ಕಾರವಾರ :- ಲೋಕಸಭಾ ಚುನಾವಣೆಗೆ ಬಿಜೆಪಿಯಿಂದ ಹಾಲಿ ಸಂಸದ ಅನಂತಕುಮಾರ್ ಹೆಗಡೆ ಸ್ಪರ್ಧೆ ಮಾಡದಿದ್ರೆ ,ತಾನು ಬಿಜೆಪಿಯಿಂದ ಸ್ಪರ್ಧಾಕಾಂಕ್ಷಿಯಾಗಿದ್ದೇನೆ ಎಂದು ಜೆಡಿಎಸ್ ನಲ್ಲಿದ್ದು ಇದೀಗ ತಟಸ್ಥ ರಾಜಕಾರಣ ಮಾಡುತ್ತಿರುವ ಮಾಜಿ ಸಚಿವ ಆಸ್ನೋಟಿಕರ್ ಹೇಳಿದ್ದಾರೆ .
ಕಾರವಾರದಲ್ಲಿ ಖಾಸಗಿ ಮಾಧ್ಯಮದ ಜೊತೆ ಮಾತನಾಡಿದ ಅವರು ಈ ಬಾರಿ ವಿಧಾನಸಭಾ ಚುನಾವಣೆಯಲ್ಲಿ ವಯಕ್ತಿಕ ಕಾರಣಕ್ಕಾಗಿ ಕಾಂಗ್ರೆಸ್ ನ ಕಾರವಾರ,ಜೋಯಿಡಾ ಭಾಗದ ಅಭ್ಯರ್ಥಿಗೆ ಬೆಂಬಲ ನೀಡಿ ಗೆಲ್ಲಿಸಿದ್ದೇನೆ, ರಾಷ್ಟ್ರೀಯ ಪಕ್ಷಕ್ಕೆ ಸೇರ್ಪಡೆಗೊಳ್ಳಬೇಕು ಎಂದಿದ್ದೇನೆ.
ನನ್ನ ಕ್ಷೇತ್ರ ಸರ್ಕಾರಿ ಯೋಜನೆಗಳಿಂದ ವಂಚಿತವಾಗಿದೆ ಆ ಹಿನ್ನಲೆಯಲ್ಲಿ ನಮ್ಮ ಕ್ಷೇತ್ರಕ್ಕೆ ಲೋಕಸಭಾ ಅಭ್ಯರ್ಥಿ ಒಳ್ಳೆಯವರು ಆಗಬೇಕಿದೆ.
ನಮ್ಮ ಜಿಲ್ಲೆಯ ಕೂಗನ್ನು ರಾಷ್ಟ್ರಮಟ್ಟದಲ್ಲಿ ತೆಗೆದುಕೊಂಡು ಅಭಿವೃದ್ಧಿಗಾಗಿ ಹೋರಾಟ ಮಾಡಬೇಕು ಎಂಬುದಿದೆ.
ಸದ್ಯ ನಾನು ಯಾವ ಪಕ್ಷದಲ್ಲೂ ಇಲ್ಲ, ಬಿಜೆಪಿಯಿಂದ ಟಿಕೆಟ್ ನೀಡಿದ್ರೆ ಲೋಕಸಭೆಗೆ ಸ್ಪರ್ದೆ ಮಾಡುತ್ತೇನೆ ಎನ್ನುವ ಮೂಲಕ ಬಿಜೆಪಿಗೆ ಸೇರ್ಪಡೆಗೊಳ್ಳುವ ಇಂಗಿತ ವ್ಯಕ್ತಪಡಿಸಿದ್ದಾರೆ.