ಹುಬ್ಬಳ್ಳಿ–ಅಂಕೋಲಾ ರೈಲ್ವೆ ಯೋಜನೆ ವಿರುದ್ಧ ಇದ್ದ ತಡೆಯಾಜ್ಞೆ ತೆರವು-ರಾಜೀವ ಗಾಂವಕರ್
Karwar|ಹುಬ್ಬಳ್ಳಿ–ಅಂಕೋಲಾ ರೈಲ್ವೆ ಯೋಜನೆ ವಿರುದ್ಧ ಇದ್ದ ತಡೆಯಾಜ್ಞೆ ತೆರವುಗೊಳಿಸಲು ಹೈಕೋರ್ಟ್‍ನಲ್ಲಿ ಉತ್ತರ ಕನ್ನಡ ಜಿಲ್ಲಾ ರೈಲ್ವೆ ಸೇವಾ ಸಮಿತಿ ನಡೆಸಿದ ಹೋರಾಟಕ್ಕೆ ಜಯ ಲಭಿಸಿದೆ ಎಂದು ರೈಲ್ವೆ ಸಮಿತಿಯ ಕಾರ್ಯದರ್ಶಿ ರಾಜೀವ ಗಾಂವಕರ್ ತಿಳಿಸಿದರು.
ಇಂದು ಮಾಧ್ಯಮಗೋಷ್ಠಿ ಯಲ್ಲಿ ಮಾತನಾಡಿದ ಅವರು ಯೋಜನೆ ಕುರಿತು ಅಧ್ಯಯನ ನಡೆಸಲು ಹೈಕೋರ್ಟ್ ಆದೇಶದ ಮೇರೆಗೆ ರಾಷ್ಟ್ರೀಯ ವನ್ಯಜೀವಿ ಮಂಡಳಿ ರಚಿಸಿದ್ದ ತಜ್ಞರ ಸಮಿತಿ ಯೋಜನೆ ಪರವಾಗಿ ವರದಿ ಸಲ್ಲಿಸಿದೆ.
ಇದನ್ನು ಆಧರಿಸಿ ಹೈಕೋರ್ಟ್ ತಡೆಯಾಜ್ಞೆ ಕೋರಿ ವೃಕ್ಷ ಫೌಂಡೇಶನ್ ಸಲ್ಲಿಸಿದ ಅರ್ಜಿಯನ್ನು ತಳ್ಳಿ ಹಾಕಿದೆ ಎಂದ ಅವರು ಕೆಲವರು ಸ್ವಾರ್ಥಕ್ಕಾಗಿ ಕಾರಣವಿಲ್ಲದೇ ಕೋರ್ಟ ಮಟ್ಟಿಲೇರಿದ್ದಾರೆ ಎಂದರು.

2020 ರಲ್ಲಿ ರೈಲ್ವೆ ಯೋಜನೆ ವಿರುದ್ಧ ಬೆಂಗಳೂರಿನ ವೃಕ್ಷಾ ಫೌಂಡೇಶನ್ ಎಂಬ ಸಂಘಟನೆ ಹೈಕೋರ್ಟ್‍ಗೆ ಸುಳ್ಳು ಮಾಹಿತಿ ನೀಡಿ ತಡೆಯಾಜ್ಞೆ ತಂದಿತ್ತು. ತಡೆಯಾಜ್ಞೆ ತೆರವುಗೊಳಿಸಲು ಕೋರಿ 2021ರ ಡಿಸೆಂಬರ್‌ನಲ್ಲಿ ಉತ್ತರ ಕನ್ನಡ ಜಿಲ್ಲಾ ರೈಲ್ವೆ ಸೇವಾ ಸಮಿತಿಯು ಹೈಕೋರ್ಟ್‍ಗೆ ಅರ್ಜಿ ಸಲ್ಲಿಸಿತ್ತು. ವಕೀಲರಾದ ರವೀಂದ್ರ ಕೊಲ್ಲೆ, ಅಕ್ಷಯ ಕೊಲ್ಲೆ ಸಮಿತಿ ಪರ ವಾದಿಸಿದ್ದರು, ರಾಷ್ಟ್ರೀಯ ಹೆದ್ದಾರಿ ಪಕ್ಕದಲ್ಲೇ ರೈಲ್ವೆ ಮಾರ್ಗ ನಿರ್ಮಾಣ ಮಾಡಲು ತಜ್ಞರ ಸಮಿತಿ ಶಿಫಾರಸು ಮಾಡಿದೆ.
ಸಮಿತಿ ಮಾಡಿದ ಶಿಫಾರಸನ್ನು ಪಾಲಿಸುವುದಾಗಿ ರೈಲ್ವೆ ಮಂಡಳಿಯು ಹೈಕೋರ್ಟ್‍ಗೆ ಅಫಿಡವಿಟ್ ಸಲ್ಲಿಸಿದೆ. ಯೋಜನೆ ಶೀಘ್ರ ಕಾರ್ಯಗತಗೊಳ್ಳುವ ಭರವಸೆ ಮೂಡಿದೆ. ಯೋಜನೆ ಜಾರಿಯಾದರೇ ಮುಂದೆ ಜಿಲ್ಲೆಯ ಶಿಕ್ಷಣ,ವ್ಯಾಪಾರ ಅಭಿವೇದ್ಧಿಗೂ ಸಹಾಯವಾಗಲಿದೆ ಎಂದರು.
ಸಮಿತಿಯ ಅಧ್ಯಕ್ಷ ಜಾರ್ಜ್ ಫರ್ನಾಂಡಿಸ್, ಉಪಾಧ್ಯಕ್ಷ ವೆಂಟು ಮಾಸ್ತರ ಶಿಳ್ಯ, ಖಜಾಂಚಿ ಮಹೇಶ ಗೋಳಿಕಟ್ಟೆ ಮತ್ತಿತರರು ಉಪಸ್ತಿತರಿದ್ದರು.
SIRSI| ಮಳೆಗಾಗಿ ಶಿರಸಿಯಲ್ಲಿ ವಿಶೇಷ ಪೂಜೆ.

