BREAKING NEWS
Search

ಆಟವಾಡುತ್ತ ನದಿಗೆ ಬಿದ್ದ ಮಗು- ರಕ್ಷಣೆಗಾಗಿ ನದಿಗೆ ದುಮುಕಿದ ಐವರು ಸಾವು!

217

ಕಾರವಾರ:- ಪ್ರವಾಸಕ್ಕೆಂದು ( tour) ನದಿ ತೀರಕ್ಕೆ ತೆರಳಿದ್ದ ಒಂದೇ ಕುಟುಂಬದ ಐವರು ನದಿಯಲ್ಲಿ ಮುಳುಗಿ ಸಾವುಕಂಡ ಘಟನೆ ಉತ್ತರಕನ್ನಡ ಜಿಲ್ಲೆಯ ಶಿರಸಿಯ ಶಾಲ್ಮಲಾ‌ ನದಿಯ (shalmala river) ಭೀಮನಗುಂಡಿಯಲ್ಲಿ ಭಾನುವಾರ ನಡೆದಿದೆ.

ಮೃತರ ಭಾವಚಿತ್ತ:-

ಮೃತರು ಶಿರಸಿಯ ರಾಮನಬೈಲ್‌ ಹಾಗೂ ಕಸ್ತೂರಬಾ ನಗರ ನಿವಾಸಿಗಳಾಗಿದ್ದು ರಾಮನಬೈಲಿನ ನಿವಾಸಿಗಳಾದ ಮೌಲಾನ ಮಹಮ್ಮದ್ ಸಲೀಮ್ ಕಲೀಲ್ ರೆಹಮಾನ್ (44), ನಾದಿಯಾ ನೂರ್ ಅಹಮದ್ ಶೇಖ್ (20), ನಬಿಲ್ ನೂರ್ ಅಹಮದ್ ಶೇಖ್(22), ವಿದ್ಯಾರ್ಥಿ ಉಮರ್ ಸಿದ್ದಿಕ್ (14) ಹಾಗೂ ಕಸ್ತೂರಬಾ ನಗರದ ವಿದ್ಯಾರ್ಥಿ ಮಿಸ್ಬಾ ತಬಸುಮ್ (21) ಸಾವಿಗೀಡಾದವರಾಗಿದ್ದಾರೆ.

ಇದನ್ನೂ ಓದಿ:- Karwar:ಜನವರಿಗೂ ಮೊದಲೇ ಕಾರವಾರದ ಕಡಲತೀರಕ್ಕೆ ಕಡಲ ಆಮೆ ಆಗಮನ:ಮೊಟ್ಟೆ ರಕ್ಷಣೆ

ಮಗುವೊಂದು ಆಡುವಾಗ ನದಿಗೆ ಬಿದ್ದಿದ್ದು ಮಗು ರಕ್ಷಣೆಗಾಗಿ ಸಲೀಮ್ ಕಲೀಲ್ ನದಿಗೆ ದುಮುಕಿದ್ದು ಮಗುವನ್ನು ರಕ್ಷಣೆ ಮಾಡಿದ್ದಾರೆ. ಇದೇ ಸಂದರ್ಭದಲ್ಲಿ ಮಗು ರಕ್ಷಣೆಗೆ ಉಳಿದವರೂ ನದಿಗೆ ಇಳಿದಿದ್ದು ಈ ಸಂದರ್ಭದಲ್ಲಿ ಮಗು ರಕ್ಷಣೆ ಮಾಡಿದ ಸಲೀಮ್ ಉಳಿದವರನ್ನು ಸಹ ರಕ್ಷಣೆಗೆ ಪ್ರಯತ್ನಿಸಿದ್ದಾರೆ ಆದರೇ ನೀರಿಗಿಳಿದ ಎಲ್ಲರೂ ಮುಳಗಿ ಸಾವು ಕಂಡಿದ್ದಾರೆ.

ಸ್ಥಳಕ್ಕಾಗಮಿಸಿದ ಅಗ್ನಿಶಾಮಕ ಸಿಬ್ಬಂದಿಗಳು ಸಲೀಮ್ ಕಲೀಲ್ ರೆಹಮಾನ್,ನಾದಿಯಾ ನೂರ್ ಸೇರಿ ನಾಲ್ವರ ಮೃತ ದೇಹ ಪತ್ತೆಯಾಗಿದ್ದು ,ಇಬ್ಬರ ಮೃತದೇಹದ ಗುರುತು ಪತ್ತೆಯಾಗಬೇಕಿದ್ದು ಒಬ್ವರ ಮೃತದೇಹ ಪತ್ತೆಯಾಗಬೇಕಿದೆ.

ಘಟನೆ ಸಂಬಂಧ ಶಿರಸಿ ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಒಂದು ತಿಂಗಳ ಹಿಂದೆ ವಿವಾಹ ವಾದವಳು ಮಸಣ ಸೇರಿದಳು.

ಇನ್ನು ಐದು ಜನ ನೀರಿನಲ್ಲಿ ಸಾವು ಕಂಡವರು ಒಂದೇ ಕುಟುಂಬದವರಾಗಿದ್ದಾರೆ. ಇನ್ನು ಕಳೆದತಿಂಗಳಷ್ಟೇ ಹಸಮಣೆ ಏರಿ ಕುಟುಂಬದ ಕನಸು ಕಂಡಿದ್ದ ಶಿರಸಿಯ ನಾದಿಯಾ ನೂರ್ ಮಗು ರಕ್ಷಣೆ ಮಾಡಲು ಹೋಗಿ ಸಾವು ಕಂಡಿದ್ದು ವಿದಿಯಾಟವೇ ಸರಿ.

ಇದನ್ನೂ ಓದಿ:- ಸಚಿವರ ಕಚೇರಿಯಲ್ಲೇ ಕಳ್ಳತನ ಮಾಡಿದ ಕಳ್ಳ!
ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

error: Content is protected !!