ಕಾರವಾರ- ಸಂತೆ,ಮೀನುಮಾರುಕಟ್ಟೆ ಬಂದ್ !ವಿವರ ನೋಡಿ

980

ಕಾರವಾರ :- ವಾರದ ಕರ್ಪೂ ಶನಿವಾರ ಮತ್ತು ಭಾನುವಾರ ಇರುವುದರಿಂದ ಕಾರವಾರದಲ್ಲಿ
ಭಾನುವಾರದ ಸಂತೆಯನ್ನು ಸೋಮವಾರಕ್ಕೆ (ಎಂ.ಜಿ.ರಸ್ತೆ ಹೊರತುಪಡಿಸಿ) ಮುಂದೂಡಲಾಗಿತ್ತು. ಆದರೆ ಕೋವಿಡ್-19 ಪ್ರಕರಣಗಳು ತೀವ್ರವಾಗಿ ಹೆಚ್ಚಾಗುತ್ತಿರುವುದರಿಂದ ಮುಂಜಾಗ್ರತಾ ಕ್ರಮವಾಗಿ ಸೋಮವಾರದ ಸಂತೆಯನ್ನೂ ಸಹ ರದ್ದುಪಡಿಸಲಾಗಿದೆ.

ಅದರಂತೆ ಮೀನು ಮಾರುಕಟ್ಟೆಯನ್ನು ಒಂದು ವಾರದ ಮಟ್ಟಿಗೆ ಬಂದ್ ಮಾಡಲು ನಗರಸಭೆ ಆಡಳಿತ ನಿರ್ಧರಿಸಿದೆ. ಮೀನುಗಾರರು ನಗರದ ಹೊರವಲಯದ ಪ್ರದೇಶದಲ್ಲಿ ಕೋವಿಡ್-19 ನಿಯಮದ ಪಾಲನೆಯೊಂದಿಗೆ ವ್ಯಾಪಾರ ಮಾಡಬಹುದಾಗಿದೆ ಎಂದು ನಗರಸಭಾ ಆಯುಕ್ತ ಆರ್.ಪಿ ನಾಯಕ್ ಪ್ರಕಟಣೆಯಲ್ಲಿ ಕೋರಿದ್ದಾರೆ.

ಕಾರವಾರ ರೈಲ್ವೆ ನಿಲ್ದಾಣದಲ್ಲಿ ಕಠಿಣ ತಪಾಸಣೆ.

ಕಾರವಾರ ತಾಲೂಕಿನ ಶಿರವಾಡ ರೈಲು ನಿಲ್ದಾಣದಲಿರುವ ಕೋವಿಡ್ ತಪಾಸಣಾ ಕೇಂದ್ರಕ್ಕೆ ತಹಶೀಲ್ದಾರ್ ಹಾಗೂ ಉಪವಿಭಾಗಧಿಕಾರಿ ಜಯಲಕ್ಷ್ಮಿ ರವರ ನೇತೃತ್ವದ ತಂಡವು ಕೋವಿಡ್ ತಪಾಸಣಾ ಕೇಂದ್ರಕ್ಕೆ ಭೇಟಿ ನೀಡಿ ಕಾರ್ಯನಿರತ ಸಿಬ್ಬಂದಿಗಳಿಗೆ ಸರ್ಕಾರ ಜಾರಿಗೆ ತಂದಿರುವ ಮಾರ್ಗಸೂಚಿಗಳನ್ನು ಕಟ್ಟುನಿಟ್ಟಾಗಿ ಪಾಲಿಸುವಂತೆ ಮಾರ್ಗದರ್ಶನ ಮಾಡಿದರು. ಈ ಹಿಂದೆ ರೈಲ್ವೆ ನಿಲ್ದಾಣದಲ್ಲಿ ಸೂಕ್ತ ತಪಾಸಣೆ ಮಾಡದ ಕುರಿತು ದೂರುಗಳು ಕೇಳಿಬಂದಿತ್ತು. ಈ ಹಿನ್ನಲೆಯಲ್ಲಿ ಜಿಲ್ಲಾಧಿಕಾರಿ ಸೂಚನೆ ಮೇಲೆ ಅಧಿಕಾರಿಗಳ ತಂಡ ಭೇಟಿ ನೀಡಿ ಪರಿಶೀಲನೆ ನಡೆಸಿತು.
ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

error: Content is protected !!