ ದಾಖಲಿಸಿದ್ದು
ಶಿರಸಿ ಉಪವಿಭಾಗದಲ್ಲಿ ಒಟ್ಟು 211 ಪ್ರಕರಣಗಳನ್ನು ದಾಖಲಿಸಿದ್ದು 1,07,000 ರೂಪಾಯಿ ದಂಡ ವಿಧಿಸಲಾಗಿದೆ.