ಉತ್ತರ ಕನ್ನಡದಲ್ಲಿ ಹಬ್ಬದ ಬರಾಟೆ ಜೋರು| ಈ ಬಾರಿ ಎಲ್ಲಿ ಎಷ್ಟು ಸಾರ್ವಜನಿಕ ಗಣಪತಿ ಪ್ರತಿಷ್ಟಾನೆ ಆಗಲಿದೆ ಗೊತ್ತಾ?

39

ಕಾರವಾರ :- ಉತ್ತರ ಕನ್ನಡ ಜಿಲ್ಲೆಯಲ್ಲಿ ನಾಳೆ ಗಣೆಶ ಚತುರ್ಥಿ ಆಚರಣೆ ಮಾಡಲಾಗುತ್ತಿದೆ. ಕಳೆದ ಎರಡು ವರ್ಷದಲ್ಲಿ ಕರೋನಾ ಕಾರಣಕ್ಕೆ ಸಾರ್ವಜನಿಕ ಗಣಪತಿ ಪ್ರತಿಷ್ಟಾಪನೆಗೆ ತೊಡಕಾಗಿತ್ತು. ಆದ್ರೆ ಇದೀಗ ಕರೋನಾ ಸಂಕಷ್ಟ ದೂರವಾಗಿ ವಾಣಿಜ್ಯ ಚಟುವಟಿಕೆಗಳು( commercial activities) ಸಹ ಗರಿ ಗೆದರಿದ್ದು ಗಣೇಶ ಚತುರ್ಥಿಗೆ ವಿಘ್ನ ದೂರವಾಗಿದೆ.( Ganesha festival)

ಉತ್ತರ ಕನ್ನಡ ಜಿಲ್ಲೆಯಲ್ಲಿ ಒಟ್ಟು 1332 ಕಡೆ ಸಾರ್ವಜನಿಕ ಗಣೇಶೋತ್ಸವಕ್ಕೆ ಜಿಲ್ಲಾಡಳಿತ ಅವಕಾಶ ಮಾಡಿಕೊಟ್ಟಿದೆ.

ಇವುಗಳಲ್ಲಿ ಶಿರಸಿಯ 212, ಹೊನ್ನಾವರದ 163, ಹಳಿಯಾಳದ 161, ಸಿದ್ದಾಪುರದ 160 ಕಡೆಗಳಲ್ಲಿ ಅತೀ ಹೆಚ್ಚು ಸಾರ್ವಜನಿಕವಾಗಿ ಗಣೇಶೋತ್ಸವ ಆಚರಣೆಗೆ ಅನುಮತಿ ನೀಡಲಾಗಿದೆ.

ಕಾರವಾರ48,ಅಂಕೋಲಾ 80,ಕುಮಟಾ97,ಭಟ್ಕಳ109
ಮುಂಡಗೋಡ107,ಯಲ್ಲಾಪುರ 84,ಜೊಯಿಡಾ 35,ಹಳಿಯಾಳ 161,‌ದಾಂಡೇಲಿ 66 ಸಾರ್ವಜನಿಕ ಗಣಪತಿಗೆ ಅವಕಾಶ ಮಾಡಿಕೊಡಲಾಗಿದೆ.

ಜಿಲ್ಲೆಯ ಗಣ್ಯರಿಂದ ಜನತೆಗೆ ಶುಭಾಶಯ.

ನಿಯಮ ತಪ್ಪಿದರೆ ದಂಡ!

ಜೇಡಿ ಮಣ್ಣು ಅಥವಾ ನೈಸರ್ಗಿಕ ಮಣ್ಣು( natural clay) ಬಳಕೆ ಮಾಡಿ ತಯಾರಿಸಿದ ಮೂರ್ತಿ ಮಾತ್ರ ಪೂಜೆಗೆ ಬಳಸಬೇಕು. ಮೂರ್ತಿಗಳನ್ನು ಪೂಜೆಯ ಬಳಿಕ ವಿಸರ್ಜಿಸಲು ನಗರ ಸ್ಥಳೀಯ ಸಂಸ್ಥೆಗಳು ಕಲ್ಪಿಸಿದ ನೀರಿನ ಟ್ಯಾಂಕ್ ಅಥವಾ ಗುರುತಿಸಿದ ನಿರ್ದಿಷ್ಟ ಸ್ಥಳದಲ್ಲಿ ವಿಸರ್ಜಿಸಬೇಕು. ಎಂದು ಜಿಲ್ಲಾಧಿಕರಿ( district administrator) ಗಂಗೂಬಾಯಿ ಮಾನಕರ್ ಹೇಳಿದರು.

ಇನ್ನು ನಗರದಲ್ಲಿ ಪ್ಲಾಸ್ಟಿಕ್ ಫ್ಲೆಕ್ಸ್ ಗಳನ್ನು ( commercial plastic flex) ಅಳವಡಿಸಲು ಅನುಮತಿ ನೀಡಲಾಗದು. ಸಾರ್ವಜನಿಕ ಗಣೇಶೋತ್ಸವ ಸಮಿತಿಯವರು ರಾತ್ರಿ 10 ಗಂಟೆಯಿಂದ ಬೆಳಿಗ್ಗೆ 6 ಗಂಟೆಯವರೆಗಿನ ಅವಧಿಯಲ್ಲಿ ಧ್ವನಿವರ್ಧಕ ಬಳಸಬಾರದು. ಈ ಅವಧಿಯಲ್ಲಿ ಪಟಾಕಿಗಳನ್ನೂ ಸಿಡಿಸಬಾರದು. ನಿಯಮ ಮೀರಿದಲ್ಲಿ ಕಠಿಣ ಕ್ರಮ ಜರುಗಿಸಲಾಗುತ್ತದೆ ಎಂದು ಅವರು ಹೇಳಿದರು.
ಪರಿಸರಕ್ಕೆ( nature) ಹಾನಿಯಾಗದಂತೆ ಕ್ರಮಗಳನ್ನು ಪಾಲಿಸಿ ಹಬ್ಬ ಆಚರಿಸುವಂತೆ ಸೂಚಿಸಿದ್ದಾರೆ.

ಪೊಲೀಸ್ ರೋಡ್ ಮಾರ್ಚ

ಇಂದು ಕಾರವಾರ ಸೇರಿದಂತೆ ಜಿಲ್ಲೆಯ ಹಲವು ಭಾಗದಲ್ಲಿ ಪೊಲೀಸರು ರೋಡ್ ಮಾರ್ಚ ಮಾಡುವ ಮೂಲಕ ಜನರಲ್ಲಿ ಜಾಗೃತಿ ಮೂಡಿಸಿದರು. ಹಬ್ಬದ ಸಂದರ್ಭದಲ್ಲಿ ಯಾವುದೇ ಅಹಿತಕರ ಘಟನೆ ನಡೆಯದಂತೆ ತಡೆಯಲು KSRP ತುಕಡಿಗಳು ಸೇರಿದಂತೆ ಬಿಗಿ ಪೊಲೀಸ್ ಬಂದವಸ್ತ್ ಜಿಲ್ಲೆಯಾಧ್ಯಾಂತ ಕೈಗೊಳ್ಳಲಾಗಿದೆ.




ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

error: Content is protected !!