
ಭಟ್ಕಳ:- ಕಾಡುಕೋಣ ಬೇಟೆಯಾಡಿ ವಾಹನದಲ್ಲಿ ತುಂಬಿಕೊಂಡು ಹೋಗುತಿದ್ದ ಬೇಟೇಗಾರರನ್ನು ಭಟ್ಕಳದ ಅರಣ್ಯಾಧಿಕಾರಿಗಳು ಬೆನ್ನಟ್ಟಿ ವಾಹನ ಹಾಗೂ ಕಾಡುಕೋಣದ ಮಾಂಸವನ್ನು ವಶಕ್ಕೆ ಪಡೆದಿದ್ದಾರೆ.
ಘಟನೆ ಏನು?

ಇಂದು ಭಟ್ಕಳದ ರಾಷ್ಟ್ರೀಯ ಹೆದ್ದಾರಿಯಲ್ಲಿ ಚಾವರಲೆಟ್ ಕ್ಯಾಪ್ಟಿವಾ ವಾಹನದಲ್ಲಿ ಕಾಡುಕೋಣವನ್ನು ಬೇಟೆಯಾಡಿ,ವಾಹನದಲ್ಲಿ ತುಂಬಿಕೊಂಡು ಹೋಗುತಿದ್ದರು. ಈ ವೇಳೆ ಮಾಹಿತಿ ಪಡೆದ ಅರಣ್ಯ ಇಲಾಖೆ ಆರ್.ಎಫ್.ಓ ಸವಿತಾ ದೇವಾಡಿಗ ನೇತ್ರತ್ವದ ತಂಡ ಅವರನ್ನು ಬೆನ್ನಟ್ಟಿದೆ.
ಈ ವೇಳೆ ಹೆದ್ದಾರಿಯಲ್ಲಿ ಬ್ಯಾರಿಕೇಡ್ ಗುದ್ದಿ ವಾಹನದೊಂದಿಗೆ ಪರಾರಿಯಾಗಲು ಯತ್ನಸಿದ್ರು,ಆದ್ರೆ ಅದು ಆಗದಿದ್ದಾಗ ವಾಹನದಲ್ಲಿದ್ದ ಬೇಟೆಗಾರರು ಪರಾರಿಯಾಗಿದ್ದು ಕಾಣುಕೋಣದ ಮಾಂಸ ಹಾಗೂ ವಾಹನವನ್ನು ಅರಣ್ಯ ಇಲಾಖೆ ಅಧಿಕಾರಿಗಳು ವಶಕ್ಕೆ ಪಡೆದು ತನಿಖೆ ಮುಂದುವರೆಸಿದ್ದು ಹೆಚ್ಚಿನ ಮಾಹಿತಿ ಹೊರಬರಬೇಕಿದೆ.