BREAKING NEWS
Search

Karwar:ನಾಲ್ಕು ಟನಲ್ -ಮೂರು ಪ್ರಶ್ನೆಗೆ ಉತ್ತರ ನೀಡಿ ಡಿಸಿ ಹೇಳಿದ್ದೇನು?

148

ಕಾರವಾರ :- ಐ.ಆರ್.ಬಿ ಕಂಪನಿ ರಾಷ್ಟ್ರೀಯ ಹೆದ್ದಾರಿ 66 ರಲ್ಲಿ ಚತುಷ್ಪತ ಕಾಮಗಾರಿ ನಡೆಸುತ್ತಾ 10 ವರ್ಷಗಳು ಕಳೆಯುತ್ತಿದೆ. ಇತ್ತೀಚೆಗೆ ಕಾರವಾರದಲ್ಲಿ ನಿರ್ಮಾಣವಾದ ನಾಲ್ಕು ಟನಲ್ ಗಳು ಸೋರಿಕೆ ಮತ್ತು ಲ್ಯಾಂಡ್ ಸ್ಲೈಡ್ ನಿಂದಾಗಿ ಫಿಟ್ ನೆಸ್ ಸರ್ಟಿಫಿಕೇಟ್ ಇಲ್ಲದ ಕಾರಣ 08-07-2023 ರಂದು ಟನಲ್ ನಲ್ಲಿ ವಾಹನ ಸಂಚಾರಕ್ಕೆ ನಿರ್ಬಂಧವನ್ನು ಜಿಲ್ಲಾಡಳಿತ ಹೇರಿತ್ತು. ಇದರ ಬೆನ್ನಲ್ಲೇ ಪುಣೆಯ ಸಂಸ್ಥೆಯೊಂದರಿಂದ ಫಿಟ್ ನೆಸ್ ಸರ್ಟಿಫಿಕೇಟ್ ನನ್ನು ಜಿಲ್ಲಾಡಳಿತಕ್ಕೆ ಇದೇ ತಿಂಗಳ 17 ರಂದು ಸಲ್ಲಿಕೆ ಮಾಡಿದೆ. ಆದ್ರೆ ಈ ಕುರಿತು ಅನುಮಾನ ವ್ಯಕ್ತಪಡಿಸಿದ್ದ ಜಿಲ್ಲಾಡಳಿತ IRB ಕಂಪನಿ ಹಾಗೂ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರಕ್ಕೆ ಪ್ರಶ್ನೆಯನ್ನು ಕೇಳಿತ್ತು .ಆದ್ರೆ ಇದಕ್ಕೆ ಉತ್ತರ ನೀಡದ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ನಡೆಯಿಂದ ಟನಲ್ ನನ್ನು ವಾಹನ ಸಂಚಾರಕ್ಕೆ ಮುಕ್ತಪಡಿಸಲು ಜಿಲ್ಲಾಡಳಿತ ಅನುಮತಿ ನೀಡಿರಲಿಲ್ಲ‌ ಆದ್ರೆ ಇಂದು ಎಮ್.ಎಲ್.ಸಿ ಗಣಪತಿ ಉಳ್ವೇಕರ್ ನೇತ್ರತ್ವದಲ್ಲಿ ಬಿಜೆಪಿ ಕಾರ್ಯಕರ್ತರು ಟನಲ್ ಮುಂದೆ ಪ್ರತಿಭಟನೆ ನಡೆಸಿದ್ದು
ಒತ್ತಾಯಪೂರ್ವಕವಾಗಿ ಟನಲ್ ಎದುರಿನ ಬ್ಯಾರಿಕೇಡ್ ತೆಗೆಯಲು ಪ್ರತಿಭಟನಾಕಾರರು ಮುಂದಾಗಿದ್ದರು.ಈ ವೇಳೆ ಪೊಲೀಸರು ಮತ್ತು ಪ್ರತಿಭಟನಾ ನಿರತರ ಮಧ್ಯೆ ಮಾತಿನ ಚಕಮಕಿ ನಡೆದಿತ್ತು.ಇನ್ನು ಟನಲ್ ಓಪನ್ ಮಾಡುವವರೆಗೂ ಸ್ಥಳದಿಂದ ತೆರಳದಿರಲು ಪ್ರತಿಭಟನಾಕಾರರು ತೀರ್ಮಾನಿಸಿ ಸ್ಥಳದಲ್ಲೇ ಮೊಕ್ಕಾಂ ಹೂಡಿದ್ದಾರೆ.

ಇತ್ತ ಜಿಲ್ಲಾಧಿಕಾರಿ ಕಚೇರಿಯಲ್ಲಿ ಶಾಸಕ ಸತೀಶ್ ಸೈಲ್ ಹಾಗೂ ಜಿಲ್ಲಾಧಿಕಾರಿ ನೇತ್ರತ್ವದಲ್ಲಿ ಅಧಿಕಾರಿಗಳ ಸಭೆ ನಡೆದಿದ್ದು ಈ ವೇಳೆ ಹೆದ್ದಾರಿ ಪ್ರಾಧಿಕಾರಕ್ಕೆ ಜಿಲ್ಲಾಧಿಕಾರಿ ಗಂಗೂಬಾಯಿ ಮಾನಕರ್ ಮೂರು ಪ್ರಶ್ನೆಗಳನ್ನು ಇಟ್ಟಿದ್ದು ಇದಕ್ಕೆ ಉತ್ತರ ನೀಡಿದಲ್ಲಿ ಟನಲ್ ಮುಕ್ತಗೊಳಿಸುವುದಾಗಿ ಹೇಳಿದ್ದಾರೆ.

ಹಾಗಿದ್ರೆ ಯಾವುದು ಮೂರು ಪ್ರಶ್ನೆ ಇಲ್ಲಿದೆ ನೋಡಿ.

ಇನ್ನು ಈ ಪ್ರಶ್ನೆಗಳಿಗೆ ಹೆದ್ದಾರಿ ಪ್ರಾಧಿಕಾರ ಉತ್ತರ ನೀಡಿದ ತಕ್ಷಣವೇ ಟನಲ್ ನನ್ನು ವಾಹನ ಸಂಚಾರಕ್ಕೆ ಮುಕ್ತ ಗೊಳಿಸಲಾಗುವುದು ಎಂದು ಜಿಲ್ಲಾಧಿಕಾರಿಗಳು ಸಭೆಯಲ್ಲಿ ತಿಳಿಸಿದ್ದಾರೆ.

ಬಲ್ಲ ಮೂಲದ ಪ್ರಕಾರ ಈ ಮೂರು ಪ್ರಶ್ನೆಗಳಿಗೆ ಉತ್ತರ ನೀಡಿದ ಮರುಕ್ಷಣವೇ ಡನಲ್ ನನ್ನು ಸಾರ್ವಜನಿಕರಿಗೆ ಮುಕ್ತಗೊಳಿಸುವ ಸಾಧ್ಯತೆಗಳಿವೆ.
ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

error: Content is protected !!