BREAKING NEWS
Search

ಶಿರಸಿಯಲ್ಲಿ ಹುಲಿ ಪ್ರತ್ಯಕ್ಷ ವಾಯ್ತಾ?-ಮನೆಯ ಮುಂದೆಯೇ ಜಿಂಕೆ ಭೇಟೆಯಾಡಿದ್ದು ಹುಲಿಯೋ ಅಥವಾ ಚಿರತೆಯೋ?

189

ಶಿರಸಿ :- ಉತ್ತರ ಕನ್ನಡ ಜಿಲ್ಲೆಯ (uttrakannada) ಶಿರಸಿ (sirsi) ಮಳಗಾಂವ್ ಗ್ರಾಮದಲ್ಲಿ ಹುಲಿ ಕಾಣಿಸಿಕೊಂಡಿದ್ದು ಮಳಗಾಂವ್ ನ ಹನುಮಂತ ಛಾಯಾ ನಾಯ್ಕ ಎಂಬುವವರ ಹಿತ್ತಲಲ್ಲಿ ಹುಲಿ ( tiger) ಕಾಣಿಸಿಕೊಂಡು ಜಿಂಕೆ ಭೇಟೆಯಾಡಿದೆ ಎಂದು ಸ್ಥಳೀಯರು ತಿಳಿಸಿದ್ದಾರೆ.

ಹುಲಿಯ ಘರ್ಜನೆಗೆ ಮನೆಯಿಂದ ಹೊರಬಂದ ಮನೆಯವರನ್ನು ನೋಡಿ ಹುಲಿ ಭೇಟೆಯಾಡಿದ್ದ ಜಿಂಕೆಯನ್ನು ಬಿಟ್ಟು ಕಾಡಿಗೆ ಮರಳಿದೆ ಎಂದು ಸ್ಥಳೀಯರು ತಿಳಿಸಿದ್ದಾರೆ .ಇನ್ನು ವಿಷಯ ತಿಳಿದು ಎಕ್ಕುಂಬಿ ವಿಭಾಗದ ಅರಣ್ಯ ಇಲಾಖೆ ( forest department ) ಅಧಿಕಾರಿಗಳು ಸ್ಥಳಕ್ಕಾಗಮಿಸಿ ಜಿಂಕೆ ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಕೊಂಡೊಯ್ದಿದ್ದು ಗ್ರಾಮದ ಜನರಿಗೆ ಎಚ್ಚರಿಕೆಯಿಂದ ಇರಲು ಸೂಚಿಸಿದ್ದಾರೆ.

ಈ ಹಿಂದೆ ರಾಮನಗರ,ಹಳಿಯಾಳ,ಜೋಯಿಡಾ,ಯಲ್ಲಾಪುರ ಭಾಗದಲ್ಲಿ ಕಾಣಿಸಿಕೊಳ್ಳುತಿದ್ದ ಹುಲಿ ಇದೀಗ ಶಿರಸಿ ಭಾಗಕ್ಕೂ ತನ್ನ ಪರದಿಯನ್ನು ವಿಸ್ತರಿಸಿಸಿದೆಯೇ ಎಂಬ ಅನುಮಾನ ಮೂಡಿದ್ದು ಈ ಬಗ್ಗೆ ಅರಣ್ಯ ಇಲಾಖೆಗೆ ಮಾಹಿತಿ ಕೇಳಿದಾಗ ಜಿಂಕೆ ಭೇಟೆಯಾಡಿದ್ದು ಹುಲಿಯಲ್ಲ ಚಿರತೆ ಎಂದು ಸ್ಪಷ್ಟನೆ ನೀಡಿದ್ದಾರೆ. ಆದ್ರೆ ಮರಣೋತ್ತರ ಪರೀಕ್ಷೆ ನಂತರ ಹುಲಿಯೋ ಅಥವಾ ಚಿರತೆಯೋ ಎಂಬುದು ತಿಳಿದು ಬರಬೇಕಿದೆ.

ಇದನ್ನೂ ಓದಿ( ಫೋಟೋ ದ ಮೇಲೆ ಕ್ಲಿಕ್ ಮಾಡಿ)




ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

error: Content is protected !!