ಉತ್ತರ ಕನ್ನಡ ಜಿಲ್ಲೆಯಲ್ಲಿ ಬಹುತೇಕ ತಾಲೂಕುಗಳಲ್ಲಿ ವೀಕೆಂಡ್ ಕರ್ಫ್ಯೂ ಗೆ ಬೆಂಬಲ ದೊರತಿದೆ. ಜಿಲ್ಲೆಯಲ್ಲಿ ಇಂದು ಕರ್ಫ್ಯೂ ನಿಯಮ ಉಲ್ಲಂಗಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಸ್ಥಳೀಯ ಸಂಸ್ಥೆಗಳಿಂದ ₹6900 ದಂಡ ವನ್ನು ಜನರಿಂದ ವಸೂಲಿ ಮಾಡಲಾಗಿದೆ.
ನಿಯಮ ಮೀರಿದ ಬೋಟ್ ವಶ. ದಂಡ ವಿಧಿಸಿದ ಪೊಲೀಸರು!

ವೀಕೆಂಡ್ ಕರ್ಪ್ಯೂ ಆದೇಶ ಉಲ್ಲಂಘಿಸಿ ಯಾವುದೇ ಸುರಕ್ಷತಾ ಕ್ರಮ ಅನುಸರಿಸದೇ, ಹೊನ್ನಾವರ ಶರಾವತಿ ನದಿಯಲ್ಲಿ ಬೋಟ್ ಮೂಲಕ ಪ್ರವಾಸಿಗರನ್ನು ವಿಹಾರಕ್ಕೆ ಕೊಂಡೊಯ್ಯುತ್ತಿದ್ದ ಇಬ್ಬರು ಬೋಟ್ ಮಾಲೀಕರು ಸೇರಿ ಐವರ ವಿರುದ್ಧ ಹೊನ್ನಾವರ ಪೊಲೀಸ್ ಠಾಣೆಯಲ್ಲಿ ಕೊವಿಡ್ ನಿಯಮ ಉಲ್ಲಂಘನೆ ಪ್ರಕರಣ ದಾಖಲಾಗಿದ್ದು, ಒಂದು ಬೋಟನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಹೊನ್ನಾವರ ತಾಲೂಕಿನ ಮಾವಿನಕುರ್ವಾ ನಿವಾಸಿ ಅಮ್ಯುಸ್ ತಿಮ್ಮಪ್ಪಗೌಡ, ಬೆಂಗಳೂರು ಮೂಲದ ಪಳನಿ ಚಂದ್ರನ್ ಎಸ್, ಗೌತಮ ಉಮಾಪತಿ,ಸೌಮ್ಯ ಬೆಂಗಳೂರು, ಮಾವಿನಕುರ್ವಾದ ಗಜಾನನ ಶಂಭು ಗೌಡ ಕೋವಿಡ್ ನಿಯಮ ಉಲ್ಲಂಘಿಸಿದ ಐವರು ಆರೋಪಿಗಳಾಗಿದ್ದಾರೆ. ಇವರಲ್ಲಿ ಮೂವರು ಬೆಂಗಳೂರಿನವರಾಗಿದ್ದು, ಹೊನ್ನಾವರ ಕೆಳಗಿನಪಾಳ್ಯದ ಬಿಕಾಸಿತಾರಿ ಎಂಬಲ್ಲಿ ಶರಾವತಿ ನದಿಯಲ್ಲಿ ವಿಹಾರಕ್ಕೆಂದು ಬಂದಿದ್ದರು ಎನ್ನಲಾಗಿದೆ. ಈ ವೇಳೆ ವೀರಾಂಜನೇಯ ಬೋಟ್ ಮಾಲಿಕ ಅಮ್ಯುಸ್ ತಿಮ್ಮಪ್ಪ ಗೌಡ ಹಾಗೂ ಜೈ ಭಜರಂಗಿ ಬೋಟ್‌ನ ಮಾಲೀಕ ಗಜಾನನ ಶಂಭು ಗೌಡ ಇವರು ಕೊರೋನಾ ವೀಕೆಂಡ್ ಲಾಕ್‌ಡೌನ ಆದೇಶ ಉಲ್ಲಂಘಿಸಿದ್ದಲ್ಲದೆ,ಬೋಟ್‌ನಲ್ಲಿ ಜೀವರಕ್ಷಕ ಲೈಫ್ ಜಾಕೆಟ್‌ಗಳನ್ನು ಇಟ್ಟುಕೊಳ್ಳದೇ ನಿರ್ಲಕ್ಷದ ವೆಸಗಿದ್ದಾರೆ.
ಶನಿವಾರ ಬೆಳಿಗ್ಗೆ 8.30 ರ ಸುಮಾರಿಗೆ ಮುಖಕ್ಕೆ ಮಾಸ್ಕ್ ಧರಿಸದೇ ಇದ್ದುದನ್ನು ಕಂಡು ಪೊಲೀಸರು ನಿಲ್ಲಿಸುವಂತೆ ಸೂಚನೆ ನೀಡಿದರೂ ಸಹ ನಿಲ್ಲಸದೇ ವೇಗವಾಗಿ ಚಲಾಯಿಸಿಕೊಂಡು ಪ್ರವಾಸಿಗರನ್ನು ಶರಾವತಿ ನದಿಯಲ್ಲಿ ವಿಹಾರಕ್ಕೆ ಕರೆದುಕೊಂಡು ಹೋಗಿ ಕೊರೋನಾ ಸಾಂಕ್ರಾಮಿಕ ರೋಗದ ಸರ್ಕಾರದ ವೀಕೆಂಡ್ ಲಾಕ್‌ಡೌನ್ ಆದೇಶ ಉಲ್ಲಂಘನೆ ಮಾಡಿದ್ದಾರೆ ಎಂದು ದೂರಿನಲ್ಲಿ ತಿಳಿಸಲಾಗಿದೆ. ಹೊನ್ನಾವರ ಪಿಎಸ್‌ಐ ಶಶಿಕುಮಾರ ಸಿ. ಆರ್ ಹಾಗೂ ಸಾವಿತ್ರಿ ನಾಯಕ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
ಯಾವ ತಾಲೂಕಿನಲ್ಲಿ ಹೇಗಿತ್ತು ಕರ್ಫೂ!
ಜಿಲ್ಲೆಯ





