Sirsi|ಸರಣಿ ಅಪಘಾತ ತಪ್ಪಿದ ಭಾರಿ ಅನಾಹುತ!

68

ಆಂಕರ್ :- ವಾಹನಗಳ ನಡುವೆ ಸರಣಿ ಅಪಘಾತವಾಗಿ ರಸ್ತೆ ಬಿಟ್ಟು ಅಂಗಡಿಗಳಿಗೆ ನುಗ್ಗಿ ಅನಾಹುತ ಸೃಷ್ಟಿಸಿದ ಘಟನೆ ಉತ್ತರ ಕನ್ನಡ ಜಿಲ್ಲೆಯ ಶಿರಸಿ ತಾಲೂಕಿನ ಬಿಸಿಲ ಕೊಪ್ಪದಲ್ಲಿ ನಡೆದಿದೆ. ಇದನ್ನೂ ಓದಿ:- ದಸರ ಉತ್ಸವಕ್ಕೆ ದಿನಾಂಕ ನಿಗದಿ|ಹೇಗಿರಲಿದೆ ಈಬಾರಿ ದಸರ ವಿವರ ನೋಡಿ

ಬೊಲೆರೋ ಪಿಕಪ್ ,ಎನ್. ಡಬ್ಲೂ,ಕೆ.ಎಸ್ .ಆರ್ .ಟಿ.ಸಿ ಬಸ್ ಹಾಗೂ ಮಾರುತಿ ಓಮಿನಿ ನಡುವೆ ಸರಣಿ ಅಪಘಾತವಾಗಿದೆ. ಓಮಿನಿ ಮತ್ತು ಬೊಲೆರೋ ಪಿಕಪ್ ವಾಹನ ರಸ್ತೆ ಪಕ್ಕದಲ್ಲಿದ್ದ
ಅಂಗಡಿಗೆ ನುಗ್ಗಿದ್ದು ವಾಹನ ಚಾಲಕರು ಸೇರಿ ಕೆಲವರಿಗೆ ಗಾಯಗಳಾಗಿದ್ದು ,ಗಾಯಾಳುಗಳನ್ನು ಶಿರಸಿ ಸರ್ಕಾರಿ ಆಸ್ಪತ್ರೆಗೆ ದಾಖಲು ಮಾಡಲಾಗಿದೆ.


ಮಳಗಿಯಿಂದ ಶಿರಸಿಗೆ ಸಾಗುತಿದ್ದ ಪಿಕಪ್ ವಾಹನ , ಓಮಿನಿ ಶಿರಸಿಯಿಂದ ಹಾವೇರಿಗೆ ಸಾಗುತಿದ್ದ ಬಸ್ ನ ನಡುವೆ ಅಪಘಾತ ಸಂಭವಿಸಿ ಘಟನೆ ನಡೆದಿದ್ದು ಈ ಸಂಬಂಧ ಶಿರಸಿ ಗ್ರಾಮೀಣ ಠಾಣೆ ಯಲ್ಲಿ ಪ್ರಕರಣ ದಾಖಲಾಗಿದೆ.




ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

error: Content is protected !!