ಕಾರವಾರ :- ಬಿಜೆಪಿ (Bjp)ತೊರೆದು ಕಾಂಗ್ರೆಸ್ (congress) ಸೇರ್ಪಡೆಯಾಗುವ ಕುರಿತು ಬಿಜೆಪಿ ಶಾಸಕ ಶಿವರಾಮ್ ಹೆಬ್ಬಾರ್ (Mla shivaram hebbar) ರವರು ತಮ್ಮ ಆಪ್ತ ವಲಯದ ಮುಖಂಡರೊಂದಿಗೆ ಮಂಡಗೋಡಿನ ಪ್ರವಾಸಿ ಮಂದಿರದಲ್ಲಿ ಚರ್ಚೆ ನಡೆಸಿದ್ದಾರೆ.
ಈ ಹಿಂದೆ ಕಾಂಗ್ರೆಸ್ ತೊರೆದು ಬಿಜೆಪಿಗೆ ಸೇರಿದ್ದ ಹೆಬ್ಬಾರ್ ಹಿಂದೆ ನಡೆದ ಉಪಚುನಾವಣೆ ಹಾಗೂ ಹಾಲಿ ವಿಧಾನಸಭಾ ಚುನಾವಣೆಯಲ್ಲೂ ಗೆದ್ದು ಬಂದಿದ್ದರು.
ಆದರೇ ಜಿಲ್ಲಾ ಬಿಜೆಪಿ ಯಲ್ಲಿ ಅಂತರ ಕಾಯ್ದುಕೊಂಡಿದ್ದ ಅವರಿಗೆ ಮೂಲ ಬಿಜೆಪಿಗರು ಉರುಳಾಗಿದ್ದರು.ಇದೀಗ ಎಸ್.ಟಿ ಸೋಮಶೇಖರ್ ರವರು ಕಾಂಗ್ರೆಸ್ ಸೇರುವ ಕುರಿತು ಚರ್ಚೆ ಆಗುತಿದ್ದಂತೆ ಹೆಬ್ಬಾರ್ ಸಹ ತಾವು ಕಾಂಗ್ರೆಸ್ ಸೇರುವ ಕುರಿತು ಇದೀಗ ತಮ್ಮ ಆಪ್ತ ವಲಯದಲ್ಲಿ ಸಭೆ ನಡೆಸಿ ಚರ್ಚಿಸಿದ್ದಾರೆ. ಇನ್ನು ಅಪ್ತ ವಲಯದ ಮುಖಂಡರು ಸಹ ಕಾಂಗ್ರೆಸ್ ಸೇರುವಂತೆ ಸಲಹೆ ನೀಡಿದ್ದಾರೆ.
ಇನ್ನು ತಾವು ಅಭಿಪ್ರಾಯ ಸಂಗ್ರಹಿಸಿ ಬೆಂಗಳೂರಿಗೆ ಹೋದ ನಂತರ ತೀರ್ಮಾನ ಮಾಡುತ್ತೇನೆ ಎಂದು ಹೇಳಿಕೆ ನೀಡಿದ್ದು ಇದೀಗ ಬಿಜೆಪಿಗೆ ಮುಳುವಾಗಿದೆ.
ಇದನ್ನೂ ಓದಿ:- ಯಲ್ಲಾಪುರ ಶಾಸಕ ಶಿವರಾಮ್ ಹೆಬ್ಬಾರ್ ಕಾಂಗ್ರೆಸ್ ಸೇರ್ತಾರಾ? ಹೇಳಿದ್ದೇನು?