
ಕಾರವಾರ :- ಯಲ್ಲಾಪುರದಲ್ಲಿ ವೈ.ಟಿ.ಎಸ್.ಎಸ್ ಖಾಸಗಿ ಶಾಲೆಯ 21 ವಿದ್ಯಾರ್ಥಿಗಳಿಗೆ ಹಾಗೂ ಇಬ್ಬರು ಶಿಕ್ಷಕರಿಗೆ ಕರೋನಾ ಪಾಸಿಟಿವ್ ಇಂದು ದೃಡ ಪಟ್ಟಿದೆ.
ಕೆಲವು ದಿನದ ಹಿಂದೆ 10 ನೇ ತರಗತಿಯ ಓರ್ವ ವಿದ್ಯಾರ್ಥಿಗೆ ಕರೋನಾ ದೃಡಪಟ್ಟಿತ್ತು ಇದರ ಬೆನ್ನಲ್ಲೆ ಆತನ ಸಂಪರ್ಕ ಹೊಂದಿದ್ದ 123 ವಿದ್ಯಾರ್ಥಿಗಳ ಗಂಟಲು ದ್ರವ ಪರೀಕ್ಷೆ ಗೆ ಕಳುಹಿಸಿಕೊಡಲಾಗಿತ್ತು . ನಂತರ ಇಂದು 21 ವಿದ್ಯಾರ್ಥಿಗಳಿಗೆ ಹಾಗೂ ಇಬ್ಬರು ಶಿಕ್ಷಕರಿಗೆ ಕರೋನಾ ಪಾಸಿಟಿವ್ ವರದಿಯಾಗಿದೆ.
ಇನ್ನು ಇವರ ಪ್ರಾಥಮಿಕ ಹಾಗೂ ದ್ವಿತೀಯ ಸಂಪರ್ಕ ಹೊಂದಿದ ವಿದ್ಯಾರ್ಥಿಗಳ ಗಂಟಲು ದ್ರವ ಪರೀಕ್ಷೆಯನ್ನು ಮಂಗಳವಾರ ಮಾಡಲಾಗುವುದು ಎಂದು ಕನ್ನಡವಾಣಿಗೆ ತಹಶೀಲ್ದಾರ್ ಶ್ರೀಕೃಷ್ಣ ಕಾಮಕರ್ ಮಾಹಿತಿ ನೀಡಿದ್ದು ಇದರ ಬೆನ್ನಲ್ಲೇ ಶಾಲೆಯನ್ನು ಸೀಲ್ ಡೌನ್ ಮಾಡುವ ಕುರಿತು ಜಿಲ್ಲಾಧಿಕಾರಿಯೊಂದಿಗೆ ಚರ್ಚಿಸಿ ಅಂತಿಮ ನಿರ್ಧಾರ ತೆಗೆದುಕೊಳ್ಳಲಾಗುವುದು ಎಂದಿದ್ದಾರೆ.
ಜಿಲ್ಲೆಯಲ್ಲಿ ಇದೇ ಮೊದಲಬಾರಿಗೆ ಇಷ್ಟು ದೊಡ್ಡ ಮಟ್ಟದಲ್ಲಿ ವಿದ್ಯಾರ್ಥಿಗಳಿಗೆ ಕರೋನಾ ಪಾಸಿಟಿವ್ ಬಂದಿರುವುದು ಇದೇ ಮೊದಲಬಾರಿಯಾಗಿದ್ದು ಈಗ ಪೋಷಕರಲ್ಲಿ ಭಯ ಹುಟ್ಟಿಸಿದೆ.