BREAKING NEWS
Search

12 ದಿನದ ನಿರಂತರ ಪರಿಶ್ರಮ ಸಮುದ್ರದಲ್ಲಿ ಸಿಲುಕಿದ ಬೋಟ್ ಎತ್ತಲು 35 ಲಕ್ಷ ಕರ್ಚು

125

ಕಾರವಾರ:ಹವಾಮಾನ ವೈಪರಿತ್ಯ ದಿಂದ ಲಂಗರು ತುಂಡಾಗಿ ಕಳೆದ 12 ದಿನಗಳಿಂದ ಕಾರವಾರ ನಗರದ ದಿವೇಕರ್ ಕಾಲೇಜು ಬಳಿ ಕಡಲತೀರದಲ್ಲಿ ಹೂತುಕೊಂಡಿದ್ದ ಮಂಗಳೂರು ಮೂಲದ ಪರ್ಷಿಯನ್ ಬೋಟ್ ಕೊನೆಗೂ ನೆಲ ಬಿಟ್ಟು ನೀರಿಗಿಳಿದಿದೆ.

ಹವಮಾನ ವೈಪರಿತ್ಯದಿಂದಾಗಿ ಸೆ. 20 ರಂದು ಆಳ ಸಮುದ್ರದ ಮೀನುಗಾರಿಕೆಗೆ ತೆರಳಿದ್ದ ಉಡುಪಿ, ಮಂಗಳೂರು, ಗೋವಾ, ಹಾಗೂ ತಮಿಳುನಾಡು ಮೂಲದ ಕೆಲ ಮೀನುಗಾರಿಕಾ ಬೋಟಗಳು ಕಾರವಾರದ ಟ್ಯಾಗೋರ ಕಡಲತೀರದ ಬಳಿ ಲಂಗರು ಹಾಕಿದ್ದವು. ಆದರೆ ಗಾಳಿ ರಬಸಕ್ಕೆ ಎರಡು ಬೋಟಗಳು ಲಂಗರು ತುಂಡಾಗಿ ದಡಕ್ಕೆ ಬಂದು ಸಿಲುಕಿಕೊಂಡಿದ್ದವು. ಒಂದನ್ನು ತೆರವು ಮಾಡಲಾಗಿತ್ತು. ಆದರೆ ಮಂಗಳೂರಿನ ಸುರತ್ಕಲ್ ಮೂಲದ ಮಿಸ್ಬಾ ಹೆಸರಿನ ಬೋಟ್ ತೆರವಿಗೆ ವಿವಿಧ ರೀತಿಯ ಪ್ರಯತ್ನ ನಡೆಸಿದರೂ ಮರಳಿ ನೀರಿಗಿಳಿಸಲು ಸಾಧ್ಯವಾಗಲಿಲ್ಲ.

