ಉತ್ತರ ಕನ್ನಡ| ಶಿರಸಿಯಲ್ಲಿ ಬಿಜೆಪಿ ಕಾರ್ಯಕರ್ತರ ಗುಪ್ತ ಮತದಾನ ಯಾರು ಪಾಸ್ ಯಾರು ಫೇಲ್?

171

ಬೆಂಗಳೂರು:- ವಿಧಾನ ಸಭೆ ಚುನಾವಣೆ ಘೋಷಣೆ ಬೆನ್ನಲ್ಲೇ ಬಿಜೆಪಿ ತನ್ನ ಅಭ್ಯರ್ಥಿಯನ್ನು ಘೋಷಣೆ ಮಾಡಲು ಸಿದ್ದತೆ ನಡೆಸಿಕೊಂಡಿದೆ. ಇದರ ಬೆನ್ನಲ್ಲೇ ಕ್ಷೇತ್ರವಾರು ಕೊನೆಯ ಸರ್ವೆಯನ್ನು ಮಾಡಿ ಮುಗಿಸಿದೆ.ಇನ್ನು ಪ್ರತಿ ಕ್ಷೇತ್ರದಲ್ಲಿ 250 ಕಾರ್ಯಕರ್ತರ ಗುಪ್ತ ಮತದಾನವನ್ನು ಮಾಡಿಸುವ ಮೂಲಕ ಕ್ಷೇತ್ರವಾರು ಆಕಾಂಕ್ಷಿಗಳ ಕುರಿತು ಅಭಿಪ್ರಾಯ ಸಂಗ್ರಹಣೆ ಮಾಡಿದ್ದು ಉತ್ತರ ಕನ್ನಡ ಜಿಲ್ಲೆಯಲ್ಲೂ ಸರ್ವೆ ಕಾರ್ಯ ಸಂಪೂರ್ಣ ಗೊಳ್ಳುವ ಜೊತೆ ಶಿರಸಿಯಲ್ಲಿ ಆರು ವಿಧಾನಸಭಾ ಕ್ಷೇತ್ರದ ಬಿಜೆಪಿ ಕಾರ್ಯಕರ್ತರ ಗುಪ್ತ ಮತದಾನ ನಡೆದಿದ್ದು ಇದೀಗ ಹಾಲಿ ಶಾಸಕ ವಿರುದ್ಧವೇ ಅಪಸ್ವರ ಕೇಳಿ ಬಂದಿದೆ.

ಗುಪ್ತ ಮತದಾನ ಹಾಗೂ ಬಿಜೆಪಿ ಸರ್ವೆ ಯಲ್ಲಿ ಯಾರು ಪಾಸಾಗಿದ್ದಾರೆ,ಯಾರು ಫೇಲಾಗಿದ್ದಾರೆ.ಇದರ ಮಾಹಿತಿ ಇಲ್ಲಿದೆ.

ಬಿಜೆಪಿ ರಾಜ್ಯ ಸರ್ವೆ ವರದಿಯಲ್ಲಿ ಏನಿದೆ.?

ಉತ್ತರ ಕನ್ನಡ ಜಿಲ್ಲೆಯಲ್ಲಿ ಆರು ವಿಧಾನಸಭಾ ಕ್ಷೇತ್ರದಲ್ಲಿ ಹಳಿಯಾಳ- ಸುನಿಲ್ ಹೆಗಡೆ ಆಕಾಂಕ್ಷಿ ಪಟ್ಟಿಯಲ್ಲಿ ಇದ್ದರೇ ಕಾರವಾರ- ರೂಪಾಲಿ ನಾಯ್ಕ, ಶಿರಸಿ-ಕಾಗೇರಿ, ಯಲ್ಲಾಪುರ -ಶಿವರಾಮ್ ಹೆಬ್ಬಾರ್,ಕುಮಟಾ- ದಿನಕರ್ ಶಟ್ಟಿ, ಭಟ್ಕಳ- ಸುನಿಲ್ ನಾಯ್ಕ ಶಾಸಕರಾಗಿದ್ದು ಇವರುಗಳ ಕುರಿತು ಹಾಗೂ ಪಕ್ಷದ ಕುರಿತು ಸಹ ಸರ್ವೆ ಯಲ್ಲಿ ಅಭಿಪ್ರಾಯ ಸಂಗ್ರಹಣೆ ಮಾಡಿದೆ.

