BREAKING NEWS
Search

Sirsi| ತಲೆ ಒಡೆದ ಸ್ಥಿತಿಯಲ್ಲಿ ಅರಣ್ಯದಲ್ಲಿ ಅಪರಿಚಿತ ವ್ಯಕ್ತಿ ಶವ ಪತ್ತೆ.

231

ಕಾರವಾರ :- ತಲೆ ಒಡೆದು ಅಪರಿಚಿತ ವ್ಯಕ್ತಿಯೊರ್ವನನ್ನು ಕೊಲೆ ಮಾಡಿದ ಘಟನೆ ಉತ್ತರ ಕನ್ನಡ ಜಿಲ್ಲೆಯ ಶಿರಸಿಯಲ್ಲಿ ನಡೆದಿದೆ.

ಶಿರಸಿ ತಾಲೂಕಿನ ಕೊರ್ಲಕಟ್ಟಾ ಮಾಳಂಜಿ ರಸ್ತೆಯ ವಡ್ಡಿನಕೊಪ್ಪ ಅರಣ್ಯ ಪ್ರದೇಶದಲ್ಲಿ ಸುಮಾರು 50 ರಿಂದ 55 ವರ್ಷ ವಯಸ್ಸಿನ ಅಪರಿಚಿತ ವ್ಯಕ್ತಿಯ ರಕ್ತ ಸಿಕ್ತ ಶವ ಪತ್ತೆಯಾಗಿದ್ದು, ತಲೆ ಒಡೆದು ಕೊಲೆ ಮಾಡಲಾಗಿದೆ ಎಂದು ಅಂದಾಜಿಸಲಾಗಿದೆ.

ದೇಹದ ಮೇಲೆ ಎರಡು ಗೋಣಿ ಚೀಲ ಹಾಕಿ ಅದರ ಮೇಲೆ ಸೊಪ್ಪು ಹಾಕಿರುವುದು ಕಂಡು ಬಂದಿದ್ದು, ಗೋಣಿ ಚೀಲದಲ್ಲಿ ತುಂಬಿ ಶವವನ್ನು ರಸ್ತೆಯ ಪಕ್ಕದಿಂದ ಎಳೆದು ತಂದು ಕಾಡಿನಲ್ಲಿ ಹಾಕಲಾಗಿದೆ ಎಂದು ಅಂದಾಜಿಸಲಾಗಿದೆ. ಶವದ ಎಡ ಗಾಲಿನ ಎರಡನೇ ಬೆರಳಿಗೆ ಬೆಳ್ಳಿ ನಮೂನೆ ಉಂಗುರು ಹಾಕಿರುವುದು ಕಂಡು ಬಂದಿದೆ. ಗುರವಾರ ಮದ್ಯರಾತ್ರಿ ಸುಮಾರಿಗೆ ಯಾರೂ ಕೊಲೆಮಾಡಿ ಹೀಗೆ ಎಸೆದು ಹೋಗಿರಬಹುದೆಂದು ಪ್ರಾಥಮಿಕ ತನಿಖೆಯಲ್ಲಿ ಅಂದಾಜಿಸಲಾಗಿದೆ.

ಶುಕ್ರವಾರ ಬೆಳಿಗ್ಗೆ ಹಾಲು ಹಾಕುವ ವ್ಯಕ್ತಿಗೆ ಕೊಲೆಯಾದ ಘಟನೆ ತಿಳಿದು ಪೋಲಿಸರಿಗೆ ವಿಷಯ ತಿಳಿಸಿದ್ದಾರೆ. ತಕ್ಷಣ ಪೊಲೀಸರು ಸ್ಥಳಕ್ಕೆ ಧಾವಿಸಿ, ಪರಿಶೀಲನೆ ನಡೆಸಿದ್ದಾರೆ.




ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

error: Content is protected !!