ಕಾರವಾರ,ಅಂಕೋಲ,ಕುಮಟಾ,ಹೊನ್ನಾವರ,ಭಟ್ಕಳ ,ಶಿರಸಿ,ಯಲ್ಲಾಪುರ ,ಜೋಯಿಡಾಭಾಗದಲ್ಲಿ ಕರ್ಫ್ಯೂ ಗೆ ಜನ ಸ್ಪಂದಿಸಿದ್ದಾರೆ. ಮುಂಡಗೋಡು,ದಾಂಡೇಲಿ,ಹಳಿಯಾಳದಲ್ಲಿ ಒಂದಿಷ್ಟು ವಾಹನ ಸಂಚಾರದ ಜೊತೆ ಕೆಲವು ಅಂಗಡಿ ಮುಂಗಟ್ಟುಗಳು ತೆರೆದಿದ್ದವು.
ಬಸ್ ಸಂಚಾರ ಸ್ತಬ್ದ!



ಜಿಲ್ಲೆಯಲ್ಲಿ ಬಹುತೇಕ ಎಲ್ಲಾ ಡಿಪೋ ಗಳಲ್ಲಿ ಅರ್ಧಕ್ಕಿಂತ ಹೆಚ್ಚು ಬಸ್ಸುಗಳು ಪ್ರಯಾಣಿಕರಿಲ್ಲದೇ ಸಂಚಾರ ಬಂದ್ ಮಾಡಿದ್ದವು . ಧರ್ಮಸ್ಥಳ,ಹುಬ್ಬಳ್ಳಿ, ಬೆಂಗಳೂರು,ಬೆಳಗಾವಿ ಭಾಗಕ್ಕೆ ಹೋಗುವ ಬಸ್ ಗಳು ಪ್ರಯಾಣಿಕರಿಲ್ಲದೇ ನಿಲ್ಲಿಸಲಾಗಿತ್ತು.
ಅಗತ್ಯ ವಸ್ತುಗಳಿಗೆ ಇಲ್ಲಾ ತೊಂದರೆ.
ಜಿಲ್ಲೆಯಲ್ಲಿ ಜನರಿಗೆ ಬೇಕಾದ ಅಗತ್ಯ ವಸ್ತುಗಳಿಗೆ ಯಾವುದೇ ತೊಂದರೆಗಳಾಗಲಿಲ್ಲ. ಕರ್ಫ್ಯೂ ಕಾರಣ ಕೆಲವು ವಸ್ತುಗಳ ಬೆಲೆ ಏರಿಕೆಯಾದರೆ, ಹಾಲು ಸೇರಿದಂತೆ ಕಲವು ವಸ್ತುಗಳು ಗ್ರಾಹಕರಿಗೆ ಸಿಗದೆ ಅಲ್ಪ ತೊಂದರೆಯಾದವು. ಇವುಗಳನ್ನು ಹೊರತುಪಡಿಸಿದರೆ ಕರ್ಫ್ಯೂ ನಿಂದ ಜನರಿಗೆ ದೊಡ್ಡ ಸಮಸ್ಯೆಗಳಾಗದಿರುವುದು ಕಂಡುಬಂತು.
ದೇವಸ್ಥಾನ ಕಾಲಿ ಕಾಲಿ

ಜಿಲ್ಲೆಯ ಗೋಕರ್ಣ ಮಹಾಬಲೇಶ್ವರ ದೇವಸ್ಥಾನ,ಇಡಗುಂಜಿಮಹಾಗಣಪತಿ, ಧಾರೇಶ್ವರ , ಶಿರಸಿ ಮಾರಿಕಾಂಬಾ ದೇವಸ್ಥಾನಗಳು ಸೇರಿದಂತೆ ಜಿಲ್ಲೆಯ ಬಹುತೇಕ ದೇವಸ್ಥಾನದಲ್ಲಿ ಎಂದಿನಂತೆ ಧಾರ್ಮಿಕ ಚಟುವಟಿಕೆಗಳು ಸೀಮಿತವಾಗಿ ನಡೆದಿದ್ದು ಭಕ್ತರು ಕರ್ಫ್ಯೂ ನಿಂದಾಗಿ ವಿರಳವಾಗಿದ್ದು ಹಲವು ದೆವಸ್ಥಾನಗಳು ಕಾಲಿ ಹೊಡೆದಿವೆ.