ಮಳೆಯ ಅಬ್ಬರಕ್ಕೆ ಸ್ಟ್ರಾಂಗ್ ರೂಮ್ ತಲುಪದ ಮತಯಂತ್ರ! ಹೇಗಿದೆ ಭದ್ರತೆ ವಿವರ ನೋಡಿ

106

ಕಾರವಾರ :- ನಿನ್ನೆ ಸುರಿದಿದ್ದ ಭಾರಿ ಮಳೆಯಿಂದಾಗಿ ಸ್ಟ್ರಾಂಗ್ ರೂಮ್ ತಲುಪಬೇಕಿದ್ದ ಮತಯಂತ್ರಗಳು ಲಾರಿಯಲ್ಲಿ ಕೊಂಡೊಯ್ಯುವಾಗ ರಸ್ತೆಯಲ್ಲೇ ಹುಗಿದು ಹೋದ ಘಟನೆ ಹಳಿಯಾಳದ ಸರ್ಕಾರಿ ಪದವಿ ಪೂರ್ವ ಶಾಲೆಯ ಆವರಣದ ಬಳಿ ನಡೆದಿದ್ದು ಇಂದು ಹರಸಾಹಸ ಪಟ್ಟು ಮಣ್ಣಿನಲ್ಲಿ ಹುಗಿದು ಹೋಗಿದ್ದ ಮತಯಂತ್ರ ತುಂಬಿದ್ದ ಲಾರಿಯನ್ನು ಪೋಕ್ ಲೈನ್ ಮೂಲಕ ಮೇಲೆತ್ತಿ ಹಳಿಯಾಳದ ಭದ್ರತಾ ಕೊಠಡಿಯಿಂದ ಕುಮಟಾಕ್ಕೆ ಸಾಗಿಸಲಾಯಿತು.

ಇನ್ನು ಕುಮಟಾದ ಎ.ವಿ ಬಾಳಿಗಾ ಕಾಲೇಜಿನ ನಲ್ಲಿ ಮತ ಎಣಿಕೆಗೆ ವ್ಯವಸ್ಥೆ ಮಾಡಲಾಗಿದ್ದು ಅಭ್ಯರ್ಥಿ ಗಳ ರಾಜಕೀಯ ಭವಿಷ್ಯದ ಪೆಟ್ಟಿಗೆ ಈಗ ಸ್ಟ್ರಾಂಗ್ ರೂಮ್ ನಲ್ಲಿ ಭದ್ರವಾಗಿದ್ದು ,ಭದ್ರತೆಗಾಗಿ ಎರಡು KSRPF, CRPF ತುಕಡಿ ನಿಯೋಜನೆ ಮಾಡಲಾಗಿದ್ದು ಇದರ ಹೊರತಾಗಿ ರಾಜ್ಯ ಪೋಲಿಸ್ ಸಿಬ್ಬಂದಿಗಳ ನಿಯೋಜನೆ ಮಾಡಲಾಗಿದೆ.
ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

error: Content is protected !!