ಕಾರವಾರ-ಕರ್ತವ್ಯದಲ್ಲಿ ಇದ್ದ ಎ.ಎಸ್.ಐ ಹೃದಯಾಘಾತದಿಂದ ಸಾವು.

2458

ಕಾರವಾರ :-ಕರ್ತವ್ಯದಲ್ಲಿ ಇದ್ದ ಸಂಚಾರಿ ಪೋಲಿಸ್ ಠಾಣೆ ಎ.ಎಸ್.ಐ ಹೃದಯಾಘಾತದಿಂದ ಸಾವು ಕಂಡ ಘಟನೆ ಕಾರವಾರ ನಗರದ ಸಂಚಾರಿ ಠಾಣೆಯಲ್ಲಿ ನಡೆದಿದೆ.

ಎ.ಎಸ್.ಐ ಮಹಮ್ಮದ್ ಶೇಖ್ (57) ಮೃತ ದುರ್ದೈವಿಯಾಗಿದ್ದು,

ಸಂಚಾರಿ ಠಾಣೆಯಲ್ಲಿ ಇಂದು ಬೆಳಿಗ್ಗೆ ಧ್ವಜಾರೋಹಣ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದ ಅವರಿಗೆ ಎದೆನೋವು ಕಾಣಿಸಿಕೊಂಡಿದೆ. ಚಿಕಿತ್ಸೆಗಾಗಿ ಕಾರವಾರ ಕ್ರಿಮ್ಸ್ ಆಸ್ಪತ್ರೆಗೆ ದಾಖಲಿಸಿದ್ದರೂ ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದಾರೆ.

ಅಬ್ದುಲ್ ಖಾದರ್ ಮಹ್ಮದ್ ಶೇಖ್ ರವರು 1992 ರಲ್ಲಿ ಪೊಲೀಸ್ ಕಾನಸ್ಟೇಬಲ್ ಹುದ್ದೆ ಮೂಲಕ ಪೊಲೀಸ್ ಇಲಾಖೆಯಲ್ಲಿ ಭರ್ತಿಯಾಗಿದ್ದರು.

ಉತ್ತರ ಕನ್ನಡ ಜಿಲ್ಲೆಯ ಕುಮಟಾ ,ದಾಂಡೇಲಿ ಗ್ರಾಮೀಣ,ದಾಂಡೇಲಿ ನಗರ,ಜೊಯಿಡಾ ಸೇರಿದಂತೆ ವಿವಿಧ ಠಾಣೆಗಳಲ್ಲಿ ಕರ್ತವ್ಯ ನಿರ್ವಹಿಸಿ

2019 ರಲ್ಲಿ ಪದೋನ್ನತಿ ಪಡೆದಯ ಎಎಸ್ಐ ಆಗಿ ಕಾರವಾರ ಸಂಚಾರ ಪೊಲೀಸ್ ಠಾಣೆಗೆ ವರ್ಗಾವಣೆಯಾಗಿ ಕರ್ತವ್ಯ ನಿರ್ವಹಿಸುತಿದ್ದರು.
ಮೃತರಿಗೆ ಹೆಂಡತಿ, ಮತ್ತು ಇಬ್ಬರು ವಯಸ್ಕ ಗಂಡು ಮಕ್ಕಳನ್ನು ಅಗಲಿದ್ದಾರೆ.

ಇವರ ಅಗಲಿಕೆಗೆ ಎಸ್. ಪಿ ಸುಮನಾ ಡಿ ಪೆನ್ನೆಕರ್ ಮತ್ತು ಕಾರವಾರ ಪೊಲೀಸ್ ಇಲಾಖೆ ಅಧಿಕಾರಿಗಳು,ಸಿಬ್ಬಂದಿಗಳು ಸಂತಾಪ ಸೂಚಿಸಿದ್ದಾರೆ.
ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

error: Content is protected !!