ಕಾರವಾರ:-ಕಾರವಾರ ತಾಲ್ಲೂಕಿನ ವ್ಯಾಪ್ತಿಯಲ್ಲಿ ಬರುವ 33/11ಕೆವಿ ವಿದ್ಯುತ್ ಉಪಕೇಂದ್ರ ಕೋಣಿ ಹಾಲಿಯಿರುವ 2.5ಎಂವಿಎ ಶಕ್ತಿ ಪರಿವರ್ತಕಗಳನ್ನು ತೆಗೆದು ಹೊಸ 2.8ಎಂವಿಎ ಶಕ್ತಿ ಪರಿವರ್ತಖಗಳಿಂದ ಬದಲಾಯಿಸುವ ಕಾಮಗಾರಿಯನ್ನು ಹಮ್ಮಿಕೊಂಡಿರುವುದರಿಂದ ಸೆ.12 ರಂದು ಬೆಳಗ್ಗೆ 9 ರಿಂದ 6 ಗಂಟೆಯವರೆಗೆ ಕಾರವಾರ ನಗರ ಕೋಡಿಬಾಗ, ಹಬ್ಬುವಾಡ, ಎನ್ ಎಚ್-17, ಬೈತ್ಕೂಲ್, ಬಿಣಗಾ, ತೋಡುರ, ಅಮದಳ್ಳಿ ಗ್ರಾಮ ಪಂಚಾಯತಗಳಲ್ಲಿ ಪ್ರದೇಶಗಳಲ್ಲಿ ವಿದ್ಯುತ್ ಸರಬರಾಜಿನಲ್ಲಿ ಆಡಚಣೆ ಉಂಟಾಗಲಿದೆ ಎಂದು ಕಾರ್ಯನಿರ್ವಾಹಕ ಇಂಜಿನಿಯರು(ವಿ) ಅವರು ತಿಳಿಸಿದ್ದಾರೆ.
ಸೆ.13 ರಂದು ಕುಮಟಾ ದಲ್ಲಿ ವಿದ್ಯುತ್ ವ್ಯತ್ಯಯ
ಕುಮಟಾ ಉಪವಿಭಾಗದ ವ್ಯಾಪ್ತಿಯಲ್ಲಿ ಸೆ.13 ರಂದು 33 ಕೆ.ವಿ ಗೋಕರ್ಣ ಉಪಕೇಂದ್ರದಲ್ಲಿ ನಿರ್ವಹಣಾ ಕಾಮಗಾರಿ ಮತ್ತು ಜಂಗಲ್ ಕಟ್ಟಿಂಗ ಇರುವುದರಿಂದ ಗೋಕರ್ಣ, ಮಾದನಗೇರಿ, ತದಡಿ, ಬಂಕಿಕೊಡ್ಲ, ಬಿಜ್ಜುರು, ಒಂ ಬೀಚ್, ಗಂಗಾವಳಿ ಫೀಡರಿನ ಎಲ್ಲಾ ಭಾಗಗಳಲ್ಲಿ ಹಾಗೂ ಮರಾಕಲ ಶಾಖೆಯ 11 ಕೆ.ವಿ ಮಾರ್ಗದಲ್ಲಿ ನಿರ್ವಹಣಾ ಕಾಮಗಾರಿ ಹಾಗೂ ಜಂಗಲ್ ಕಟ್ಟಿಂಗ ಇರುವದರಿಂದ ಸಂತೆಗುಳಿ, ಕಲ್ಲಬ್ಬೆ, ಹೊದ್ಕೆ-ಶಿರೂರು, ಉಳ್ಳೂರುಮಠ, ಹಾಗೂ ಮೂರುರು ಫೀಡರಿನ ವ್ಯಾಪ್ತಿಯಲ್ಲಿ ಹಾಗೂ ನಗರ ಶಾಖೆಯ 11 ಕೆ.ವಿ ಮಾರ್ಗದಲ್ಲಿ ಐ. ಆರ್, ಬಿ ಯವರ ಕಾಮಗಾರಿ ಇರುವುದರಿಂದ ಚಿತ್ರಗಿ ಫೀಡರಿನ ಎಲ್ಲಾ ಭಾಗಗಳಲ್ಲಿ ಮುಂಜಾನೆ: 09.30 ರಿಂದ ಸಾಯಂಕಾಲ 04:30 ಗಂಟೆ ವರೆಗೆ ಹಾಗೂ ಇಂಡಸ್ಟಿçಯಲ ಫೀಡರನ 11 ಕೆ.ವಿ ಮಾರ್ಗದಲ್ಲಿ ಮುಂಜಾನೆ: 10 ರಿಂದ ಮಧ್ಯಾಹ್ನ 12 ಗಂಟೆ ವರೆಗೆ ವಿದ್ಯುತ್ ವ್ಯತ್ಯಯವಾಗಲಿದೆ.