BREAKING NEWS
Search

Utteakannada news:ಉತ್ತರ ಕನ್ನಡ ಜಿಲ್ಲೆಯ ಈ ಕ್ಷಣದ ವರೆಗಿನ Top 3 ಸುದ್ದಿಗಳನ್ನು ನೋಡಿ.

137

ಉತ್ತರ ಕನ್ನಡ (uttrakannada today news) ಜಿಲ್ಲೆಯಲ್ಲಿ ಇಂದು ಏನೆಲ್ಲಾ ಘಟನೆ ನಡೆದಿದೆ.ಯಾವ ತಾಲೂಕಿನಲ್ಲಿ ಏನು ಸುದ್ದಿ. ಪ್ರತಿ ಕ್ಷಣದ ಸುದ್ದಿಗಳು ಹಾಗೂ ಇಂದಿನ ಟಾಪ್ -3 ಸುದ್ದಿಗಳು ಈ ಕೆಳಗಿನಂತಿವೆ. ನೋಡಿ ಷೇರ್ ಮಾಡಿ.

Bhatkal: ಕರ್ತವ್ಯಕ್ಕೆ ತೆರಳಿದ ವೈದ್ಯ ನಾಪತ್ತೆ.

ಕಾರವಾರ:- ಕರ್ತವ್ಯಕ್ಕೆ ಹೋಗುತ್ತೇನೆ ಎಂದು ಮನೆಯಲ್ಲಿ ಹೇಳಿ ಹೋದ ವೈದ್ಯ ( doctor) ನಾಪತ್ತೆಯಾದ ಘಟನೆ ಉತ್ತರ ಕನ್ನಡ ಜಿಲ್ಲೆಯ ಭಟ್ಕಳದಲ್ಲಿ (bhatkal)ನಡೆದಿದೆ.

ಭಟ್ಕಳ ಸರ್ಕಾರಿ ಆಸ್ಪತ್ರೆಯಲ್ಲಿ ಚರ್ಮರೋಗ ತಜ್ಞ ಎಚ್.ಟಿ ಉಮೇಶ್ ನಾಪತ್ತೆಯಾಗಿರುವ ವೈದ್ಯರಾಗಿದ್ದು
ಮೂಲತಃ ನಿಟ್ಟೂರು, ಹರಪನಹಳ್ಳಿ ನಿವಾಸಿಯಾಗಿದ್ದ ಡಾ. ಉಮೇಶ್ ಹಾಲಿ ಭಟ್ಕಳದ ಡಿ.ಪಿ ಕಾಲೊನಿಯಲ್ಲಿ ವಾಸವಿದ್ದರು.

ಅ.10ರಂದು ಬೆಳಗ್ಗೆ ತನ್ನ ಮನೆಯಿಂದ ಆಸ್ಪತ್ರೆಗೆ ಕರ್ತವ್ಯಕ್ಕೆ ಹೊದವರು ಕಾಣೆಯಾಗಿದ್ದಾರೆ.ಕಳೆದ ಮೂರು ದಿನಗಳಿಂದ ಡಾ. ಉಮೇಶ್ ಮೊಬೈಲ್ ಸ್ವಿಚ್ ಆಫ್ ಆಗಿದ್ದು ಭಟ್ಕಳ ಗ್ರಾಮೀಣ ಠಾಣೆಯಲ್ಲಿ ಉಮೇಶ್ ಪತ್ನಿಯಿಂದ ದೂರು ದಾಖಲಾಗಿದೆ.

ಮುರ್ಡೇಶ್ವರದ ಕಡಲಲ್ಲಿ ಅಲೆಗಳಿಗೆ ಸಿಲುಕಿದ್ದ 3 ಜನ ಪ್ರವಾಸಿಗರ ರಕ್ಷಣೆ.

ಸಮುದ್ರದಲ್ಲಿ ಈಜಲು ತೆರಳಿ ಅಲೆಗಳಿಗೆ ಸಿಲುಕಿದ್ಧ ಮೂರು ಜನರನ್ನು ಲೈಪ್ ಗಾರ್ಡಗಳು ರಕ್ಷಣೆ ಮಾಡಿದ ಘಟನೆ ಉತ್ತರ ಕನ್ನಡ ಜಿಲ್ಲೆಯ ಭಟ್ಕಳ ತಾಲೂಕಿನ ಮುರ್ಡೇಶ್ವರದ ಕಡಲ ತೀರದಲ್ಲಿ ನಡೆದಿದೆ.

ಹಾವೇರಿ ಮೂಲದ ಹಂಸಬಾವಿಯ ಸಿದ್ದಾರ್ಥ( 24), ದೀಕ್ಷಿತ್ (20), ಸಂತೋಷ್ (24) ರಕ್ಷಣೆ ಗೊಳಗಾದವರಾಗಿದ್ದು , ಲೈಪ್ ಗಾರ್ಡಗಳಾದ ಚಂದ್ರಶೇಖರ್ ದೇವಾಡಿಗ ,ಜಯರಾಮ್,ಪಾಂಡು,ಹನುಮಂತು ರಕ್ಷಣೆ ಮಾಡಿದ ಲೈಫ್ ಗಾರ್ಡಗಳಾಗಿದ್ದಾರೆ.

ಐದು ಜನರ ತಂಡ ಧರ್ಮಸ್ಥಳಕ್ಕೆ ತೆರಳಿದ್ದು ನಂತರ ಮುರ್ಡೇಶ್ವರಕ್ಕೆ ಇಂದು ಆಗಮಿಸಿದ್ದರು. ಈವೇಳೆ ಮೂರು ಜನರು ಸಮುದ್ರಕ್ಕೆ ಇಳಿದಿದ್ದು ,ಈವೇಳೆ ಅಲೆಗಳಿಗೆ ಕೊಚ್ಚಿಹೋಗಿದ್ದರು.

Rain alert: ಉತ್ತರ ಕನ್ನಡ ಜಿಲ್ಲೆಯಲ್ಲಿ ಮುಂದುವರೆಯಲಿದೆ ಮಳೆ.ಕಳೆದ 24 ಘಂಟೆಯಲ್ಲಿ ಎಷ್ಟು ಮಳೆಯಾಗಿದೆ ವಿವರ ನೋಡಿ.

ಕಾರವಾರ:- ಹವಾಮಾನ ಇಲಾಖೆ ಮಾಹಿತಿಯಂತೆ ಉತ್ತರ ಕನ್ನಡ ಜಿಲ್ಲೆಯಲ್ಲಿ ಇಂದು ಸಹ ಮಳೆಯಾಗುವ ಸೂಚನೆ ನೀಡಿದೆ.ನಿನ್ನೆ ಕಾರವಾರ, ಹಳಿಯಾಳ,ಶಿರಸಿ,ಹೊನ್ನಾವರ ಭಾಗದಲ್ಲಿ ಮಳೆಯಾಗಿತ್ತು. ಇಂದು ಸಹ ಸಂಜೆ ವೇಳೆಗೆ ಮಳೆಯಾಗಲಿದೆ.
ಜಿಲ್ಲೆಯಲ್ಲಿ ಕಳೆದ 24 ಘಂಟೆಯಲ್ಲಿ ಸುರಿದ ಮಳೆಯ ವಿವರ ಈ ಕೆಳಗಿನಂತಿದೆ.




ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

error: Content is protected !!