ಕಾರವಾರ ಆಟೋರಿಕ್ಷ ಚಾಲಕ,ಮಾಲೀಕರಿಗೆ ಔತನಕೂಟ ,ಉಚಿತ ಸಮವಸ್ತ್ರ ವಿತರಣೆ ಕಾರ್ಯಕ್ರಮ.

157

ಪ್ರತಿಯೊಬ್ಬರೂ ಹೊಟ್ಟೆಪಾಡಿಗಾಗಿ ದುಡುಮೆ ಮಾಡುತ್ತಾರೆ. ಆದ್ರೆ ತಾವು ಮಾಡಿದ ದುಡಿಮೆಯ ಪರಿಶ್ರಮ ಮತ್ತೊಬ್ಬರಿಗೂ ಸಹಾಯವಾಗಿ ಅವರೂ ಬದುಕಬೇಕು ಎಂಬುದನ್ನು ಇಂದಿನ ದಿನದಲ್ಲಿ ಅಂದುಕೊಂಡು ಅದನ್ನು ಕಾರ್ಯರೂಪಕ್ಕೆ ತರುವವರು ವಿರಳ.ಆದ್ರೆ ಉತ್ತರ ಕನ್ನಡ ಜಿಲ್ಲೆಯ ಶಿರಸಿ ತಾಲೂಕಿನ ಬ್ಯಾಗದ್ದೆ ಮೂಲದ ಅನಂತಮೂರ್ತಿ ಹೆಗಡೆರವರು ಅನಂತಮೂರ್ತಿ ಹೆಗಡೆ ಚಾರಿಟೇಬಲ್ ಟ್ರಸ್ಟ್ ಮೂಲಕ ಸಮಾಜದ ಬಡವರ್ಗದವರಿಗಾಗಿ ಸಾಮಾಜಿಕ ಕಾರ್ಯವನ್ನು ನಡೆಸುತ್ತಾ ಬಂದುದ್ದು ,ಶಿರಸಿ,ಯಲ್ಲಾಪುರ,ಹೊನ್ನಾವರ , ಕುಮಟಾ,ಭಟ್ಕಳ,ಕಿತ್ತೂರು ಭಾಗದಲ್ಲಿ ಆಟೋರಿಕ್ಷ ಮತ್ತು ಗೂಡ್ಸ್ ರಿಕ್ಷಾ ಚಾಲಕ ,ಮಾಲೀಕರಿಗೆ ಔತನಕೂಟ , ಉಚಿತ ಸಮವಸ್ತ್ರ ವಿತರಿಸುವ ಜೊತೆಗೆ ಆಟೋರಿಕ್ಷ ಪಾಸಿಂಗ್ ಯೋಜನೆ ಹಾಗೂ ಆಟೋರಿಕ್ಷ ಪ್ರಿಂಟಿಂಗ್ ಹುಡ್ ವಿತರಣಾ ಕಾರ್ಯಕ್ರಮವನ್ನು ಉಚಿತವಾಗಿ ನಡೆಸಿಕೊಂಡು ಬಂದಿದ್ದಾರೆ.

ಕೆಳಗಿನ photo ದ ಮೇಲೆ ಕ್ಲಿಕ್ ಮಾಡಿ ಅನಂತಮೂರ್ತಿ ಹೆಗಡೆರವರ ಬಗ್ಗೆ ತಿಳಿಯಿರಿ:-

ಇದರ ಇನ್ನೊಂದು ಭಾಗವಾಗಿ ಕರಾವಳಿ ಭಾಗದ ಜಿಲ್ಲಾ ಕೇಂದ್ರವಾದ ಕಾರವಾರದಲ್ಲಿ ಇದೇ ತಿಂಗಳು 26-10-2023 ರ ಗುರುವಾರ 10-30 ಕ್ಕೆ ನಗರದ ಅಜ್ವೆ ಓಷನ್ ಸಭಾಂಗಣದಲ್ಲಿ ಕಾರ್ಯಕ್ರಮ ಆಯೋಜನೆ ಮಾಡಿದ್ದು ಆಟೋ ರಿಕ್ಷ ಚಾಲಕ,ಮಾಲೀಕರು ಈ ಕಾರ್ಯಕ್ರಮದಲ್ಲಿ ಭಾಗವಹಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸುವಂತೆ ಅವರು ಕೋರಿಕೊಂಡಿದ್ದಾರೆ.

ಈ ಕಾರ್ಯಕ್ರಮವನ್ನು ಕಾರವಾರದ ಶಾಸಕ ಸತೀಶ್ ಸೈಲ್ ಉದ್ಘಾಟನೆ ನೆರವೇರಿಸಲಿದ್ದಾರೆ.

ಕಾರ್ಯಕ್ರಮದ ವಿವರ ಈ ಕೆಳಗಿನಂತಿದೆ.:-
ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

error: Content is protected !!