ಉತ್ತರ ಕನ್ನಡ ಜಿಲ್ಲೆಯ ಆರು ವಿಧಾನ ಸಭಾ ಕ್ಷೇತ್ರದಲ್ಲಿ ಹಳಿಯಾಳ ,ಕಾರವಾರ,ಶಿರಸಿ,ಯಲ್ಲಾಪುರ ಕ್ಷೇತ್ರದಲ್ಲಿ ಅಭ್ಯರ್ಥಿಗಳ ಪರ ಉತ್ತಮ ಅಭಿಪ್ರಾಯ ಕೇಳಿಬಂದರೇ ಭಟ್ಕಳದಲ್ಲಿ ಪಕ್ಷದ ಪರ ಹೆಚ್ಚು ಉತ್ತಮ ಅಭಿಪ್ರಾಯ ಕೇಳಿಬಂದಿದೆ.ಹಾಗೆಯೇ ಕುಮಟಾ ದಲ್ಲೂ ಸಹ ಪಕ್ಷದ ಕುರಿತು ಜನರ ಒಲವು ಹೆಚ್ಚು ಕಂಡುಬಂದಿದ್ದು ಶಾಸಕರ ಪರ ಒಲವು ಕಮ್ಮಿಯಾಗಿದೆ ಎಂದು ಬಿಜೆಪಿ ಮೂಲಗಳಿಂದ ಮಾಹಿತಿ ಹೊರಬಂದಿದೆ. ಇನ್ನು ಹಳಿಯಾಳದಲ್ಲಿ ಪಕ್ಷ ಹಾಗೂ ಮಾಜಿ ಶಾಸಕ ಸುನಿಲ್ ನಾಯ್ಕ ಪರ ಉತ್ತಮ ಅಭಿಪ್ರಾಯ ಕೇಳಿಬಂದಿದೆ.

ಕಾರ್ಯಕರ್ತರ ಗುಪ್ತ ಮತದಾನ ಅಭಿಪ್ರಾಯದಲ್ಲಿ ಪಾಸಾದವರು ಯಾರು ಉತ್ತಮ ಅಂಕ ಗಳಿಸಿದವರ್ಯಾರು? ಫೇಲಾದವರ್ಯಾರು.?

ಇಂದು ಶಿರಸಿಯಲ್ಲಿ ಪ್ರತಿ ಒಂದು ಕ್ಷೇತ್ರದಿಂದ 250 ಕಾರ್ಯಕರ್ತರು ಗುಪ್ತ ಮತದಾನ ಮಾಡಿದ್ದು ಇದೀಗ ಬೆಂಗಳೂರಿಗೆ ಅದರ ಪ್ರತಿ ತಲುಪಿದೆ.
ಈ ಗುಪ್ತ ಮತದಾನದಲ್ಲಿ ಹಾಲಿ ಶಾಸಕರ ವಿರುದ್ದವೇ ಅಪಸ್ವರ ಕೇಳಿಬಂದಿದೆ‌.

ಇದರಲ್ಲಿ ಶಿರಸಿ ಕ್ಷೇತ್ರ ಹೊರತುಪಡಿಸಿ ಉಳಿದ ಕ್ಷೇತ್ರದಲ್ಲಿ ಶಾಸಕರ ವಿರುದ್ಧ ಅಸಮದಾನ ಇರುವುದು ಪಕ್ಷದ ಗಮನಕ್ಕೆ ಬಂದಿದೆ.

ಸದ್ಯ ಹಾಲಿ ಶಾಸಕ ಪರ ವಿರೋಧ ಕೇಳಿಬಂದರೂ ಇದರಲ್ಲಿ ಕಾರವಾರ,ಯಲ್ಲಾಪುರ,ಕ್ಷೇತ್ರದಲ್ಲಿ ಹಾಲಿ ಶಾಸಕರ ಕ್ಷೇತ್ರದಲ್ಲಿ ಉತ್ತಮ ಹೆಸರು,ಪಕ್ಷದ ವರ್ಚಸ್ಸು ಉತ್ತಮವಾಗಿರುವುದರಿಂದ ಟಿಕೆಟ್ ನೀಡಿದಲ್ಲಿ ಗೆಲ್ಲುವ ಭರವಸೆ ವ್ಯಕ್ತವಾಗಿದೆ. ಇನ್ನು ಕುಮಟಾ ಕ್ಷೇತ್ರದಲ್ಲಿ ಹಾಗೂ ಭಟ್ಕಳ ಕ್ಷೇತ್ರದಲ್ಲಿ ಹೊಸ ಅಭ್ಯರ್ಥಿಗೆ ಟಿಕೇಟ್ ನೀಡಬೇಕು ಎಂಬ ಅಭಿಪ್ರಾಯ ಕಾರ್ಯಕರ್ತರ ಗುಪ್ತ ಮತದಾನದಲ್ಲಿ ವ್ಯಕ್ತವಾಗಿದೆ ಎಂದು ಬಿಜೆಪಿ ಮೂಲಗಳಿಂದ ತಿಳಿದುಬಂದಿದೆ.

