BREAKING NEWS
Search

ಲಾರಿ ಮಾಲೀಕನಿಂದ ಚಾಲಕನಿಗೆ ಹಿಗ್ಗಾಮುಗ್ಗ ಥಳಿತ ವಿಡಿಯೊ ವೈರಲ್- ಆಗಿದ್ದು ಎಲ್ಲಿ ಅಸಲಿಯತ್ ಏನು? ವಿವರ ನೋಡಿ.

2301

ಯಲ್ಲಾಪುರ:- ಲಾರಿಮಾಲೀಕನೊಬ್ಬ ಯಲ್ಲಾಪುರದ ಅರೆಬೈಲು ಗಟ್ಟದಲ್ಲಿ ಚಾಲಕನಿಗೆ ಹಿಗ್ಗಾಮುಗ್ಗ ಥಳಿತದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಉತ್ತರ ಕನ್ನಡ ಜಿಲ್ಲೆಯದ್ದು ಎಂದು ಶೀರ್ಷಿಕೆ ನೀಡಿ ವಿಡಿಯೋ ವನ್ನು ಫೇಸ್ ಬುಕ್ ನಲ್ಲಿ ಹಲವರು ಹಂಚಿಕೊಂಡಿದ್ದರು. ಆದರೇ ಎಲ್ಲಿ, ಯಾರುಮಾಡಿದ್ದು ಎಂಬ ಬಗ್ಗೆ ಯಾಗಲಿ ಥಳಿತಗೊಂಡ ಚಾಲಕನ ಬಗ್ಗೆ ಮಾಹಿತಿಯಾಗಲಿ ಯಾರಿಗೂ ದೊರೆತಿರಲಿಲ್ಲ. ಮಾಧ್ಯಮದಲ್ಲೂ ಸುದ್ದಿಯಾದಾಗ ಕುದ್ದು ಜಿಲ್ಲಾ ಪೊಲೀಸ್ ಅಧೀಕ್ಷಕರು ಯಲ್ಲಾಪುರ ಪೊಲೀಸರಿಗೆ ದೂರು ದಾಖಲಿಸಿ ಪ್ರಕರಣ ತನಿಖೆ ಕೈಗೊಳ್ಳುವಂತೆ ಸೂಚಿಸಿದ್ದರು.

ಹೌದು ಈ ವಿಡಿಯೋ ಉತ್ತರ ಕನ್ನಡ ಜಿಲ್ಲೆಯ ಯಲ್ಲಾಪುರ ಘಟ್ಟಭಾಗದ ಹೆದ್ದಾರಿಯಲ್ಲಿ ನಿನ್ನೆ ನಡೆದ ಘಟನೆಯಾಗಿದೆ.

ಟ್ಯಾಂಕರ್ ಲಾರಿಯು ಬೆಳಗಾವಿಯಿಂದ ಕಾರವಾರದ ಬಂದರಿಗೆ ಮದ್ಯ ತಯಾರಿಸಲು ಬಳಸುವ ಕಚ್ಚಾ ವಸ್ತುವಾದ ಮೊಲಾಸಿಸ್ ನನ್ನು ಲೋಡ್ ಮಾಡಿಕೊಂಡು ಯಲ್ಲಾಪುರ-ಅಂಕೋಲ ಹೆದ್ದಾರಿಯಲ್ಲಿ ಬರುತಿತ್ತು. ಚಾಲಕ ಗದಗ ಜಿಲ್ಲೆ. ರೋಣಾದ ಜಗ್ಗು ರಾಮಪ್ಪ ಅದೋನಿ ಎಂಬುವವನಾಗಿದ್ದು ಈತ ಮದ್ಯ ಸೇವಿಸಿ ವಾಹನ ಚಲಾಯಿಸಿದ್ದ. ಈ ವೇಳೆ ಆಯಾ ತಪ್ಪಿ ಹೆದ್ದಾರಿಯ ಗಟಾರಕ್ಕೆ ಬಿದ್ದಿದೆ. ಈ ಬಗ್ಗೆ ಮಾಹಿತಿ ತಿಳಿದ ಬೆಂಗಳೂರು ಮೂಲದ ನಟರಾಜ್ ಎಂಬ ಮಾಲೀಕ ಸ್ಥಳಕ್ಕೆ ಬಂದು ಆದ ಘಟನೆಯಿಂದ ಕುಪಿತನಾಗಿ ಚಾಲಕನಿಗೆ ಹಿಗ್ಗಾಮುಗ್ಗ ಥಳಿಸಿದ್ದಾನೆ.

ರಸ್ತೆಯ ಪಕ್ಕದಲ್ಲೇ ಆದ್ದರಿಂದ ಕೆಲವರು ಈತ ತಳಿಸುತ್ತಿರುವ ವಿಡಿಯೋ ಚಿತ್ರಿಸಿಕೊಂಡಿದ್ದಾರೆ. ಜೊತೆಗೆ ಸ್ಥಳೀಯ ಜನರು ಸಹ ಈ ಘಟನೆ ನೋಡಿದ್ದಾರೆ. ಆದರೇ ಈ ಬಗ್ಗೆ ಚಾಲಕನಾಗಲಿ ಇತರರಾಗಲಿ ಪೊಲೀಸರಿಗೆ ದೂರು ನೀಡಿಲ್ಲ.ಆದ್ರೆ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆದಾಗ ಪೊಲಿಸರೇ ತನಿಖೆ ಕೈಗೊಂಡು ಮಾಹಿತಿ ಕಲೆಹಾಕಿ ಚಾಲಕ ಮತ್ತು ಮಾಲೀಕನಿಗೆ ಠಾಣೆಗೆ ಬರಲು ಸೂಚಿಸಿದ್ದಾರೆ. ಈ ಬಗ್ಗೆ ಈವರೆಗೂ ಠಾಣೆಯಲ್ಲಿ ಪ್ರಕರಣ ದಾಖಲಾಗಿಲ್ಲ. ಚಾಲಕ ದೂರು ನೀಡಿದಲ್ಲಿ ಅಥವಾ ಪ್ರತ್ಯಕ್ಷ ದರ್ಶಿಗಳು ಹೇಳಿಕೆ ನೀಡಿದಲ್ಲಿ ದೂರು ದಾಖಲಾಗುವ ಸಾಧ್ಯತೆಗಳಿವೆ.
ಇನ್ನು ಈ ವಿಡಿಯೋ ವೈರಲ್ ಆಗುತಿದ್ದಂತೆ ಚಾಲಕರ ಸಂಘದ ಅಧ್ಯಕ್ಷರು ಲಾರಿನ ಮಾಲೀಕನ್ನು ತರಾಟೆಗೆ ತೆಗೆದುಕೊಂಡಿದ್ದಾರೆ ಎಂದು ತಿಳಿದುಬಂದಿದೆ




ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

error: Content is protected !!