ಸುಮಾರು 12 ಮೀನುಗಾರರಿದ್ದ ಬೋಟ್ ಕಡಲಿನಲ್ಲಿಯೇ ನಿಲ್ಲುತ್ತದೆ. ಬೋಟ್ ಮೇಲೆತ್ತಲು ಇತರ ಬೋಟ್ ಸಹಾಯ ಪಡೆದಿದ್ದರೂ ಕೂಡ ಹಗ್ಗವೇ ತುಂಡಾಗಿ ನೀರಿಗಿಳಿಸಲು ಸಾಧ್ಯವಾಗಲಿಲ್ಲ. ಜೊತೆಗೆ ದೋಣಿಯ ಎಂಜಿನ್ ಕೂಡ ಹಾಳಾಗಿತ್ತು. ಜೊತೆಗೆ ಬೋಟ್‌ನಲ್ಲಿದ್ದ ಮೀನು ಕೂಡ ಹಾಳಾಗುವ ಸಾಧ್ಯತೆ ಇರುವ ಕಾರಣಕ್ಕೆ ಸಿಕ್ಕ ಬೆಲೆಗೆ ಮಾರಾಟ ಮಾಡಲಾಗಿತ್ತು. ಬಂದರು ಇಲಾಖೆಯ ಟ್ಯಾಗ್ ಬಾಟ್ ಸಹಾಯ ಕೇಳಿದರೂ ಮೇಲಾಧಿಕಾರಿಗಳ ಅನುಮತಿ ಟಗ್ ಕೊಡಲು ನಿರಾಕರಿಸಲಾಗಿದೆ.
ಕಳೆದ ಎರಡು ದಿನದ ಹಿಂದೆ ಯಲ್ಲಾಪುರದಿಂದ ಕ್ರೇನ್ ಹಾಗೂ ಜೆಸಿಬಿ ತಂದು ಬೋಟ್ ನೀರಿಗೆ ಇಳಿಸುವ ಕಾರ್ಯಾಚರಣೆ ನಡೆಸಲಾದರೂ ಸಾಧ್ಯವಾಗಿಲ್ಲ. ಕೆಲವೇ ಮೀಟರ್ ದೂರದವರೆಗೆ ಮಾತ್ರ ಕೊಂಡೊಯ್ದು ಕಾರ್ಯಾಚರಣೆ ಸ್ಥಗೀತಗೊಳಿಸಲಾಯಿತು. ಆದರೆ ಸಚಿವ ಮಂಕಾಳ ವೈದ್ಯ ಅವರು ಬೋಟ್ ತೆರವಿಗೆ ಟ್ಯಾಗ್ ಬೋಟ್ ಕಳುಹಿಸುವಂತೆ ಕಾರವಾರ ಬಂದರಿನ ಅಧಿಕಾರಿಗಳಿಗೆ ಸೂಚಿಸಿದ್ದಾರಾದರೂ ಟ್ಯಾಗ್ ಸಿಕ್ಕಿಲ್ಲ. ಆದರೆ ಇಂದು ಮುಂಜಾನೆ ಸ್ವಲ್ಪ ದೂರ ತಳ್ಳಿದ್ದ ಬೋಟ್ ಅನ್ನು ಕರಾವಳಿ ಕಾಮಲು ಪಡೆ ಸಹಾಯದೊಂದಿಗೆ ಕೊನೆಗೂ ಇತರ ಬೋಟ್ ಮತ್ತು ಜೆಸಿಬಿ ಸಹಕಾರದಿಂದ ತಳ್ಳಿ ನೀರಿಗಿಳಿಸಲಾಗಿದೆ. ಸಮುದ್ರದಲ್ಲಿ ಅಲೆಗಳು ಜೋರಾದ ಕಾರಣದಿಂದ ಕೊನೆಗೂ ಕಾರ್ಯಾಚರಣೆ ಮೂಲಕ ಬೋಟ್ ನೀರಿಗಿಳಿಸಿದ್ದಾರೆ.
ಬೋಟು ಮರಳಿನಲ್ಲಿ ಹುದುಗಿಕೊಂಡ ಎಂಜಿನ್ ಸೇರಿದಂತೆ ಗೇರ್‌ಬಾಕ್ಸ್, ಚುಕ್ಕಾಣಿ ಮತ್ತು ಪ್ರೊಫೆಲರ್ ಕೂಡ ಹಾಳಾಗಿವೆ. ಈ ಬಗ್ಗೆ ಕಾರವಾರದ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

ರಿಪೇರಿಗಾಗಿ ಅಂದಾಜು 29 ಲಕ್ಷ ಖರ್ಚಾಗಲಿದೆ. ಬೋಟನ್ನು ನೀರಿಗೆಳೆದ ಬಳಿಕ ಕಾರವಾರದ ಬಂದರಿನಲ್ಲಿ ಮೇಲಕ್ಕೆತ್ತಿ ರಿಪೇರಿ ಮಾಡಿಸಲಾಗುವುದು. ಆದರೆ ಕಾರ್ಯಾಚರಣೆಗೆ ಬಳಸಿದ ಯಂತ್ರಗಳ ಬಾಡಿಗೆ, ಕಾರ್ಮಿಕರ ವಸತಿ ಸೇರಿದಂತೆ ಒಟ್ಟೂ 35 ಲಕ್ಷ ರೂ ಕರ್ಚಾಗಿ ದೊಡ್ಡ ನಷ್ಟವಾಗಿದೆ ಎಂದು ಫಾರುಕ್ ಮಾಹಿತಿ ನೀಡಿದ್ದಾರೆ.
ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

error: Content is protected !!