ಕಾರವಾರ :- ಶನಿವಾರ ,ಭಾನುವಾರ ಬಂದ್ರೆ ಸಾಕು ಉತ್ತರ ಕನ್ನಡ ಜಿಲ್ಲೆಯ ಗೋಕರ್ಣ ಮುರುಡೇಶ್ವರ ಸೇರಿದಂತೆ ಕಡಲ ತೀರಕ್ಕೆ ಪ್ರವಾಸಿಗರು ಮುಗಿ ಬೀಳುತ್ತಾರೆ.
ಕಡಲಿನ ನೀರಿನಲ್ಲಿ ಈಗ ಮೋಜು ಮಸ್ತಿಯಲ್ಲಿ ತೊಡಗುವ ಪ್ರವಾಸಿಗರಿಗೆ ಜಲ್ಲಿ ಫಿಶ್ ಕಾಟ ಪ್ರಾರಂಭವಾಗಿದೆ.

ಗೋಕರ್ಣ ಮುಖ್ಯ ಸಮುದ್ರ ತೀರದಲ್ಲಿ ಜೆಲ್ಲಿ ಫಿಶ್ ಹಾವಳಿ ಹೆಚ್ಚಾಗಿದೆ. ಗುರುವಾರ ಈಜಲು ಹೋದ ನೂತನ ಗ್ರಾಮ ಪಂಚಾಯಿತಿ ಸದಸ್ಯರೊಬ್ಬರು ಜೆಲ್ಲಿ ಫಿಶ್ ತಾಗಿ ಅಲರ್ಜಿಯಿಂದ (ತುರಿಕೆ) ತೊಂದರೆಗೀಡಾಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದಾರೆ.
ಇವರ ಜೊತೆ ಆರು ಜನ ಪ್ರವಾಸಿಗರು ಸಹ ಚಿಕಿತ್ಸೆ ಪಡೆದಿದ್ದಾರೆ.

ಇನ್ನು ಕಡಲ ತೀರ ಭಾಗದಲ್ಲಿ ಈಗ ಹೇರಳವಾಗಿ ಜಲ್ಲಿ ಫಿಶ್ ಗಳು ಸಿಗುತ್ತಿದ್ದು ಕೆಲವು ವಿಷ ಪೂರಿತ ಜಲ್ಲಿ ಫಿಷ್ ಗಳು ಕಡಲ ತಡಿಯಲ್ಲಿ ಬಂದು ಬೀಳುತ್ತಿದೆ. ಹೀಗಾಗಿ ಪ್ರವಾಸಿಗರು ನೀರಿಗಿಳಿಯುತಿದ್ದಂತೆ ಜಲ್ಲಿ ಫಿಶ್ ಗಳು ದೇಹಕ್ಕೆ ಅಂಟಿಕೊಂಡು ಕಚ್ಚುತ್ತವೆ.
ಇದರಿಂದಾಗಿ ದೇಹದಲ್ಲಿ ತುರಿಕೆ,ಅಲರ್ಜಿಗಳು ಆಗುತಿದ್ದು ಕೆಲವರು ನಿತ್ರಾಣವಾಗುವಂತೆ ಸಹ ಘಟನೆ ಜರುಗುತ್ತಿದೆ.
ಸದ್ಯ ಕರಾವಳಿ ಭಾಗದ ಮುರುಡೇಶ್ವರ ಹಾಗೂ ಗೋಕರ್ಣ ಭಾಗದಲ್ಲಿ ಈ ರೀತಿ ಪ್ರವಾಸಿಗರಿಗೆ ಅನುಭವ ಆಗಿದ್ದು ಈ ಭಾಗದಲ್ಲಿ ತೆರಳುವವರು ಎಚ್ಚರದಿಂದ ಇರಿ.