BREAKING NEWS
Search

ಕಾರವಾರದಲ್ಲಿ ವಿದ್ಯಾರ್ಥಿಗಳಿಗೆ ಮಾರಾಟ ಮಾಡಲು ತಂದಿದ್ದ ₹3,20ಲಕ್ಷ ಮೌಲ್ಯದ ಗಾಂಜಾ ವಶ-ಇಬ್ಬರ ಬಂಧನ

2059

ಕಾರವಾರ :-ಕಾರವಾರನಗರ ದಲ್ಲಿ ಗಾಂಜಾ ಮಾರಾಟ ಮಾಡುತ್ತಿದ್ದ ಇಬ್ಬರನ್ನು ಬಂಧಿಸುವಲ್ಲಿ ನಗರ ಠಾಣೆ ಪೊಲೀಸರು ಯಶಸ್ವಿಯಾಗಿದ್ದಾರೆ. ನಗರದ ಸಂಕ್ರಿವಾಡ ನಿವಾಸಿ ರಿಜ್ವಾನ್ ಶೇಖ್ (30) ಹಾಗೂ ಗುನಗಿವಾಡದ ಸಾಹಿಲ್ ಶೇಖ್ (20) ಬಂಧಿತ ಆರೋಪಿಗಳು.

ಆರೋಪಿಗಳಿಂದ ₹ 3.20 ಲಕ್ಷ ಮೌಲ್ಯದ 3 ಕೆ.ಜಿ 200 ಗ್ರಾಂ ಗಾಂಜಾವನ್ನು ಪಿ.ಎಸ್.ಐ ಸಂತೋಷ್ ನೇತ್ರತ್ವದ ತಂಡ ವಶಪಡಿಸಿಕೊಂಡಿದೆ. ಬಂಧಿತರು ಪುಣೆಯಿಂದ ಗಾಂಜಾವನ್ನು ತಂದು ಕಾರವಾರದಲ್ಲಿ ಶಾಲಾ, ಕಾಲೇಜು ವಿದ್ಯಾರ್ಥಿಗಳನ್ನೇ ಗುರಿಯಾಗಿಟ್ಟುಕೊಂಡು ಮಾರಾಟ ಮಾಡುತ್ತಿದ್ದರು.

ನಗರದ ಕೋಡಿಬಾಗದ ಸಾಗರದರ್ಶನ ಸಭಾಂಗಣದ ಬಳಿ ಇಂದು ಗಿರಾಕಿಗಳಿಗೆ ಗಾಂಜಾ ಮಾರಾಟ ಮಾಡುತ್ತಿರುವ ಮಾಹಿತಿ ಪಡೆದು ದಾಳಿ ಮಾಡಿ ಮಾಲು ಸಮೇತ ವಶಕ್ಕೆ ಪಡೆದಿದ್ದಾರೆ. ಅವರ ಬಂಧನಕ್ಕೆ ಸುಮಾರು ಒಂದೂವರೆ ವರ್ಷಗಳಿಂದ ಇವರ ಕುರಿತು ಮಾಹಿತಿ ಕಲೆಹಾಕುವ ಜೊತೆ ಚಲನವಲನದ ಬಗ್ಗೆ ಪೊಲೀಸರು ದೃಷ್ಟಿ ಇಟ್ಟಿದ್ದರು. ಆದರೇ ಆರೋಪಿತರು ಗಾಂಜಾ ಮಾರಾಟ ಮಾಡುವಾಗ ಯಾವದೇ ಮೊಬೈಲ್ ಗಳನ್ನು ಬಳಸುತ್ತಿರಲಿಲ್ಲ. ಬದಲಾಗಿ ಮಾರಾಟ ಮಾಡುವ ಸ್ಥಳವನ್ನು ಮಾತ್ರ ನೇರ ಸಂಪರ್ಕ ಮಾಡಿ ತಿಳಿಸುತಿದ್ದರು, ಈ ಹಿನ್ನಲೆಯಲ್ಲಿ ಮಾಹಿತಿ ಪಡೆದು ಕಾರ್ಯಾಚರಣೆ ಮಾಡಲಾಗಿದೆ ಎಂದು ಕಾರ್ಯಾಚರಣೆಯ ನೇತೃತ್ವ ವಹಿಸಿದ್ದ ನಗರ ಠಾಣೆ ಸಬ್ಇನ್‌ಸ್ಪೆಕ್ಟರ್ ಸಂತೋಷಕುಮಾರ್ ಮಾಹಿತಿ ನೀಡಿದ್ದಾರೆ.

ಆರೋಪಿಗಳಿಂದ ಗಾಂಜಾ ಖರೀದಿಸುತ್ತಿದ್ದವರ ಬಗ್ಗೆ ಪೊಲೀಸರು ಮಾಹಿತಿ ಸಂಗ್ರಹಿಸಿದ್ದು, ಕೆಲವು ಅಪ್ರಾಪ್ತ ವಿದ್ಯಾರ್ಥಿಗಳೂ ಭಾಗಿಯಾಗಿರುವ ಬಗ್ಗೆ ತನಿಖೆವೇಳೆ ತಿಳಿದುಬಂದಿದೆ. ಆರೋಪಿಗಳ ಜಾಲದಲ್ಲಿ ಇನ್ನೆಷ್ಟು ಮಂದಿ ಇದ್ದಾರೆ ಎನ್ನುವ ನಿಟ್ಟಿನಲ್ಲಿ ಪೊಲೀಸರು ತನಿಖೆ ಮುಂದುವರಿಸಿದ್ದಾರೆ.

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಶಿವಪ್ರಕಾಶ ದೇವರಾಜು, ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಎಸ್.ಬದರಿನಾಥ, ಡಿ.ವೈ.ಎಸ್‌.ಪಿ ಅರವಿಂದ ಕಲಗುಜ್ಜಿ ಹಾಗೂ ಕಾರವಾರ ಪ್ರಭಾರ ಸಿ.ಪಿ.ಐ ನಿತ್ಯಾನಂದ ಪಂಡಿತ್ ಮಾರ್ಗದರ್ಶನದಲ್ಲಿ ಕಾರ್ಯಾಚರಣೆ ನಡೆಯಿತು. ಸಿಬ್ಬಂದಿ ರಾಜೇಶ ನಾಯಕ, ಸತ್ಯಾನಂದ ನಾಯ್ಕ, ತುಕಾರಾಮ ಬಣಕಾರ, ಹನುಮಂತ ರೆಡ್ಡೆರ, ಮಹೇಶ ನಾಯ್ಕ, ನಾಮದೇವ ನಾಂದ್ರೆ, ಅರ್ಜುನ ದೇಸಾಯಿ, ಮಂಜುನಾಥ ಪಟಗಾರ ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದರು.

ಓದುಗರ ಗಮನಕ್ಕೆ :- ಕನ್ನಡವಾಣಿ.ನ್ಯೂಸ್ ಈ ಪತ್ರಿಕೆಯು ಕೆಲವು ತಾಂತ್ರಿಕ ಕಾರಣದಿಂದ ಈ ತಿಂಗಳು ತಕ್ಷಣದಲ್ಲಿ ತಮಗೆ ಓದಲು ಅಲಭ್ಯವಾಗುತ್ತಿದೆ. ತಾಂತ್ರಿಕ ದೋಷಗಳನ್ನು ಸರಿಪಡಿಸಬೇಕಾದ್ದರಿಂದ ಮುಂದಿನ ತಿಂಗಳು ಎಂದಿನಂತೆ ಸುದ್ದಿ ಪ್ರಸಾರವಾಗಲಿದೆ‌.
ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

error: Content is protected !!