BREAKING NEWS
Search

Sirsi|ನ್ಯಾಯಾಲಯದ ಆದೇಶ ಧಿಕ್ಕರಿಸಿದ ಸಾರಿಗೆ ಇಲಾಖೆ! 4 ಬಾರಿ ಜಪ್ತು ಮಾಡಿದ ನ್ಯಾಯಾಲಯ!

135

ಶಿರಸಿ:- ಶಿರಸಿಯ ನ್ಯಾಯಾಲಯದಿಂದ ಆದೇಶ ಉಲ್ಲಂಘಿಸಿದ ಕಾರಣಕ್ಕೆ ನಾಲ್ಕನೇ ಬಾರಿಯೂ ವಾಯುವ್ಯ ಕರ್ನಾಟಕ ಸಾರಿಗೆ ಬಸ್ ನನ್ನು ಜಪ್ತು ಪಡಿಸಿಕೊಂಡ ಘಟನೆ ಇಂದು ನಡೆದಿದೆ.

2019ರಲ್ಲಿ ಶಿರಸಿ-ಹಾವೇರಿ ಮಾರ್ಗದ ಗೊಣಿಕೊಪ್ಪ ಕ್ರಾಸ್ ಬಳಿ ಬೈಕ್ ಮತ್ತು ಬಸ್ ನಡುವೆ ಅಪಘಾತವಾಗಿತ್ತು. ಈ ವೇಳೆ ಬೈಕ್ ಸವಾರ ನಾರಾಯಣ ನಾಯ್ಕ ಮೃತಪಟ್ಟಿದ್ದರು.

ಇದನ್ನೂ ಓದಿ:-ಅರಬ್ಬಿ ಸಮುದ್ರದಲ್ಲಿ 36 ಜನರ ರಕ್ಷಣೆ.

ಅಪಘಾತ ಪ್ರಕರಣದಲ್ಲಿ ವಾ.ಕ.ರ. ಸಂಸ್ಥೆಯಿಂದ ಮೃತ ಕುಟುಂಬಕ್ಕೆ 21 ಲಕ್ಷದ 46 ಸಾವಿರ ಹಣ ನೀಡುವಂತೆ ಆದೇಶಿಸಿತ್ತು. ಆದರೇ ಈ ಆದೇಶದಂತೆ ಕುಟುಂಬಕ್ಕೆ ಸಂಪೂರ್ಣ ಹಣ ನೀಡಿರಲಿಲ್ಲ. ಹೀಗಾಗಿ ಮರಳಿ ನ್ಯಾಯಾಲಯದ ಮೆಟ್ಟಿಲು ಏರಿದ್ದ ಕುಟುಂಬ ತಮಗೆ ಬರಬೇಕಾದ 11ಲಕ್ಷ 16 ಸಾವಿರ ನೀಡುವಂತೆ ದಾವೆ ಹೂಡಿದ್ದರು. ಈ ಹಿನ್ನಲೆಯಲ್ಲಿ ವಾದ ವಿವಾದವನ್ನು ಆಲಿಸಿದ ನ್ಯಾಯಾಲಯ ಉಳಿದ ಮೊತ್ತವನ್ನು ನೀಡುವ ವರೆಗೆ ಬಸ್ ನನ್ನು ನಾಲ್ಕನೇ ಬಾರಿ ಜಪ್ತು ಪಡಿಸಿ ಶಿರಸಿ ನ್ಯಾಯಾಲಯದಲ್ಲಿ ಇರಿಸಲಾಗಿದೆ.
ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

error: Content is protected !!