Honnavara ಪ್ರವಾಸಿ ಬೋಟ್ ಗಳಿಗೆ ಸಿಗದ ಅನುಮತಿ: ಜಿಲ್ಲಾಧಿಕಾರಿ ಕಚೇರಿ ಕೋಣೆಯ ಹಿಂದೆ ನೋಟಿನ ಚರ್ಚೆ?

161

ಕಾರವಾರ :- ಉತ್ತರ ಕನ್ನಡ ಜಿಲ್ಲೆ ಪ್ರವಾಸೋಧ್ಯಮವನ್ನು ಅವಲಂಭಿಸಿದೆ.ಅದ್ರಲ್ಲೂ ಕರಾವಳಿ ಭಾಗದಲ್ಲಿ ಪ್ರವಾಸೋಧ್ಯಮಕ್ಕೆ ವಿಫಲ ಅವಕಾಶಗಳಿದ್ದು ಕರಾವಳಿ ಭಾಗದ ಕರಾವಳಿ ತೀರ ಪ್ರದೇಶ ನದಿ ಪಾತ್ರದ ಪ್ರದೇಶದ ಸೌಂದರ್ಯ ಪ್ರವಾಸಿಗರನ್ನು( tourist) ಕೈಬೀಸಿ ಕರೆಯುತ್ತದೆ.

ಜಿಲ್ಲೆಯಲ್ಲಿ ಜಿಲ್ಲಾಧಿಕಾರಿ ಅಧ್ಯಕ್ಷತೆಯಲ್ಲಿ ಪ್ರವಾಸೋದ್ಯಮ ಅಭಿವೃದ್ಧಿ ಸಮಿತಿ ಸಹ ಇದೆ.ಆದ್ರೆ ಅಭಿವೃದ್ಧಿ ಮಾತ್ರ ಶೂನ್ಯವಾಗಿದೆ.

ಹೊನ್ನಾವರದ ಶರಾವತಿ ಹಿನ್ನೀರಿನ ಪ್ರದೇಶವಾದ ತಾರಿಬಾಗುಲು, ಚರ್ಚ ರೋಡ್ ಭಾಗದಲ್ಲಿ ಶರಾವತಿ ಹಿನ್ನೀರಿನ ಸೌಂದರ್ಯ ಸವಿಯಲು ಇದೀಗ ಪ್ರವಾಸಿಗರು ಹೆಚ್ಚಿನದ್ದಾಗಿ ಬರುತಿದ್ದಾರೆ. ಫ್ರೀ ವೆಂಟಿಂಗ್ ಸೇರಿದಂತೆ ಪರಿಸರ ಪ್ರವಾಸೋದ್ಯಮ ಈ ಭಾಗದಲ್ಲಿ ಅಭಿವೃದ್ಧಿ ಕಾಣುತಿದ್ದು ಇದನ್ನು ನಂಬಿ ಸ್ಥಳೀಯರು ಬದುಕು ಕಟ್ಟಿಕೊಂಡಿದ್ದಾರೆ.

ಶರಾವತಿ ಬ್ಯಾಕ್ ವಾಟರ್ ನಲ್ಲಿ ಪ್ರವಾಸೋದ್ಯಮ ನಂಬಿದ 72 ಬೋಟ್ ಗಳು ಕಾರ್ಯನಿರ್ವಹಿಸುತ್ತಿವೆ.
5/09/2023 ರಲ್ಲಿ ಈ ಭಾಗದಲ್ಲಿ ಪ್ರವಾಸೋದ್ಯಮ ಚಟುವಟಿಕೆ ನಡೆಸಲು 63 ಬೋಟುಗಳಿಗೆ ಪ್ರವಾಸೋಧ್ಯಮ ಇಲಾಖೆ ಅನುಮೋದನೆ ಸಿಕ್ಕಿದೆ. ಇನ್ನು 9 ಬೋಟುಗಳು ( boat) ಅನುಮತಿ ಪಡೆದಿಲ್ಲ.

ಹಣ ಕಟ್ಟಿದ ರಶೀದಿ.

ಆದರೇ ಇದೀಗ ಈ ಬೋಟುಗಳು ಕಾರ್ಯನಿರ್ವಹಿಸಲು ಪ್ರವಾಸೋದ್ಯಮ ಇಲಾಖೆ ಹಾಗೂ ಜಿಲ್ಲಾಡಳಿತ ತಾರತಮ್ಯ ತೋರುತ್ತಿರುವ ಬಗ್ಗೆ ದೂರುಗಳು ಕೇಳಿಬಂದಿದೆ.