ಉತ್ತರ ಕನ್ನಡ ಜಿಲ್ಲೆಯಲ್ಲಿ ಮಳೆಯ ಕೊರತೆಯಿಂದಾಗಿ ಕೃಷಿಕರು ಸಂಕಷ್ಟ ಅನುಭವಿಸುತಿದ್ದು ಈ ಹಿನ್ನಲೆಯಲ್ಲಿ ಶಿರಸಿಯ ಶ್ರೀ ಚಿದಂಬರೇಶ್ವರ ದೇವರಲ್ಲಿ ಪರ್ಜನ್ಯ ಪೂಜೆ ಹಾಗೂ ವೆಂಕಟರಮಣ ದೇವರಲ್ಲಿ ಮಳೆಗಾಗಿ ವಿಶೇಷ ಪ್ರಾರ್ಥನೆಯನ್ನು ಸಲ್ಲಿಸಲಾಯಿತು. ಮಂಜುಗುಣಿಯ ಕೋನಾರ ತೀರ್ಥ ದಿಂದ ಚಿದಂಬರೇಶ್ವರ ದೇವರಿಗೆ 40 ರುತ್ವಿಜರು ತೀರ್ಥವನ್ನು ತಂದು ಪರ್ಜನ್ಯ ನಡೆಸಿದರು. ನಂತರ ಮಳೆಗಾಗಿ ವಿಶೇಷ ಪೂಜೆ ನೆರವೇರಿತು.
SIRSI|ಪ್ರಕೃತಿ ಪೂರಕ ಪರಿವರ್ತನೆಯೇ ಧರ್ಮ-ಸ್ವರ್ಣವಲ್ಲೀ ಶ್ರೀಗಳು.

ನಮ್ಮಜೀವನದಲ್ಲಿ ಪ್ರಕೃತಿ ಪೂರಕವಾದ ವಿಶಿಷ್ಟ ಪರಿವರ್ತನೆ ತಂದುಕೊಂಡಲ್ಲಿ ಅದುವೇ ಧರ್ಮ ಆಗುತ್ತದೆ ಎಂದು ಸ್ವರ್ಣವಲ್ಲೀ ಶ್ರೀ ಗಂಗಾಧರೇಂದ್ರ ಸರಸ್ವತೀ ಸ್ವಾಮೀಜಿ ನುಡಿದರು. ಅವರು ತೋಟದ ಸೀಮಾ ಭಜಕರು ಸಲ್ಲಿಸಿದ ಗುರು ಸೇವೆ ಸ್ವೀಕರಿಸಿ ಆಶೀರ್ವಚನ ನುಡಿದರು. ನಾವು ಯಾವುದೇ ವಿಶಿಷ್ಟ ಪರಿವರ್ತನೆ ಮಾಡುವದಿದ್ದರೂ ಪ್ರಕೃತಿ ಪರವಾಗಿ ಇರಬೇಕು ಎಂದರು.
YALLAPURA NEWS|ನೇಣು ಬಿಗಿದು ಯುವಕನ ಆತ್ಮಹತ್ಯೆ.

ಯುವಕನೊಬ್ಬನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ಯಲ್ಲಾಪುರ ತಾಲೂಕಿನ ಮಂಚಿಕೇರಿಯಲ್ಲಿ ನಡೆದಿದೆ. ಹಾವೇರಿ ಜಿಲ್ಲೆಯ ಹಾನಗಲ್ ತಾಲೂಕಿನ ಗುಡ್ಡದಮನೆಯ ಅಜಯ್ ಶೇಕಪ್ಪವಡ್ಡರ್ (27) ಮೃತ ಯುವಕ.
ಮಂಚಿಕೇರಿಯಲ್ಲಿ ಬಾಡಿಗೆ ಮನೆಯಲ್ಲಿ ವಾವಸವಾಗಿದ್ದ ಈತ ಗೌಂಡಿ ಕೆಲಸ ಮಾಡುತ್ತಿದ್ದ. ವಿಪರೀತ ಕುಡಿಯುವ ಚಟ ಹೊಂದಿದ್ದು,ಮನೆಯವರು ಬುದ್ಧಿವಾದ ಹೇಳಿದ ಕಾರಣಕ್ಕೆ ಮನನೊಂದು ಆತ್ಮಹತ್ಯೆಗೆ ಶರಣಾಗಿದ್ದಾನೆ. ಈ ಕುರಿತು ಯಲ್ಲಾಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ನಿಮ್ಮೂರ ಸುದ್ದಿಗಳನ್ನು ನಮಗೆ ವಾಟ್ಸ್ ಅಪ್ ಮಾಡಿ- 9741058799.