ಕುಮಟಾ- ಭಟ್ಕಳ ಕ್ಷೇತ್ರಕ್ಕೆ ಅಭ್ಯರ್ಥಿ ಬದಲಾಗುತ್ತಾರ?

ಸದ್ಯ ಬಿಜೆಪಿ ಸರ್ವೆ ಹಾಗೂ ಕಾರ್ಯಕರ್ತರ ಗುಪ್ತ ಮತದಾನದ ವರದಿಯನ್ನು ಕೇಂದ್ರ ವರಿಷ್ಟರ ಮುಂದೆ ಹೋಗಲಿದೆ. ಇಲ್ಲಿ ಯಾರಿಗೆ ಟಿಕೇಟ್ ನೀಡಬೇಕು ಅಥವಾ ಯಾರಿಗೆ ನೀಡಬಾರದು ಮತ್ತು ಹೊಸ ಅಭ್ಯರ್ಥಿ ಹಾಕಬೇಕಾ ಎಂಬ ಅಂತಿಮ ನಿರ್ಣಯ ಮಾಡಲಿದ್ದಾರೆ.

ಸರ್ವೆ ರಿಪೋರ್ಟ ನಲ್ಲಿ ಭಟ್ಕಳ ಶಾಸಕರಿಗೆ ಕುತ್ತು?

ಬಿಜೆಪಿಯ ಆಂತರಿಕ ಸರ್ವೆ ರಿಪೋರ್ಟ ನಲ್ಲಿ ಭಟ್ಕಳದ ಬಿಜೆಪಿ ಶಾಸಕ ಸುನಿಲ್ ನಾಯ್ಕ ವಿರೋಧಿ ಅಲೆ ಹೆಚ್ಚಾಗಿದೆ.ಇದರ ಜೊತೆಗೆ ಬಿಜೆಪಿ ಅಲೆ ಅಲ್ಪ ಇಳಿಕೆ ಕಂಡರೂ ಹೊಸ ಅಭ್ಯರ್ಥಿ ಹಾಕಿದಲ್ಲಿ ಗೆಲ್ಲಬಹುದು ಎಂಬ ಅಭಿಪ್ರಾಯಗಳಿವೆ. ಹೀಗಾಗಿ ಪರ್ಯಾಯ ನಾಯಕರಿಗೆ ಇಲ್ಲಿ ಅವಕಾಶ ತೆರದಂತಾಗಿದೆ. ಆದರೇ ಕುಮಟಾ ಕ್ಷೇತ್ರದಲ್ಲಿ ಪಕ್ಷದ ವರ್ಚಸ್ಸಿಗೂ ಕಂಠಕವಾಗಿದ್ದು ,ಹಾಲಿ ಶಾಸಕರ ವಿರೋಧಿ ಅಲೆ ಸಹ ಪಕ್ಷಕ್ಕೆ ತೊಂದರೆ ತಂದಿದೆ.ಹಾಗೆಯೇ ಕ್ಷೇತ್ರದಲ್ಲಿ ಉತ್ತಮ ಹಿಡಿತ ಇರುವ ನಾಯಕರ ಕೊರತೆ ಕುಮಟಾ ಕ್ಷೇತ್ರಕ್ಕಿದೆ. ಇನ್ನು ಕೊನೆ ಹಂತದಲ್ಲಿ ಮತವನ್ನು ತರುವ ಚಾಣಾಕ್ಷತೆ ದಿನಕರಶಟ್ಟಿಗೆ ಇರುವುದರಿಂದ ಕುಮಟಾ ಕ್ಷೇತ್ರದಲ್ಲಿ ಬದಲಿ ನಾಯಕರ ಹುಡುಕಾಟ ಮಾಡುವ ಸಾಧ್ಯತೆಗಳು ಕಮ್ಮಿಇದೆ ಎಂಬ ಅಭಿಪ್ರಾಯ ಬಿಜೆಪಿ ಮೂಲಗಳು ತಿಳಿಸಿವೆ. ಹೀಗಾಗಿ ಬಿಜೆಪಿ ಕೊನೆ ಹಂತದಲ್ಲಿ ಕುಮಟಾ ಅಥವಾ ಭಟ್ಕಳದಲ್ಲಿ ಅಭ್ಯರ್ಥಿ ಬದಲಿಸಲಿದೆಯೇ ಎಂಬ ಕುತೂಹಲ ಮೂಡುವಂತೆ ಮಾಡಿದ್ದು ಪಕ್ಷದ ವರಿಷ್ಟರ ಅಂತಿಮ ನಿರ್ಧಾರವೇ ಅಂತಿಮ ಆಗಲಿದೆ.
ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

error: Content is protected !!