ಮೊದಲು 9 ಬೋಟುಗಳಿಗೆ ಅನುಮತಿ ನೀಡಿ ನಂತರ 5 ರಿಂದ 6 ಜನ ಬೋಟ್ ಮಾಲೀಕರನ್ನು ಪ್ರತ್ಯೇಕವಾಗಿ ಕರೆದು ನಂತರ ಅನುಮತಿ ನೀಡಲಾಗುತ್ತಿದೆ. ಇಲ್ಲಿನ ಬೋಟ್ ಮಾಲೀಕರು ಲಕ್ಷಾಂತರ ರುಪಾಯಿ ವ್ಯಹಿಸಿ ಬೋಟ್ ಕರೀದಿಸಿ ಪ್ರವಾಸೋದ್ಯಮ ಇಲಾಖೆಯ ಮಾನದಂಡದಂತೆ ಪ್ರತಿ ವರ್ಷ 30 ಸಾವಿರಕ್ಕೂ ಹೆಚ್ಚು ಹಣ ವ್ಯಯಿಸಿ ಸಾರಂಗ ಸರ್ಟಿಫಿಕೇಟ್ , ಫಸ್ಟೆಡ್ ಸರ್ಟಿಫಿಕೇಟ್ ,ಬೋಟು ಫಿಟ್ ನೆಸ್ ಸರ್ಟಿಫಿಕೇಟ್ , 11 ಸಾವಿರ ಇನ್ಸುರೆನ್ಸ್ ಕಟ್ಟುತ್ತಾರೆ. ನಿಯಮ ಪ್ರಕಾರ
5+1 ಅಥವಾ 6+1 ಸಂಖ್ಯೆಯ ಬೋಟಿಗೆ ಅನುಮತಿ‌ ನೀಡಲಾಗುತ್ತದೆ.

ಆದ್ರೆ ಏಕಕಾಲದಲ್ಲಿ ಸಲ್ಲಿಸಿದ ಅರ್ಜಿಗಳಿಗೆ ಅನುಮತಿ ನೀಡಿದರೂ ಬೋಟ್ ಮಾಲೀಕರನ್ನು ಪ್ರತ್ಯೇಕ ವಾಗಿ ಪ್ರವಾಸೋಧ್ಯಮ ಇಲಾಖೆಗೆ (tourism department )ಕರೆಯಿಸಿ ಜಿಲ್ಲಾಧಿಕಾರಿಯನ್ನು ಭೇಟಿಯಾಗುವಂತೆ ಹೇಳಲಾಗುತ್ತಿದೆ. ನಂತರ ವಷ್ಟೇ ಮಾತೂಕತೆ ನಡೆಸಿ ತಮಗೆ ಬೇಕಾದವರಿಗೆ ಮಾತ್ರ ಅನುಮತಿ ನೀಡಲಾಗುತ್ತಿದೆ ಎಂದು ಅರ್ಜಿ ಸಲ್ಲಿಸಿದ ಬೋಟ್ ಮಾಲೀಕರು ದೂರಿದ್ದಾರೆ.

ಎಲ್ಲಾ ನಿಯಮ ಪಾಲನೆ ಮಾಡಿದ್ದರೂ ಕೊಠಡಿಗೆ ಕರೆದು ಏನು ಚರ್ಚೆ ನಡೆಸಲಾಗುತ್ತದೆ ಎಂಬುದು ಮಾತ್ರ ಗೌಫ್ಯವಾಗಿದೆ. ಜಿಲ್ಲಾಧಿಕಾರಿ ಕಚೇರಿಯ ಫೈಲ್ ಗಳ ಹಿಂದೆ ನೋಟು ಮಾತನಾಡುತ್ತದೆಯೋ ? ಹಣ ಕೊಟ್ಟರೇ ಮಾತ್ರ ಅನುಮತಿ ಸಿಗುತ್ತದೆಯೋ? ಎಂಬ ಅನುಮಾನಗಳು ಇದೀಗ ಮೂಡತೊಡಗಿದ್ದು , ಜಿಲ್ಲಾಧಿಕಾರಿ ಕಚೇರಿ ಮೂಲಗಳು ಜಿಲ್ಲೆಯ ಪ್ರವಾಸೋದ್ಯಮ ಹೆಸರಲ್ಲಿ ಗಂಟು ದೋಚಲು ನಿಂತಿದೆಯೇ ? ಎಂಬ ಅನುಮಾನ ಮೂಡಿಸುವಂತಾಗಿದೆ. ಒಟ್ಟಿನಲ್ಲಿ ಲಕ್ಷಾಂತರ ಹಣ ವ್ಯಯಿಸಿ ಅನುಮತಿ ಪತ್ರ ಸಿಗದೇ ಬೋಟ್ ಮಾಲೀಕರ ಜೊತೆ ಇದನ್ನು ನಂಬಿದವರು ಸಹ ನಷ್ಟ ಅನುಭವಿಸುವಂತಾಗಿದೆ.
ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

error: Content is protected !!